More

    ಮೆಡಿಕಲ್ ಕಾಲೇಜು ಕಾಮಗಾರಿ ಚುರುಕು

    ಚಿಕ್ಕಮಗಳೂರು: ಜಿಲ್ಲೆಯ ಜನರ ಬಹು ನಿರೀಕ್ಷೆಯ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ದಟ್ಟವಾಗಿ ಬೆಳೆದಿದ್ದ ನೀಲಗಿರಿ ತೋಪು ತೆರವು ಮಾಡಿದ್ದು, ಭೂಮಿ ಸಮತಟ್ಟು ಮಾಡಿ ತಳಪಾಯ ಹಾಕುವ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ.

    ನಗರ ಹೊರವಲಯದ ತೇಗೂರು ಗ್ರಾಮದಲ್ಲಿ ವೈದ್ಯಕೀಯ ಕಾಲೇಜಿನ ಜಾಗದಲ್ಲೀಗ ಜೆಸಿಬಿಗಳು, ಟಿಪ್ಪರ್​ಗಳು ಗರ್ಜಿಸುತ್ತಿದ್ದು, ನಗರದಲ್ಲಿ ಇದೇ ಮೊದಲನೆಯದು ಎನ್ನಬಹುದಾದ ಬೃಹತ್ ಕಾಮಗಾರಿ ಸಲುವಾಗಿ ಗ್ರಾಮ ವಿಶೇಷವಾಗಿ ಗಮನ ಸೆಳೆಯುತ್ತಿದೆ.

    ಗ್ರಾಮದ ಸರ್ವೆ ನಂ. 138, 192 ಮತ್ತು 193ರಲ್ಲಿರುವ 30 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ನಿರ್ವಿುಸಲಾಗುತ್ತಿದೆ. ಕಾಮಗಾರಿ ನಡೆಯುವ ವೇಳೆ 400ಕ್ಕೂ ಹೆಚ್ಚು ಕಾರ್ವಿುಕ ಕುಟುಂಬಗಳು ತಂಗಲು ಅಗತ್ಯವಿರುವ ತಾತ್ಕಾಲಿಕ ಶೆಡ್​ಗಳನ್ನು ನಿರ್ವಿುಸಲಾಗಿದೆ.

    ಈಗಾಗಲೇ ತಾಂತ್ರಿಕ ಸಿಬ್ಬಂದಿ, ಕಾರ್ವಿುಕರು ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿದ್ದಾರೆ. ಜಮೀನು ಸಮತಟ್ಟಾದ ಕೂಡಲೇ ಕಾಮಗಾರಿ ಇನ್ನಷ್ಟು ವೇಗ ಪಡೆಯಲಿದೆ. 300ರಿಂದ 400 ಕಾರ್ವಿುಕರು ಆಗಮಿಸಲಿದ್ದಾರೆ.

    ಕಾಲೇಜಿನ ಮುಖ್ಯ ಕಟ್ಟಡ ಮಾತ್ರವಲ್ಲದೆ ವಿದ್ಯಾರ್ಥಿಗಳ ವಸತಿ ನಿಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿಗೃಹ ಮತ್ತಿತರ ಕಟ್ಟಡಗಳ ಕಾಮಗಾರಿಗೆ 325 ಕೋಟಿ ರೂ. ವೆಚ್ಚವಾಗಲಿದೆ. ಕಾಲೇಜಿಗೆ ಅಗತ್ಯವಿರುವ ಉಪಕರಣ, ಪೀಠೋಪಕರಣ ಖರೀದಿ ಮತ್ತಿತರ ಕಾಮಗಾರಿಗೆ 71 ಕೋಟಿ ಮತ್ತು 42.75 ಕೋಟಿ ರೂ. ಆವರ್ತ ವೆಚ್ಚ ಸೇರಿ ಒಟ್ಟು 438.75 ಕೋಟಿ ರೂ. ಬಿಡುಗಡೆಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ.

    ವೈದ್ಯಕೀಯ ಕಾಲೇಜು ಸ್ಥಾಪನೆ ಯೋಜನೆಗೆ ಸಂಬಂಧಿಸಿದಂತೆ ವಿಶೇಷಾಧಿಕಾರಿಯಾಗಿ ನೇಮಕವಾಗಿರುವ ಮೈಸೂರು ವೈದ್ಯಕೀಯ ಕಾಲೇಜಿನ ಬಯೋಲಾಜಿಕಲ್ ವಿಭಾಗದ ಪ್ರೊ. ಮೀರಾ ಮೇಲುಸ್ತುವಾರಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts