More

    ಕೆಲಸ ಮಾಡದ ಪಿಡಿಒ ಕಟ್ಟಿ ಹಾಕ್ತೇವೆ

    ಬೆಳಗಾವಿ: ಸರಿಯಾಗಿ ಕೆಲಸ ನಿರ್ವಹಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಕಟ್ಟಿ ಹಾಕುತ್ತೇವೆ ಎಂದು ತಾಪಂ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

    ಗುರುವಾರ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಸುನೀಲ ಅಷ್ಟೇಕರ್ ಮಾತನಾಡಿ, ಸುಳೇಬಾವಿ ಗ್ರಾಮದೇವತೆ ದೇವಸ್ಥಾನಕ್ಕೆ ತೆರಳುವ ರಸ್ತೆಯ ಸುಧಾರಣೆ ಮಾಡುವಂತೆ ಅನೇಕ ಬಾರಿ ಪಿಡಿಒ ಅವರಿಗೆ ತಿಳಿಸಿದ್ದೇನೆ. ಆದರೂ ಕೆಲಸ ಮಾಡುತ್ತಿಲ್ಲ. ಈ ಕುರಿತು ತಾಪಂ ಇಒ ಮತ್ತು ಆಡಳಿತಾಧಿಕಾರಿ ಹೇಳಿದರೂ ಕೆಲಸ ಆಗಿಲ್ಲ. ಇನ್ನೆರಡು ದಿನದಲ್ಲಿ ರಸ್ತೆ ಸುಧಾರಣೆ ಆಗದಿದ್ದರೆ ಪಿಡಿಒ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಲಹೆ ಪಡೆಯಲಿ: ಇದಕ್ಕೆ ಧ್ವನಿಗೂಡಿಸಿದ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಸದಸ್ಯರಿಲ್ಲದ ಗ್ರಾಪಂನ ಅಭಿವೃದ್ಧಿ ಅಧಿಕಾರಿಗಳು ಲಂಚ ಪಡೆದು ತಮಗೆ ಬೇಕಾದ ರೀತಿಯಲ್ಲಿ ವಸತಿ ಮನೆಗಳು, ಪ್ರವಾಹಕ್ಕೆ ಹಾನಿಯಾಗಿರುವ ಮನೆಗಳ ಪಟ್ಟಿ ತಯಾರಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರಿಗೆ ಯಾರೂ ಕೇಳುವವರು ಇಲ್ಲದಂತಾಗಿದೆ. ಹೀಗಾಗಿ ಎಲ್ಲ ಗ್ರಾಪಂ ಪಿಡಿಒಗಳು ಆಯಾ ತಾಪಂ ಸದಸ್ಯರ ಸಲಹೆ, ಸೂಚನೆ ಪಡೆದುಕೊಳ್ಳಬೇಕು. ಅಧಿಕಾರಾವಧಿ ಪೂರ್ಣಗೊಂಡ ಗ್ರಾಪಂನ ಅಭಿವೃದ್ಧಿ ಅಧಿಕಾರಿಗಳು ಪ್ರತಿಯೊಂದು ಕಾಮಗಾರಿ ತೆಗೆದುಕೊಳ್ಳುವ ಮುನ್ನ ಆಯಾ ತಾಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಅವರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ತಾಪಂ ಸದಸ್ಯ ಯಲ್ಲಪ್ಪ ಕೋಳೆಕರ್ ಮಾತನಾಡಿ, ಪಿಡಿಒಗಳು ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತಮಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಇದನ್ನು ಕೇಳಲು ಹೋದವರಿಗೆ, ‘ಏನು ಬೇಕಾದರೂ ಮಾಡಿಕೊಳ್ಳಿ’ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿ ಪಂಚಾಯಿತಿಗೆ 70-80 ಲಕ್ಷ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಯಾವುದೇ ತಾಪಂ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ ಮಾಡುತ್ತಿದ್ದಾರೆ.

    ಎಲ್ಲ ಪಿಡಿಒಗಳು ಆಯಾ ತಾಪಂ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡಬೇಕು. ಸದಸ್ಯರಿಲ್ಲದ ಪ್ರತಿ ಗ್ರಾಪಂ ಆಡಳಿತಾಧಿಕಾರಿಗಳು ತಾಪಂ ಸದಸ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಸಭೆ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಮಾಜಿ ಶಾಸಕ ಬಿ.ಐ. ಪಾಟೀಲ ಅವರಿಗೆ ಸದಸ್ಯರು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರ. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಮಾರುತಿ ಸನದಿ, ಇಒ ಮಲ್ಲಿಕಾರ್ಜುನ ಕಲಾದಗಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts