More

    ರಾಜ್ಯಾದ್ಯಂತ ಎಎಪಿ ಸಂಘಟನೆ:ಮುಖ್ಯಮಂತ್ರಿ ಚಂದ್ರು

    ಕೊಪ್ಪಳ: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಲು ಮುಂದಾಗಿರುವೆ. ನಾಲ್ಕಾರು ಹಳ್ಳಿಗಳ ಜನರನ್ನು ಸೇರಿಸಿ ಅವರ ಬಳಿ ಚರ್ಚಿಸಿ ಮೂರು ಪಕ್ಷಗಳನ್ನು ತಿರಸ್ಕರಿಸುವಂತೆ ಮನವಿ ಮಾಡುತ್ತಿದ್ದೇವೆ. ಜನತೆಗೆ ಪರ್ಯಾಯ ಪಕ್ಷ ಬೇಕೆನಿಸಿದಲ್ಲಿ ನಾವಿದ್ದೇವೆ ಎಂಬ ಸಂದೇಶ ಸಾರುತ್ತಿದ್ದೇವೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

    ಉತ್ತರ ಭಾರತದಲ್ಲಿ ಮಾಡಿದಂತೆ ನಾವು ಇಲ್ಲಿ ಸದ್ಯಕ್ಕೆ ಕ್ರಾಂತಿ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಆದರೆ, ಬದಲಾವಣೆ ಮಾಡುತ್ತೇವೆ. ಹಣ, ಜಾತಿ, ಅಧಿಕಾರದಲ್ಲಿ ವಿಪಕ್ಷಗಳಷ್ಟು ನಾವು ಬಲಾಢ್ಯರಿಲ್ಲ. ಹೀಗಾಗಿ ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಜಿಲ್ಲೆಗೆ ತೆರಳಿ ಪಕ್ಷ ಬಲಪಡಿಸುತ್ತೇವೆ.

    ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಿದ್ಧಾಂತಗಳು ಚೆನ್ನಾಗಿವೆ. ಆದರೆ, ಅವುಗಳ ಅನುಷ್ಠಾನ ಅತ್ಯಂತ ಕೆಟ್ಟದಾಗಿದೆ. ಗ್ಯಾರಂಟಿ ಕಾಂಗ್ರೆಸ್ ಸ್ವಂತ ಯೋಜನೆ ಅಲ್ಲ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಯೋಜನೆಗಳನ್ನು ಕದ್ದು ಜಾರಿ ಮಾಡಿದ್ದಾರೆ. ಆದರೆ, ಅವರಂತೆ ಮುಂದಾಲೋಚನೆ ಇಲ್ಲದೆ ಅನುಷ್ಠಾನಕ್ಕೆ ಮುಂದಾಗಿದ್ದು, ಎಸ್ಸಿ, ಎಸ್ಟಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ರೈತರ ವಿದ್ಯುತ್ ಕಸಿದಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

    ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ನ್ಯಾಯಾಧೀಕರಣದ ತೀರ್ಪು ಧಿಕ್ಕರಿಸಿ. ಮಹಾ ಎಂದರೆ ಜೈಲಿಗೆ ಹಾಕುತ್ತಾರೆ. ನಿಮ್ಮ ಪಕ್ಷದಲ್ಲಿ ಖಜಾನೆ ಲೂಟಿ ಮಾಡಿ ಜೈಲಿಗೆ ಹೋದವರಿದ್ದಾರೆ. ಜನರಿಗಾಗಿ ಜೈಲಿಗೆ ಹೋದರೆ ತಪ್ಪಲ್ಲ. ನಾವೂ ಬರುತ್ತೇವೆ. ಸದನ ಕರೆದು ನಿರ್ಣಮ ಮಂಡಿಸಿ.

    ಅದು ಬಿಟ್ಟು ಮೊಸಳೆ ಕಣ್ಣೀರು ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕರ್ನಾಟಕ ಸುವರ್ಣ ಮಹೋತ್ಸವಕ್ಕೆ ಆಸಕ್ತಿ ತೋರುತ್ತಿಲ್ಲವೆಂದು ಆರೋಪಿಸಿದರು. ರಾಜ್ಯಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿಗೌಡರ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts