More

    ಎಲ್ಲೆಲ್ಲೂ ನಾಗರ ಪಂಚಮಿ ಸಂಭ್ರಮ: ನಾಗದೇವರಿಗೆ ಹಾಲೆರೆದ ಮಹಿಳೆಯರು

    ಯಲಬುರ್ಗಾ: ನಾಗರ ಪಂಚಮಿ ನಿಮಿತ್ತ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಮಹಿಳೆಯರು, ಮಕ್ಕಳು ನಾಗ ದೇವರಿಗೆ ಹಾಲೆರೆದು ಸಂಭ್ರಮಿಸಿದರು.

    ಮನೆಗಳಲ್ಲಿ ಉರಿದ ಅರಳು, ಎಳ್ಳು, ಶೇಂಗಾ ಉಂಡೆ, ಹೆಸರುಕಾಳು… ಹೀಗೆ ನಾನಾ ಬಗೆಯ ಸಿಹಿ ಹಾಗೂ ಖಾರದ ತಿನಿಸುಗಳನ್ನು ಮಾಡಿ ನಾಗಪ್ಪನಿಗೆ ಅರ್ಪಿಸಲಾಯಿತು. ಬಳಿಕ ಕುಟುಂಬ ವರ್ಗದವರು ಪರಸ್ಪರ ಹಂಚಿಕೊಂಡರು. ಮನೆಗಳಲ್ಲಿ ಜೋಕಾಲಿ ಕಟ್ಟಿ ಜೀಕಿ ಸಂಭ್ರಮಿಸುವುದು ಕಂಡುಬಂತು. ಪುರುಷರು ಮನರಂಜನೆಗಾಗಿ ನಿಂಬೆಹಣ್ಣಿನ ಆಟ, ಕಣ್ಣುಕಟ್ಟಿಕೊಂಡು ವಸ್ತುಗಳ ಹುಡುಕಾಟ ಸೇರಿ ಮೊದಲಾದ ಗ್ರಾಮೀಣ ಸೊಗಡಿನ ಆಟಗಳನ್ನು ಆಡಿ ಖುಷಿಪಟ್ಟರು.

    ಅಳವಂಡಿ: ಎರಡು ಕಾಡಿದ ಕರೊನಾ ನಂತರ ಪ್ರಸಕ್ತ ವರ್ಷ ನಾಗರ ಪಂಚಮಿಯನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಪಂಚಮಿ ಹಬ್ಬದ ಎರಡನೇ ದಿನವಾದ ಸೋಮವಾರ ಮಹಿಳೆಯರು ದೇವಸ್ಥಾನ, ಬನ್ನಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ನಾಗಪ್ಪನ ವಿಗ್ರಹಕ್ಕೆ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಅಪ್ಪನ ಪಾಲು, ಅವ್ವನ ಪಾಲು, ಅಣ್ಣನ ಪಾಲು… ಹೀಗೇ ಮನೆಯ ಎಲ್ಲರ ಪಾಲಿನ ಹಾಲನ್ನು ಹಾಕಿ ನೈವೇದ್ಯ ಸಲ್ಲಿಸಿದರು. ಹಬ್ಬಕ್ಕಾಗಿ ಮಹಿಳೆಯರು ಮನೆಯಲ್ಲಿ ವಾರದಿಂದ ತಯಾರಿ ನಡೆಸಿದ್ದರು. ಸಜ್ಜೆ, ಶೇಂಗಾ, ಕಡಲೆ, ಎಳ್ಳುಂಡೆ ಸೇರಿ ವಿವಿಧ ಬಗೆಯ ಸಿಹಿ ಪದಾರ್ಥಗಳನ್ನು ತಯಾರಿಸಿದ್ದರು. ಜತೆಗೆ ತರೇಹವಾರಿ ಪಲ್ಯ ತಯಾರಿಸಿ ಕುಟುಂಬದವರು ಒಟ್ಟಿಗೆ ಕುಳಿತು ಭೋಜನ ಸವಿದರು. ನಂತರ ಯುವಕರು ಮೋಜಿನ ಆಟಗಳಾದ ಗುಂಡು ಎತ್ತುವುದು, ನಿಂಬೆಹಣ್ಣು ಎಸೆಯುವುದು, ಕಣ್ಣು ಕಟ್ಟಿ ಆಟ ಆಡುವುದು, ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

    ಎಲ್ಲೆಲ್ಲೂ ನಾಗರ ಪಂಚಮಿ ಸಂಭ್ರಮ: ನಾಗದೇವರಿಗೆ ಹಾಲೆರೆದ ಮಹಿಳೆಯರು
    ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಪಂಚಮಿ ನಿಮಿತ್ತ ಮಹಿಳೆಯರು, ಮಕ್ಕಳು ನಾಗಪ್ಪನಿಗೆ ಹಾಲೆರೆದರು.
    ಎಲ್ಲೆಲ್ಲೂ ನಾಗರ ಪಂಚಮಿ ಸಂಭ್ರಮ: ನಾಗದೇವರಿಗೆ ಹಾಲೆರೆದ ಮಹಿಳೆಯರು
    ಕಾರಟಗಿಯಲ್ಲಿ ಮಹಿಳೆಯರು ನಾಗರ ಮೂರ್ತಿಗೆ ಸೋಮವಾರ ಹಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts