More

    ಮಹಿಳಾ ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಪ್ರಮುಖ

    ಕಂಪ್ಲಿ: ಆಧುನಿಕ ದಿನಮಾನಗಳಲ್ಲಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಹಶೀಲ್ದಾರ ಶಿವರಾಜ ಹೇಳಿದರು.

    ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸಂಘಟನೆ:ಮುಖ್ಯಮಂತ್ರಿ ಚಂದ್ರು

    ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ತಾಲೂಕು ಬಣಜಿಗ ಮಹಿಳಾ ಸಂಘ ಅಸ್ತಿತ್ವಕ್ಕೆ ಚಾಲನೆ ನೀಡಿ, ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಪ್ರಾತಿನಿಧ್ಯತೆ ನೀಡಿದ್ದು ಇದನ್ನು ಸಂಪೂರ್ಣ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪುರುಷ ಸಮಾನತೆ ಸಾಧಿಸಬೇಕಿದೆ ಎಂದರು.

    ತಾಲೂಕು ಬಣಜಿಗ ಮಹಿಳಾ ಸಂಘದ ಅಧ್ಯಕ್ಷೆ ಚೈತ್ರಾ ಸಿದ್ದಾಪುರ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಮಹಿಳೆಯರು ನಾನಾ ರಂಗಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಪ್ರಸಾದ್ ಗಡಾದ್, ಗಂಗಾವತಿಯ ಉಪನ್ಯಾಸಕಿ ಲಲಿತಾ ಬಾವಿಕಟ್ಟಿ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಮರಿಶೆಟ್ರು, ವಿಜಯಲಕ್ಷ್ಮೀ ಗಡಾದ್, ಬೂದುಗುಂಪಿ ಪಾರ್ವತಮ್ಮ, ಶಾಂತಲಾ ವಿ.ವಿದ್ಯಾಧರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts