More

    ಆಸಕ್ತಿ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ

    ಹುಬ್ಬಳ್ಳಿ: ಕರ್ತವ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ಆಸಕ್ತಿ, ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಹೇಳಿದರು.

    ಶನಿವಾರ ಆಯೋಜಿಸಿದ್ದ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡ 48 ಪೇದೆಗಳ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಕೆಲಸ ಮಾಡಿದ ಒಂದು ಸಂಸ್ಥೆಯಲ್ಲಿ ಮುಂದಿನ ಪೀಳಿಗೆಗೂ ಸಹ ಅದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಗುವುದು ವಿರಳ. ಅಂತಹ ಅವಕಾಶ ನಿಮಗೆ ಲಭಿಸಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ. ಸಂಸ್ಥೆಯ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ ಎಂದರು.

    ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ರಾಜೇಶ ಹುದ್ದಾರ ಮಾತನಾಡಿ, ತರಬೇತಿಯು ಮುಂದೆ ಕರ್ತವ್ಯ ನಿರ್ವಹಣೆಯಲ್ಲಿ ಉಪಯುಕ್ತವಾಗುತ್ತದೆ. ಸಂಸ್ಥೆಯ ಶಿಸ್ತು ನಿಯಮಾವಳಿಗಳನ್ನು ರೂಢಿಸಿಕೊಂಡು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

    ತರಬೇತಿ ಅವಧಿಯಲ್ಲಿ ಉತ್ತಮ ಕರಾಸಾ ಪೇದೆ ಪ್ರಶಸ್ತಿಗೆ ಭಾಜನರಾದ ಕನಿಜಾ ಫಾತಿಮಾ ಮುಲ್ಲಾ ಅವರಿಗೆ 5 ಸಾವಿರ ರೂ. ನಗದು ಪುರಸ್ಕಾರ ಮತ್ತು ಪ್ರಶಂಸನಾ ಪತ್ರ ವಿತರಿಸಲಾಯಿತು. ತರಬೇತುದಾರ ಎಸ್.ವಿ. ಬದಿ ಅವರನ್ನು ಸನ್ಮಾನಿಸಲಾಯಿತು. ಸುನೀಲ ಪತ್ರಿ ನಿರೂಪಿಸಿದರು. ಭದ್ರತಾ ಮತ್ತು ಜಾಗೃತಾಧಿಕಾರಿ ದಶರಥ ಕೆಳಗೇರಿ ಪ್ರಾಸ್ತಾವಿಕ ಮಾತನಾಡಿದರು. ಜೆ.ಟಿ. ಕೋಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts