More

    ಈ ಬಾರಿ ವರ್ಚುವಲ್‌ನಲ್ಲಿ ನಡೆಯಲಿದೆ ವಿಶ್ವ 10ಕೆ ಬೆಂಗಳೂರು ಓಟ

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿದ್ದ ವಿಶ್ವ 10ಕೆ ಬೆಂಗಳೂರು ಓಟ ಈ ಬಾರಿ ವರ್ಚುವಲ್ ಮೂಲಕ ನಡೆಯಲಿದೆ. ಡಿಸೆಂಬರ್ 20ರಿಂದ 27ರವರೆಗೆ ವಿಶೇಷ ಟಿಸಿಎಸ್ ಇವೆಂಟ್ ಆ್ಯಪ್ ಮೂಲಕ ಜಗತ್ತಿನೆಲ್ಲೆಡೆಯ ಸ್ಪರ್ಧಿಗಳು ಈ ಓಟದಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕಾಗಿ ನವೆಂಬರ್ 30ರಿಂದ ಡಿಸೆಂಬರ್ 25ರವರೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

    ವಿಶ್ವದೆಲ್ಲೆಡೆಯ ಓಟಗಾರರು ತಮಗೆ ಅನುಕೂಲವಿರುವ ಭೌಗೋಳಿಕ ಪ್ರದೇಶದಲ್ಲಿ ಓಡುವ ಮೂಲಕ ವಿಶೇಷ ಆ್ಯಪ್‌ನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಿಗಳಿಗೆ ಇ-ಪದಕ ಮತ್ತು ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಜತೆಗೆ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳೊಂದಿಗೆ 10ಕೆ ಓಟವನ್ನು ಓಡಲು ಅವಕಾಶ ಕಲ್ಪಿಸಲಾಗುತ್ತದೆ.

    ಕಳೆದ ಮೇನಲ್ಲಿ ನಿಗದಿಯಾಗಿದ್ದ 13ನೇ ಆವೃತ್ತಿಯ ವಿಶ್ವ 10ಕೆ ಓಟ ಬಳಿಕ ನವೆಂಬರ್‌ಗೆ ಮುಂದೂಡಲ್ಪಟ್ಟಿತ್ತು. ಇದಕ್ಕೆ ಹೆಸರು ನೋಂದಾಯಿಸಿಕೊಂಡಿರುವವರಿಗೆ ವರ್ಚುವಲ್ ಓಟದಲ್ಲಿ ಪಾಲ್ಗೊಳ್ಳುವ ಅಥವಾ 2021ರ ಆವೃತ್ತಿಗೆ ಪ್ರವೇಶ ಖಾತ್ರಿ ಪಡಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

    ವಿರಾಟ್ ಕೊಹ್ಲಿಗೆ ಸೆಂಚುರಿ ಟ್ರಬಲ್! 24 ಇನಿಂಗ್ಸ್‌ಗಳಿಂದ ಸಿಡಿದಿಲ್ಲ ಶತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts