More

    ಮದ್ಯದಂಗಡಿ ವಿರುದ್ಧ ಬೀದಿಗಿಳಿದ ನಾರಿಯರು

    ಕಡೂರು: ಸುತ್ತಮುತ್ತಲ ಗ್ರಾಮಸ್ಥರ ವ್ಯಾಪಕ ವಿರೋಧದ ನಡುವೆಯೂ ಅಂಚೆಚೋಮನಹಳ್ಳಿ ಗೇಟ್ ಸಮೀಪದ ಜನವಸತಿ ಪ್ರದೇಶದಲ್ಲಿ ತೆರೆಯಲಾಗಿರುವ ಮದ್ಯದಂಗಡಿಯನ್ನು ಮುಚ್ಚಿಸುವಂತೆ ಆಗ್ರಹಿಸಿ ಕೆರೆಸಂತೆ ಗ್ರಾಪಂ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸೋಮವಾರ ಮದ್ಯದಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದರು.

    ಸುತ್ತಮುತ್ತಲ ಗ್ರಾಮದ ಮಹಿಳೆಯರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತೆರಳುವ ಮಾರ್ಗದಲ್ಲಿ ಮದ್ಯದಂಗಡಿಯನ್ನು ಆರಂಭಿಸಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಅಬಕಾರಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿರುವುದು ಖಂಡನೀಯ. ಮದ್ಯದಂಗಡಿ ಪರವಾನಗಿಯನ್ನು ರದ್ದುಪಡಿಸಿ, ಗ್ರಾಮದಲ್ಲಿ ಆರೋಗ್ಯಕರ ವಾತಾವರಣವನ್ನು ಅಧಿಕಾರಿಗಳು ನಿರ್ಮಿಸಿಕೊಡಬೇಕಿದೆ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
    ಕೂಲಿ ಕಾರ್ಮಿಕ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ ಕುಡಿತದ ಆಮಿಷಕ್ಕೆ ಬಲಿಯಾಗಿ, ಕುಟುಂಬದ ನಿರ್ವಹಣೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಮದ್ಯದಂಗಡಿ ತೆರವುಗೊಳಿಸಿಕೊಡಬೇಕೆಂದು ಅಂಚೆಚೋಮನಹಳ್ಳಿ, ಕೆರೆಸಂತೆ, ಬಾಪೂಜಿ ಕಾಲನಿ, ಮಲ್ಲಪ್ಪನಹಳ್ಳಿ, ಲಿಂಗ್ಲಾಪುರ, ಸಂತೆಕೆರೆಹಳ್ಳಿ, ಸೇವಾನಗರ, ನಂಜಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗದ ಮಹಿಳೆಯರು ಒತ್ತಾಯಿಸಿದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರಿಗೆ ಮನವಿ ಸಲ್ಲಿಸಿದರು.
    ಕೆರೆಸಂತೆ ಗ್ರಾಪಂ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷೆ ರೇಣುಕಮ್ಮ ಮಂಜಪ್ಪ, ಸದಸ್ಯರಾದ ನಾರಾಯಣಪ್ಪ, ಸವಿತಾ ಪ್ರಸನ್ನಕುಮಾರ್, ವಂದನಾಬಾಯಿ, ಮಹ್ಮದ್‌ನವೀದ್, ಮುಖಂಡರಾದ ಮಂಜು, ಪುಟ್ಟಪ್ಪ, ಎಲ್.ಎಂ.ಪರಮೇಶ್ವರಪ್ಪ, ಆದರ್ಶ್, ಮಲ್ಲಿಕಾರ್ಜುನ್, ಜಯಣ್ಣ, ನವೀನ್, ರವಿನಾಯ್ಕ, ಪಾಂಡು, ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts