More

    ಕರೊನಾ ವೈರಸ್​ ಸೋಂಕು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

    ನ್ಯೂಯಾರ್ಕ್​: ವಿಶ್ವವ್ಯಾಪಿ ಮಾರಕವಾಗಿ ವ್ಯಾಪಿಸಿರುವ ಕರೊನಾ ವೈರಸ್​ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗ ಎಂದು ಘೋಷಿಸೆ.

    ಈ ವೈರಸ್​ನಿಂದ ಉಂಟಾಗುವ ಜ್ವರ ಇತರ ಜ್ವರಗಳಿಗಿಂತ ಶೇ.10 ಪಟ್ಟು ಮಾರಕವಾಗಿರುವುದು ಹಾಗೂ ಗಾಳಿಯಲ್ಲಿ ಹರಡುವುದರಿಂದ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.

    ವಿಶ್ವದಲ್ಲಿ ಈಗಾಗಲೇ ಕರೊನಾ ಮಾರಿಗೆ 4,624 ಮಂದಿ ಮೃತಪಟ್ಟಿದ್ದಾರೆ. 1,26,000 ಮಂದಿಗೆ ಸೋಂಕು ಹರಡಿದೆ.

    ಇಟಲಿಗೆ ಭಾರತೀಯ ವೈದ್ಯರ ತಂಡ: ಇಟಲಿಯಲ್ಲಿ ಕರೊನಾ ವೈರಸ್​ ಸೋಂಕಿಗೆ ಒಳಗಾಗಿರುವ ಭಾರತೀಯರ ತಪಾಸಣೆಗೆ ಕೇಂದ್ರ ಸರ್ಕಾರ ವೈದ್ಯರ ತಂಡವನ್ನು ಇಟಲಿಗೆ ಕಳುಹಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್​ ಹೇಳಿದರು.

    ವೈದ್ಯರು ಇಟಲಿಗೆ ತೆರಳಿ ಭಾರತೀಯರನ್ನು ತಪಾಸಣೆಗೆ ಒಳಪಡಿಸಿ ಅವರಿಗೆ ಚಿಕಿತ್ಸೆ ನೀಡಲಿದ್ದಾರೆ. ಇಟಲಿ ಸರ್ಕಾರದಿಂದ ಸೋಂಕು ತಗುಲಿರುವ ಭಾರತೀಯರ ಮಾಹಿತಿ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
    ರಾಷ್ಟ್ರಕ್ಕೆ ವಿದೇಶಿಗರ ಪ್ರವೇಶವನ್ನು ತಡೆಯಲಾಗಿದೆ. ಇದಕ್ಕಾಗಿ ತಾತ್ಕಾಲಿಕವಾಗಿ ವೀಸಾಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    VIDEO| ಮಾಸ್ಕ್ ಸಿಕ್ತಿಲ್ವಾ ಡೋಂಟ್ ವರಿ, ಆನಂದ್ ಮಹಿಂದ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೇ ಮಾಡ್ಕೊಳ್ಳಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts