More

    ವಿಶ್ವ ಕ್ಯಾನ್ಸರ್​​ ದಿನ 2023: ಈ 5 ಆಹಾರಗಳನ್ನು ನೀವು ಪ್ರತಿನಿತ್ಯ ಸೇವಿಸುತ್ತಿದ್ರೆ ಇಂದೇ ನಿಲ್ಲಿಸಿ….

    ಇಂದು ವಿಶ್ವ ಕ್ಯಾನ್ಸರ್​ ದಿನ. ವರ್ಷಕ್ಕೆ ಲಕ್ಷಾಂತರ ಮಂದಿ ಮಾರಕ ಕಾಯಿಲೆ ಕ್ಯಾನ್ಸರ್​ನಿಂದಲೇ ಮೃತಪಡುತ್ತಾರೆ ಎಂಬುದು ಆಘಾತಕಾರಿ ಸಂಗತಿ. ನೀವು “ಊಟಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆ ಮಾತನ್ನು ಕೇಳಿರಬಹುದು. ಯಾರಿಗೆ ಉತ್ತಮ ಆಹಾರದ ಕಾಳಜಿ ಇರುತ್ತದೆಯೋ, ಅವರ ಆರೋಗ್ಯ ಸಹ ಉತ್ತಮವಾಗಿಯೇ ಇರುತ್ತದೆ. ಇಂದು ಸಾಕಷ್ಟು ಬಗೆಯ ಆಹಾರಗಳು ಮಾರುಕಟ್ಟೆಯಲ್ಲಿವೆ. ಆದರೆ, ಕೆಲವು ಆಹಾರಗಳು, ಅದರಲ್ಲೂ ಪ್ರತಿನಿತ್ಯ ಸೇವಿಸುವ ಆಹಾರಗಳು ನಮಗೆ ಕ್ಯಾನ್ಸರ್​ ತಂದೊಡ್ಡಬಹುದು? ಸುಮಾರು 70 ಪ್ರತಿಶತದಷ್ಟು ಕ್ಯಾನ್ಸರ್ ಪ್ರಕರಣಗಳು ಆಹಾರದಿಂದಲೇ ಎಂದು ವಿಜ್ಞಾನಿಗಳು ನಂಬುತ್ತಾರೆ. ಉಳಿದ 30 ಪ್ರತಿಶತವು ಅನುವಂಶೀಯ ಮತ್ತು ಪರಿಸರಕ್ಕೆ ಸಂಬಂಧಿಸಿದೆಯಂತೆ.

    ನೀವೇನಾದರೂ ಕಾನ್ಸರ್​ಗೆ ಕಾರಣವಾಗುವ ಈ 5 ಆಹಾರಗಳನ್ನು ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ ಬಿಡಿ. ಏಕೆಂದರೆ ಆರೋಗ್ಯಕ್ಕಿಂತ ಹೆಚ್ಚಿನ ಭಾಗ್ಯ ಮತ್ತೊಂದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗಾದರೆ, ಆ 5 ಆಹಾರಗಳು ಯಾವುವು ಅಂತೀರಾ… ಇಲ್ಲಿದೆ ನೋಡಿ ಡಿಟೇಲ್ಸ್​.

    1. ಸಂಸ್ಕರಿಸಿದ ಉಪ್ಪಿನಕಾಯಿ: ವಾಣಿಜ್ಯ ಉದ್ದೇಶದಿಂದ ತಯಾರು ಮಾಡುವ ಉಪ್ಪಿನಕಾಯಿಗೆ ನೈಟ್ರೇಟ್, ಉಪ್ಪು ಮತ್ತು ಕೃತಕ ಬಣ್ಣಗಳಂತಹ ಅನೇಕ ಬಗೆಯ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಅವುಗಳ ಅತಿಯಾದ ಬಳಕೆಯಿಂದ ಅಥವಾ ಸೇವನೆಯಿಂದ ಜೀರ್ಣ ವ್ಯವಸ್ಥೆಗೆ ತೊಂದರೆಯಾಗುತ್ತದೆ ಮತ್ತು ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್​ಗೆ ಕಾರಣವಾಗುತ್ತದೆ.

    2. ಆಲ್ಕೋಹಾಲ್​: ದೇಹದಲ್ಲಿ ಆಲ್ಕೋಹಾಲ್​ ಪ್ರಮಾಣ ಹೆಚ್ಚಾಗಿದ್ದರೆ ಲಿವರ್​ ಮತ್ತು ಕಿಡ್ನಿ ತುಸು ಹೆಚ್ಚು ಕೆಲಸವನ್ನು ಮಾಡಬೇಕಾಗುತ್ತದೆ. ಅತಿಯಾದ ಆಲ್ಕೋಹಾಲ್​ ಸೇವನೆಯು ಬಾಯಿ, ಅನ್ನನಾಳ, ಯಕೃತ್ತು, ಕರುಳು ಮತ್ತು ಗುದನಾಳದ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಇದೆ ಎಂಬುದನ್ನು ಅನೇಕ ಅಧ್ಯಯನಗಳು ತಿಳಿಸಿವೆ. ಹಾಗಾದರೆ ಎಷ್ಟು ಆಲ್ಕೋಹಾಲ್​ ಕುಡಿಯಬೇಕು ಎಂಬ ಪ್ರಶ್ನೆಗೆ ಉದ್ಭವಿಸುತ್ತದೆ. ಮಹಿಳೆಯರು ದಿನಕ್ಕೆ ಒಂದು ಚಿಕ್ಕ ಲೋಟ ಮತ್ತು ಪುರುಷರು ದಿನಕ್ಕೆ 2 ಚಿಕ್ಕ ಲೋಟದಷ್ಟು ಆಲ್ಕೋಹಾಲ್​ ಸೇವಿಸಿದರೆ ಸುರಕ್ಷಿತವಾಗಿರುತ್ತದೆ. ಅದನ್ನು ಬಿಟ್ಟು ಬಾಟಲ್​ಗಟ್ಟಲೇ ಕುಡಿದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಸಂಶೋಧನೆ ಹೇಳುತ್ತದೆ.

    3. ಸಾವಯವವಲ್ಲದ ಹಣ್ಣುಗಳು: ಬಹು ದಿನಗಳವರೆಗೆ ಕೋಲ್ಡ್ ಸ್ಟೋರೇಜ್​ನಲ್ಲಿ ಇಡುವ ಹಣ್ಣುಗಳನ್ನು ಸ್ವಚ್ಛಗೊಳಿಸಿದರೂ ಕೂಡ ರಾಸಾಯನಿಕ ಪದರ ಹಾಗೇ ಉಳಿಯುತ್ತದೆ. ಇದರಿಂದ ಕ್ಯಾನ್ಸರ್​ ಸಂಭವಿಸುತ್ತದೆ. ಸಂಗ್ರಹಿಸಿದ ಹಣ್ಣುಗಳನ್ನು ನಿರ್ದಿಷ್ಟ ಸಮಯದ ನಂತರ ನಾಶಪಡಿಸಬೇಕು.

    4. ಮೈದಾ: ಮೈದಾ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಮೈದಾ ಹಿಟ್ಟನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಅನೇಕ ಕಾರ್ಸಿನೋಜೆನಿಕ್ ಅಂಶಗಳು ಬಿಡುಗಡೆಯಾಗುತ್ತವೆ. ಇದಲ್ಲದೆ, ಮೈದಾಗೆ ಬಿಳಿ ಬಣ್ಣವನ್ನು ನೀಡಲು, ಕ್ಲೋರಿನ್ ಅನಿಲವನ್ನು ಬಳಸಲಾಗುತ್ತದೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಕ್ಯಾನ್ಸರ್​ಗೆ ಕಾರಣವಾಗಿದೆ. ಸಕ್ಕರೆ ರೋಗಿಗಳಿಗೆ ಮೈದಾ ಹಿಟ್ಟು ಹೆಚ್ಚು ಅಪಾಯಕಾರಿ. ಏಕೆಂದರೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

    5. ಆಲೂಗೆಡ್ಡೆ ಚಿಪ್ಸ್​: ಆಲೂಗೆಡ್ಡೆ ಚಿಪ್ಸ್​ನಲ್ಲಿ ಸಾಕಷ್ಟು ಉಪ್ಪು ಮತ್ತು ಪರಿಷ್ಕರಿಸಿದ ಕೊಬ್ಬು ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಇದಲ್ಲದೆ, ಚಿಪ್ಸ್​ನಲ್ಲಿ ಅಕ್ರಿಲಮೈಡ್​ ಎಂಬ ಅಂಶವಿರುತ್ತದೆ. ಅದನ್ನು ಕಾರ್ಸಿನೋಜೆನಿಕ್ ರಾಸಾಯನಿಕ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಉರಿಯಲ್ಲಿ ಬೇಯಿಸಿದ ಯಾವುದೇ ಆಹಾರದಲ್ಲಿ ಈ ರಾಸಾಯನಿಕವನ್ನು ಉತ್ಪಾದಿಸಬಹುದು. ಚಿಪ್ಸ್​ ಕೂಡ ಇದೇ ವರ್ಗದಲ್ಲಿ ಬರುತ್ತದೆ. ಈ ಅಕ್ರಿಲಮೈಡ್​ ಎಂಬ ಅಂಶ ಸಿಗರೇಟ್​ನಲ್ಲೂ ಬರುತ್ತದೆ. ಅಲ್ಲಿಗೆ ಚಿಪ್ಸ್​ ತಿನ್ನವುದು ಎಷ್ಟು ಅಪಾಯಕಾರಿ ಎಂಬುದನ್ನು ನೀವೇ ಊಹಿಸಿಕೊಳ್ಳಿ.

    ದೇಶದಲ್ಲಿ ಕ್ಯಾನ್ಸರ್ ಕಾಯಿಲೆ ಸ್ಥಿತಿಗತಿ
    * 10 ಮಂದಿಯಲ್ಲಿ ಒಬ್ಬರಿಗೆ ಕಾಯಿಲೆ ಲಕ್ಷಣ
    * 2021ರಲ್ಲಿ 2.67 ಕೋಟಿ ಪ್ರಕರಣ
    * 2025ರಲ್ಲಿ 2.98 ಕೋಟಿಗೆ ಏರುವ ಸಾಧ್ಯತೆ
    * ಪ್ರತಿವರ್ಷ 14 ಲಕ್ಷ ರೋಗಿಗಳ ಸೇರ್ಪಡೆ
    * ವಾರ್ಷಿಕ 8.5 ಲಕ್ಷ ರೋಗಿಗಳ ಸಾವು
    * ಕರ್ನಾಟಕದಲ್ಲಿ ವಾರ್ಷಿಕ 45 ಸಾವಿರ ರೋಗಿಗಳ ಸೇರ್ಪಡೆ

    ಬದಲಾದ ಜೀವನಶೈಲಿ ವಂಶವಾಹಿಯಿಂದ ಕ್ಯಾನ್ಸರ್

    ಬೀದಿ ಬೀದಿಯಲ್ಲಿ ಬೆತ್ತಲೆಯಾಗಿ ಓಡಾಡಲು ಕೋರ್ಟ್​ನಿಂದಲೇ ಅನುಮತಿ! ಈತನ ಬಗ್ಗೆ ತಿಳಿದ್ರೆ ಹುಬ್ಬೇರೋದು ಖಚಿತ

    ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆ-ಇಂಜೆಕ್ಷನ್; ಲೋಕಾಯುಕ್ತ ಭೇಟಿ ವೇಳೆ ಬಯಲಾದ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts