More

    ಮಹಿಳೆ ಸ್ವಾವಲಂಬಿ ಬದುಕಿಗೆ ಮಹತ್ವ ಅಗತ್ಯ

    ವಿಜಯಪುರ: ಮಹಿಳಾ ಸ್ವಾವಲಂಬಿ ಬದುಕಿಗೆ ಮಹತ್ವ ನೀಡಬೇಕು. ಆ ಮೂಲಕ ಮಹಿಳೆ ತನ್ನ ಬದುಕಿಗಾಗಿ ಇನ್ನೊಬ್ಬರ ಮೇಲೆ ಅವಲಂಬಿತಳಾಗದಂತೆ ನೋಡಿಕೊಳ್ಳಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯಿಸಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಸರ್ವಧರ್ಮ ಮಹಿಳಾ ವಿವಿಧೋದ್ದೇಶಗಳ ಸಂಘದ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಕುಟುಂಬದ ಸರ್ವ ಸದಸ್ಯರೂ ದುಡಿಮೆ ಮಾಡುವ ಅನಿವಾರ್ಯತೆ ಇದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಮಾತ್ರ ಮಹತ್ವದ್ದಾಗಿದೆ. ಮಹಿಳೆಯು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳೆಯಬೇಕು. ಆತ್ಮ ವಿಶ್ವಾಸದಿಂದ ಜೀವನದ ಹೆಜ್ಜೆ ಹಾಕಬೇಕು. ನಮ್ಮ ಹಣೆಬರಹ ನಾವೇ ಬರದುಕೊಳ್ಳಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಮಹಿಳೆಯನ್ನು ಇಂದಿನ ಆಧುನಿಕ ಸಮಾಜದಲ್ಲಿಯೂ ಸಮಾನತೆಯ ದೃಷ್ಟಿಯಿಂದ ಕಾಣದೆ ಇರುವುದು ದುಃಖಕರ ಸಂಗತಿ. ಕನಿಷ್ಠ ಕುಟುಂಬದಲ್ಲಿಯಾದರೂ ಮಹಿಳೆಯನ್ನು ಗೌರವದಿಂದ ಕಾಣುಬೇಕು. ಅವರ ಹಕ್ಕುಗಳನ್ನು ಕಾಪಾಡಬೇಕು. ಎರಡು ಮೂರು ದಶಕಗಳ ಹಿಂದೆ ಭ್ರೂಣ ಹತ್ಯೆ ಮಾಡಿದ ಪರಿಣಾಮ ಇಂದು ಯುವಕರಿಗೆ ಮದುವೆಗೆ ಯುವತಿಯರ ಕೊರತೆ ಉಂಟಾಗಿದೆ. ಸಂಘಟನೆಯ ಮೂಲಕ ಮಹಿಳೆ ಸಾಧಕರಾಗಬೇಕೆಂದರು.

    ಬಿಕೆ ಸರೋಜಾ ಅಕ್ಕ ಸಾನ್ನಿಧ್ಯ ವಹಿಸಿದ್ದರು. ಸಂಘಟನೆಯ ಅಧ್ಯಕ್ಷೆ ಶಕುಂತಲಾ ಕಿರಸೂರ, ಜಿಲ್ಲಾ ಕುರಬರ ಸಂಘದ ಅಧ್ಯಕ್ಷ ರಾಜು ಕಂಬಾಗಿ, ಶ್ರೀದೇವಿ ಮದರಿ, ತಾನಾಜಿ ನಾಗರಾಳ, ಗೌರಮ್ಮ ಮುತ್ತತ್ತಿ, ಹನೀಫ್ ಮಕಾಂದಾರ, ಡಿ.ಎಲ್. ಚವಾಣ್, ಎಂ.ಸಿ. ಮುಲ್ಲಾ, ರವಿ ಕಿತ್ತೂರ, ಅಖೀಲಗೌಡ ಪಾಟೀಲ, ಶಾರದಾ ನಾಯಕ, ಲಕ್ಷ್ಮಿ ಅಗಸಬಾಳ, ಕಮಲಾ ಮಾಕಾಳಿ, ಮಂಜುಳಾ ಪೂಜಾರಿ, ಕಾಂತಾ ರಜಪೂತ, ಶಾರದಾ ವಾಲಿಕಾರ, ಸುನಿತಾ ದುಬೈ, ಪ್ರಭಾವತಿ ನಾಟಿಕಾರ, ಮಂಜುಳಾ ನಾಯಕ, ಆರತಿ ಶಹಾಪುರ, ಭಾರತಿ ಹೊಸಮನಿ, ಎಸ್.ಎಂ. ಕೋರಿ, ಕಸ್ತೂರಿ ಪೂಕಾರಿ, ಬನ್ನೆಪ್ಪ ಜೋಗಿ, ಪ್ರಕಾಶ ಕೋಳಮಲಿ, ಸಿದ್ದು ಬೀರಕಬ್ಬಿ, ಕಾಂತು ಇಂಚಗೇರಿ, ಸಾವಿತ್ರಿ ದಳವಾಯಿ, ಶಕುಂತಲಾ ರೇವಣಕರ, ಸುಮಿತ್ರಾ ಮಾನೆ ಮತ್ತಿತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts