More

    ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ; 6 ಸಂಘ-ಸಂಸ್ಥೆಗಳಿಗೂ ಗೌರವ

    ಬೆಂಗಳೂರು: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ, ಹೆಣ್ಣು ಹುಟ್ಟಿದರೆ ಬಡತನದಲ್ಲಿರುವ ಕೆಲ ಕುಟುಂಬಗಳು ಹೊರೆಯಾಗಿ ಸ್ವೀಕರಿಸುತ್ತಿವೆ. ಇದು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಅನೇಕ ವರ್ಷಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶ ಸಿಗದೆ ಅನ್ಯಾಯವಾಗುತ್ತಿತ್ತು. ಗಂಡು-ಹೆಣ್ಣು ಇಬ್ಬರೂ ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ನಾಣ್ಯದಲ್ಲಿ ಎರಡೂ ಮುಖಗಳು ಚೆನ್ನಾಗಿದ್ದರೆ ಮಾತ್ರ ಅದು ಚಲಾವಣೆಯಾಗುತ್ತದೆ. ಅದರಲ್ಲಿ ಒಂದು ಮುಖ ಹಾಳಾಗಿದ್ದರೂ ಸಮಾಜದಲ್ಲಿ ಅದನ್ನು ಸ್ವೀಕರಿಸುವುದಿಲ್ಲ ಎಂದರು. ಭೂಮಿ, ಪ್ರಕೃತಿ, ನದಿ, ಗೋವುಗಳಿಗೆ ಮಾತೆ ಎಂದು ಕರೆಯುತ್ತೇವೆ.

    ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಒಂದು ಒಳ್ಳೆಯ ಸ್ಥಾನಮಾನವಿದೆ. ಹಿಂದಿನ ಕಾಲದಲ್ಲಿ ಸ್ತ್ರೀ ಪ್ರಧಾನ ಕುಟುಂಬಗಳಿದ್ದವು. ಮನುವಿನ ಕಾಲ ಬಂದಾಗ ಹೆಣ್ಣು ಮಕ್ಕಳನ್ನು ಮನೆಗೆ ಸೀಮಿತ ಮಾಡಿ ಸ್ವಾತಂತ್ರ್ಯ ಕಿತ್ತುಕೊಳ್ಳಲು ಯತ್ನಿಸಲಾಗಿತ್ತು ಎಂದು ಹೇಳಿದರು. ಶಾಸಕ ಉದಯ್ ಗರುಡಾಚಾರ್, ವಿಧಾನಪರಿಷತ್ ಸದಸ್ಯ ರಮೇಶ್​ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ನಿರ್ದೇಶಕ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

    ಸ್ತ್ರೀ ಶಕ್ತಿ ಸಂಘಗಳಿಗೆ ಪ್ರಶಸ್ತಿ

    ದಾನೇಶ್ವರಿ ಮಹಿಳಾ ಸ್ವ ಸಹಾಯ ಸಂಘ, ಶ್ರೀನಿಧಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು, ಜನನಿ ನಗರ ಸ್ತ್ರೀಶಕ್ತಿ ಸಂಘ ರಾಜ್ಯ ಮಟ್ಟದ ಪ್ರಶಸ್ತಿ ಪಡೆದರೆ, ಶ್ರೀ ಅನ್ನಪೂರ್ಣೆಶ್ವರಿ ಸ್ತ್ರೀ ಸ್ವ-ಸಹಾಯ ಸಂಘ, ಭಾಗ್ಯನಿಧಿ ಸ್ತ್ರೀಶಕ್ತಿ ಗುಂಪು, ಅರುಣೋದಯ ಸ್ತ್ರೀಶಕ್ತಿ ಸಂಘ, ಚೆನ್ನಮ್ಮ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಲಾಯಿತು.

    ಶೌರ್ಯ ಪ್ರಶಸ್ತಿ

    ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಿಸಿದ ಮಾ.ಕಫೀಲ್ ಅಹಮದ್, ಕು.ಸಖಿ ವಿ. ಉಪಾಧ್ಯೆ, ಮಾ.ವೆಂಕಟೇಶ್, ಮಾ.ಸಾತ್ವಿಕ್, ದಿವಂಗತ ಲಾವಣ್ಯ ಅವರು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಭಾಜನರಾದರು.

    ಪುರಸ್ಕೃತರು

    ಸಂಸ್ಥೆಗಳು: ಹಾರ್ಟ್ ಸೆಂಟರ್, ಮಾರ್ಗದರ್ಶಿ ಮಹಿಳಾ ಸಮಾಜ, ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ, ಶ್ರೀ ಬಗಳಾಮುಖಿ ದೇವಿ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತ, ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರ, ಮಂಜಳಾ ಫೌಂಡೇಷನ್.

    ಮಹಿಳೆಯರ ಅಭಿವೃದ್ಧಿಗಾಗಿ: ಡಾ.ರೇಖಾ ರಾಜೇಂದ್ರಕುಮಾರ್, ಕು.ವಂದನಾ ಶಾಸ್ತ್ರಿ, ಹರಿಣಿ ಸದಾಶಿವ, ಸಾವಿತ್ರಿ ಗಣೇಶ್, ರತ್ನಾ ಗಂಗಪ್ಪ ಸಂಗಟಿ, ದೀಪಾಲಿ ಎಸ್.ಗೋಟಡಕೆ, ರಾಜೇಶ್ವರಿ ರವಿ ಸರಂಗಮಠ.

    ಕಲೆ: ಕೆ.ಪಿ.ಸವಿತಾ ಗಣೇಶ್, ದಾಕ್ಷಾಯಿಣಿ, ಕಸ್ತೂರಿ, ಸಂಗೀತಾ ವಿನೋದ ದೇವದಾಸ, ಬಿ.ಎ.ಅಭಿನೇತ್ರಿ.

    ಸಾಹಿತ್ಯ: ಎ.ಸರಸಮ್ಮ, ಡಾ.ಗುರುದೇವಿ ಹಾಲೆಪ್ಪನವರ ಮಠ, ಡಾ.ಸರಸ್ವತಿ ಚಿಮ್ಮಲಗಿ.

    ಕ್ರೀಡೆ: ಎ.ಎಸ್.ನಾಗರತ್ನ, ವಿದ್ಯಾವತಿ. ಶಿಕ್ಷಣ ಕ್ಷೇತ್ರದಲ್ಲಿ ಡಾ.ಸುವರ್ಣಾ ಎಸ್.ಮಾದರ

    ಗರ್ಭಿಣಿಯರ ರ‍್ಯಾಂಪ್ ವಾಕ್

    ಹುಬ್ಬಳ್ಳಿ: ಮಹಿಳಾ ದಿನಾಚರಣೆ ನಿಮಿತ್ತ ಹೆಬಸೂರು ಆಸ್ಪತ್ರೆ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗರ್ಭಿಣಿಯರ ರ‍್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಮಿಹಿರಾ ಕಾಟವೆ ಪ್ರಥಮ, ದೀಪಾ ದಲಭಂಜನ ದ್ವಿತೀಯ ಹಾಗೂ ಅಂಬಿಕಾ ಮೇತ್ರಾಣಿ ತೃತೀಯ ಬಹುಮಾನ ಪಡೆದರು.

    ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 25 ಗರ್ಭಿಣಿಯರು ಪಾಲ್ಗೊಂಡಿದ್ದರು. ಎಸ್​ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜ್​ನ ಪ್ರಾಚಾರ್ಯು ಡಾ.ರತ್ನಮಾಲಾ ದೇಸಾಯಿ, ಸ್ತ್ರೀರೋಗ ತಜ್ಞೆ ಡಾ.ಸಬಿತಾ ಕಲ್ಯಾಣಪುರಕರ ತೀರ್ಪಗಾರರಾಗಿದ್ದರು. ಹೆಬಸೂರು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ನಾಗರೇಖಾ ಹೆಬಸೂರ, ಡಾ.ನಾರಾಯಣ ಹೆಬಸೂರ, ಡಾ.ವಿಜಯಲಕ್ಷ್ಮೀ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts