More

    ಕಟ್ಟುಪಾಡುಗಳಿಂದ ಹೊರಬರಲಿ ಮಾನಿನಿಯರು

    ಮಾನ್ವಿ: ಮಹಿಳೆಯರು ಹೊಸ ಚರಿತ್ರೆ ಸೃಷ್ಟಿಸುವಂತಹ ಸಾಧನೆಗಳನ್ನು ಮಾಡಬೇಕು ಎಂದು ಕಲಬುರಗಿ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಪಾಟೀಲ್ ಹೇಳಿದರು.

    ತಾಲೂಕು ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಅಬಲೆಯಲ್ಲ ಸಬಲೆಯಾಗಿದ್ದಾಳೆ. ಈ ಹಿಂದೆ ಮಹಿಳೆಯರು ಕೆಲವೆಡೆ ನಿಷಿದ್ದ ಎನ್ನುವ ಕಾಲವಿತ್ತು. ಈಗ ಕಾಲ ಬದಲಾಗಿದ್ದು, ಎಲ್ಲ ರಂಗದಲ್ಲಿ ಪುರುಷರಷ್ಟೇ ಸಾಧನೆ ಮಾಡುತ್ತಿರುವ ಮಹಿಳೆಯರು ಕಟ್ಟುಪಾಡುಗಳಿಂದ ಮುಕ್ತಿ ಹೊಂದಬೇಕು. ತಾಲೂಕು ಮಟ್ಟದಲ್ಲಿ ಮಹಿಳಾ ಸಮ್ಮೇಳನ ನಡೆಸಿ ಮಹಿಳೆಯರಿಗೆ ಸ್ಫೂರ್ತಿ ತುಂಬುತ್ತಿರುವುದು ಶ್ಲಾಘನೀಯ ಎಂದರು.

    12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣ ಮಹಿಳೆಯರಿಗೆ ಶೇ.33 ಸಮಾನತೆ ನೀಡಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇನ್ನೂ ಸಮಾನತೆ ಸಿಕ್ಕಿಲ್ಲ. 3ರಿಂದ 4 ಜನ ಸಂಸದರು, ಬೆರಳೆಣಿಕೆಯ ಶಾಸಕಿಯರ ಪೈಕಿ ಯಾವುದೇ ಸರ್ಕಾರವಿದ್ದರೂ ಒಬ್ಬರಿಗೆ ಮಂತ್ರಿ ಪದವಿ ನೀಡುತ್ತಿರುವುದು ಸಮಾನತೆಯೇ ಎಂದು ಪ್ರಶ್ನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts