More

    ಕಾರ್ಮಿಕರು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು

    ಮೈಸೂರು: ಕೆಲಸ ಮಾಡುವ ಸ್ಥಳಗಳು ಸೇರಿದಂತೆ ಪ್ರತಿಯೊಂದು ಕಡೆಗಳಲ್ಲೂ ಕಾರ್ಮಿಕರು ಸುರಕ್ಷತೆಯ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಎನ್. ರಂಗರಾವ್ ಆ್ಯಂಡ್ ಸನ್ಸ್ ಸಂಸ್ಥೆಂು ಅಧ್ಯಕ್ಷ ಆರ್.ಗುರು ಸಲಹೆ ನೀಡಿದರು.

    ಕಾರ್ಖಾನೆಗಳು, ಬಾಂ್ಲುರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥೃ ಇಲಾಖೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ವ್ಯಾನೇಜ್‌ಮೆಂಟ್, ನಂಜನಗೂಡು ಕೈಗಾರಿಕೆಗಳ ಸಂಘ ವತಿಯಿಂದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 53ನೇ ‘ರಾಷ್ಟ್ರೀಂು ಸುರಕ್ಷತಾ ದಿನ’ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಅಸುರಕ್ಷತೆ ಮತ್ತು ಅಜಾಗರೂಕತೆಯಿಂದ ಅಪಾಯಕ್ಕೆ ತುತ್ತಾದರೆ ನೀವು ಮಾತ್ರ ಕಷ್ಟ ಅನುಭವಿಸುವುದಿಲ್ಲ, ನಿಮ್ಮ ಕುಟುಂಬ ಸಹ ಸಂಕಷ್ಟಕ್ಕೆ ಗುರಿಯಾಗುತ್ತದೆ. ಹಾಗಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

    ದ್ವಿಚಕ್ರದಲ್ಲಿ ಸಂಚರಿಸುವ ಸಂದರ್ಭ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಪ್ರತಿಯೊಬ್ಬರು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಬೇಕು. ಕೇವಲ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸುವುದು ಸರಿಯಲ್ಲ, ಸುರಕ್ಷತೆಯ ಕಾರಣಕ್ಕೆ ಹೆಲ್ಮೆಟ್ ಧರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ವೇದಿಕೆಯಲ್ಲಿ ಕಾರ್ಖಾನೆಗಳು, ಬಾಂ್ಲುರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥೃ ಇಲಾಖೆ ನಿರ್ದೇಶಕ ಕೆ.ಶ್ರೀನಿವಾಸ್, ಮೈಸೂರು ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕ ಎಚ್.ಎಸ್. ನರೇಂದ್ರಬಾಬು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ವ್ಯಾನೇಜ್‌ಮೆಂಟ್ ಅಧ್ಯಕ್ಷ ಸಿ.ವಿ. ಶ್ರೀನಿವಾಸನ್, ನಂಜನಗೂಡು ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ.ಎಸ್. ರಾಮ್‌ಪ್ರಸಾದ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts