More

    ಮಹಿಳೆಯರಿಗಿದು ಬೊಂಬಾಟ್​ ಸುದ್ದಿ: ಚಿನ್ನಾಭರಣದೊಳಗೆ ಇದು ಇದ್ರೆ ಎಷ್ಟು ಚೆನ್ನ!

    ವಾರಾಣಸಿ: ‘ಯಾಕೆ ಸುಮ್ನೆ ಜಾಸ್ತಿ ಆಭರಣ.. ಎಲ್ಲಾದ್ರೂ ಹೋದಾಗ ರಿಸ್ಕ್​ ಬೇರೆ.. ಇರೋದೇ ಸಾಕು ಸುಮ್ನಿರು..’ ಎಂದು ಚಿನ್ನ ಕೇಳಿದಾಗೆಲ್ಲ ಇಂಥದ್ದೊಂದು ಉತ್ತರ ಎದುರಿಸುವ ಮಹಿಳೆಯರಿಗೆಲ್ಲ ಇದೊಂದು ಬೊಂಬಾಟ್​ ಸುದ್ದಿ.

    ಹೌದು.. ಇನ್ನು ಚಿನ್ನಾಭರಣ ಧರಿಸುವವರಿಗೆ ಮೊದಲಿರುವಷ್ಟು ಆತಂಕ ಇರುವುದಿಲ್ಲ. ಏಕೆಂದರೆ ಆಭರಣ ಧರಿಸುವ ಖುಷಿ ಹೆಚ್ಚಿಸುವ ಜತೆಗೆ ಅದನ್ನು ಧರಿಸಿರುವವರಿಗೆ ಸುರಕ್ಷತೆ ಕೂಡ ಸಿಗಲಿದೆ. ಹಾಗೆ ಚಿನ್ನಾಭರಣದೊಳಗೆ ಅಳವಡಿಸುವಂಥ ಒಂದು ವಿಶೇಷ ಉಪಕರಣ ಕಂಡುಹಿಡಿಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಈ ವಿಶೇಷ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.

    ವಾರಾಣಸಿಯ ಶ್ಯಾಮ್​ ಚೌರಾಸಿಯಾ ಹಾಗೂ ದೆಹಲಿಯ ರಚನಾ ರಾಜೇಂದ್ರನ್​ ಇಬ್ಬರೂ ಜತೆಯಾಗಿ ಈ ಉಪಕರಣವನ್ನು ವಿನ್ಯಾಸ ಮಾಡಿದ್ದಾರೆ. ಇದು ಮಹಿಳೆಯರನ್ನು ಲೈಂಗಿಕ ಶೋಷಣೆ, ಅತ್ಯಾಚಾರ, ಕಳ್ಳತನ ಪ್ರಕರಣಗಳಿಂದ ರಕ್ಷಿಸಿ ಸುರಕ್ಷೆ ಒದಗಿಸಲಿದೆ.

    ಆಭರಣದ ಒಳಗೆ ಅಳವಡಿಸುವಂಥ ಈ ಸಾಧನಕ್ಕೆ ಬ್ಲೂಟೂಥ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇರುತ್ತದೆ. ಮಹಿಳೆ ಎಲ್ಲಾದರೂ ತೊಂದರೆಗೆ ಸಿಲುಕಿದಾಗ ಆಭರಣದಲ್ಲಿರುವ ಬಟನ್​ ಒಂದನ್ನು ಪ್ರೆಸ್ ಮಾಡಿದರೆ ಸಾಕು, ತಕ್ಷಣ ಸಂಬಂಧಿಕರು ಹಾಗೂ ಪೊಲೀಸ್​ ಸ್ಟೇಷನ್​ಗೆ ಮಹಿಳೆ ಇರುವ ಲೊಕೇಷನ್​ ಮಾಹಿತಿ ರವಾನೆಯಾಗುತ್ತದೆ. ಆ ಮೂಲಕ ಮಹಿಳೆ ರಕ್ಷಿಸಲ್ಪಡುತ್ತಾಳೆ. ಒಂದು ವೇಳೆ ಯಾರಾದರೂ ಆಭರಣವನ್ನು ಕದ್ದುಕೊಂಡು ಓಡಿ ಹೋದರೂ ಅದರ ಲೊಕೇಷನ್​ ಮಾಹಿತಿ ಕೂಡ ಸಿಗುತ್ತದೆ ಎಂದು ವಿವರಿಸುತ್ತಾರೆ ರಚನಾ.

    ಇದನ್ನು ವಿನ್ಯಾಸ ಮಾಡಲು ಸುಮಾರು 3 ತಿಂಗಳು ಬೇಕಾಯಿತು. ಈ ಸಣ್ಣ ಸಾಧನದೊಳಗೆ ಬ್ಲೂಟೂತ್​ ಮಾಡ್ಯೂಲ್​ ಹಾಗೂ ಚಾರ್ಜೇಬಲ್​ ಬ್ಯಾಟರಿ ಕೂಡ ಇರುತ್ತದೆ. ‘ವಿಮೆನ್​ ಸೇಫ್ಟಿ ಆ್ಯಂಟಿ ಟೀಸಿಂಗ್’ ಜುವೆಲ್ಲರಿ ಎಂದು ಇದಕ್ಕೆ ಹೆಸರಿಡಲಾಗಿದ್ದು, ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿರುವ ಇದರ ಬೆಲೆ ಸುಮಾರು 900 ರೂ. ಇರಲಿದೆ ಎನ್ನುತ್ತಾರೆ ಶ್ಯಾಮ್​. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts