More

    2022ರ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಪಾಕ್ ಮೊದಲ ಎದುರಾಳಿ

    ದುಬೈ: ಭಾರತ ತಂಡ ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಾರ್ಚ್ 6 ರಂದು ಎದುರಿಸಲಿದೆ. ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 4ರಂದು ಟೂರ್ನಿ ಆರಂಭಗೊಳ್ಳಲಿದ್ದು, ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಪ್ರಕಟಿಸಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಎದುರಾಗಲಿವೆ. 8 ತಂಡಗಳು ಸ್ಪರ್ಧಿಸುತ್ತಿರುವ ಟೂರ್ನಿಯಲ್ಲಿ 31 ಪಂದ್ಯಗಳು 31 ದಿನಗಳ ಕಾಲ ನಡೆಯಲಿವೆ. ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡುನೆಡಿನ್, ಹ್ಯಾಮಿಲ್ಟನ್, ತೌರಂಗ ಹಾಗೂ ವೆಲ್ಲಿಂಗ್ಟನ್‌ನಲ್ಲಿ ಪಂದ್ಯಗಳು ನಡೆಯಲಿವೆ.

    ಟೂರ್ನಿಗೆ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು 2017-20ರ ನಿರ್ವಹಣೆ ಆಧಾರದ ಮೇಲೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ರ‌್ಯಾಂಕಿಂಗ್ ಆಧಾರದ ಮೇಲೆ ಅರ್ಹತೆ ಗಿಟ್ಟಿಸಿಕೊಂಡಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದಲ್ಲಿ ಎಲ್ಲ 8 ತಂಡಗಳು ಪರಸ್ಪರ ಎದುರಾಗಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೇರಲಿವೆ. ಏಪ್ರಿಲ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಪೂರ್ವತಯಾರಿಯಾಗಿ ಆತಿಥೇಯ ತಂಡದೊಂದಿಗೆ ದ್ವಿಪಕ್ಷೀಯ ಸರಣಿಯಲ್ಲಿ ಆಡಲಿದೆ.

    ಭಾರತದ ವೇಳಾಪಟ್ಟಿ
    ದಿನಾಂಕ, ಎದುರಾಳಿ
    ಮಾ.6, ಪಾಕಿಸ್ತಾನ
    ಮಾ.10, ನ್ಯೂಜಿಲೆಂಡ್
    ಮಾ.12, ವೆಸ್ಟ್ ಇಂಡೀಸ್
    ಮಾ.16, ಇಂಗ್ಲೆಂಡ್
    ಮಾ.19, ಆಸ್ಟ್ರೇಲಿಯಾ
    ಮಾ.22, ಬಾಂಗ್ಲಾದೇಶ
    ಮಾ.27, ದಕ್ಷಿಣ ಆಫ್ರಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts