More

    ಐಪಿಎಲ್ ಹರಾಜಿಗೂ ಮೊದಲು ಹಾಗೂ ಹರಾಜಿನ ಬಳಿಕವೂ ಶತಕ ಸಿಡಿಸಿದ ಅನ್ ಸೋಲ್ಡ್ ಬ್ಯಾಟರ್: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೇರಿದರು ಖರೀದಿಗೆ ಫ್ರಾಂಚೈಸಿಗಳ ನಿರಾಸಕ್ತಿ!

    ಟ್ರಿನಿಡಾಡ್: ಆರಂಭಿಕ ಫಿಲ್ ಸಾಲ್ಟ್ (119 ರನ್, 57 ಎಸೆತ, 7 ಬೌಂಡರಿ, 10 ಸಿಕ್ಸರ್) ಸಿಡಿಸಿದ ಸತತ 2ನೇ ಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ 4ನೇ ಟಿ20 ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ಎದುರು ರನ್ ಪ್ರವಾಹ ಹರಿಸಿ 75 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಜೋಸ್ ಬಟ್ಲರ್ ಬಳಗ 5 ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು, ಅಂತಿಮ ಪಂದ್ಯ ಶುಕ್ರವಾರ ನಡೆಯಲಿದೆ.

    ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಂಗ್ಲರು, ಫಿಲ್ ಸಾಲ್ಟ್-ಜೋಸ್ ಬಟ್ಲರ್ (55) ಒದಗಿಸಿದ ಆರಂಭದಿಂದ 3 ವಿಕೆಟ್‌ಗೆ 267 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ 5ನೇ ಗರಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ಆಂಡ್ರೆ ರಸ್ಸೆಲ್ (51 ರನ್, 25 ಎಸೆತ, 3 ಬೌಂಡರಿ, 5 ಸಿಕ್ಸರ್) ಪ್ರತಿರೋಧದ ನಡುವೆಯೂ, ವಿಂಡೀಸ್ 15.3 ಓವರ್‌ಗಳಲ್ಲಿ 192 ರನ್‌ಗಳಿಗೆ ಸರ್ವಪತನ ಕಂಡಿತು.

    ಇಂಗ್ಲೆಂಡ್: 3 ವಿಕೆಟ್‌ಗೆ 267 (ಫಿಲ್ ಸಾಲ್ಟ್ 119, ಬಟ್ಲರ್ 55, ವಿಲ್ ಜಾಕ್ಸ್ 24, ಲಿವಿಂಗ್‌ಸ್ಟೋನ್ 54, ಅಕೀಲ್ ಹೊಸೈನ್ 36ಕ್ಕೆ1). ವೆಸ್ಟ್ ಇಂಡೀಸ್: 15.3 ಓವರ್‌ಗಳಲ್ಲಿ 192 (ಮೇಯರ್ಸ್‌ 12, ಪೂರನ್ 39, ರುದರ್‌ಪೋರ್ಡ್ 36, ರಸ್ಸೆಲ್ 51, ರೀಸ್ ಟಾಪ್ಲೆ 37ಕ್ಕೆ3, ಸ್ಯಾಮ್ ಕರ‌್ರನ್ 25ಕ್ಕೆ2). ಪಂದ್ಯಶ್ರೇಷ್ಠ: ಫಿಲ್ ಸಾಲ್ಟ್.

    ಸಾಲ್ಟ್ ಐಪಿಎಲ್‌ನಲ್ಲಿ ಅನ್‌ಸೋಲ್ಡ್!
    ಐಪಿಎಲ್ ಹರಾಜಿಗೂ ಮುನ್ನ ಶತಕ ಸಿಡಿಸಿದ್ದ ಸಾಲ್ಟ್, ಹರಾಜಿನ ಬಳಿಕವೂ ಶತಕ ಸಿಡಿಸಿದರು. ಕಳೆದ ಬಾರಿ ₹1.5 ಕೋಟಿ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದ ಸಾಲ್ಟ್ ಈ ಬಾರಿ ಅನ್‌ಸೋಲ್ಡ್ ಆದರು. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಟಿ20 ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಆದರೆ ಮಿನಿ ಹರಾಜಿನಲ್ಲಿ ಯಾವ ತಂಡವೂ ಅವರ ಖರೀದಿಗೆ ಆಸಕ್ತಿ ತೋರಲಿಲ್ಲ. 2023ರಲ್ಲಿ ಸನ್‌ರೈಸರ್ಸ್‌ ಪರ ರಶೀದ್ ಆಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts