More

    ಮಹಿಳೆಯರೂ ರಕ್ತದಾನಕ್ಕೆ ಮುಂದಾಗಿ: ಡಾ. ರಾಜನಂದಿನಿ ಕಾಗೋಡು ಸಲಹೆ

    ಸಾಗರ: ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬರೂ ರಕ್ತದಾನದಲ್ಲಿ ತೊಡಗಿಸಿಕೊಳ್ಳಬೇಕು. ಇದು ಅತ್ಯಂತ ಅವಶ್ಯ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ತಿಳಿಸಿದರು.
    ನಗರದ ಎಲ್‌ಬಿ ಕಾಲೇಜಿನ ದೇವರಾಜ ಅರಸು ಸಭಾಭವನದಲ್ಲಿ ಮಂಗಳವಾರ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಮತ್ತು ರೋಟರಿ ಸಂಸ್ಥೆ, ರಕ್ತನಿಽ ಕೇಂದ್ರ, ಲಯನ್ಸ್ ಕ್ಲಬ್ ಇತರೆ ಸಂಘಟನೆಗಳಿAದ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
    ವಿದ್ಯಾರ್ಥಿಗಳು, ಯುವ ಜನರು ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಹಿಮೋಗ್ಲೋಬಿನ್ ಕೊರತೆಯಿಂದ ಮಹಿಳೆಯರು ಎದುರಿಸಬಹುದಾದ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಹಿಮೋಗ್ಲೋಬಿನ್ ತಪಾಸಣೆ ನಡೆಸಿ ಸೂಕ್ತ ಆರೋಗ್ಯ ಸಲಹೆಯನ್ನು ನೀಡಲಾಗಿದೆ. ಮಹಿಳೆಯರು ರಕ್ತದಾನ ಮಾಡುವುದು ವಿರಳವಾಗುತ್ತಿದ್ದು ಇಂತಹ ಶಿಬಿರಗಳ ಮೂಲಕ ಅದರ ಮಹತ್ವ ತಿಳಿಸಿಕೊಡಬೇಕು ಎಂದರು.
    ರೋಟರಿ ರಕ್ತನಿಽ ಕೇಂದ್ರದ ಅಧ್ಯಕ್ಷ ಡಾ. ಎಚ್.ಎಂ.ಶಿವಕುಮಾರ್ ಮಾತನಾಡಿ, ಸಾಗರದಲ್ಲಿ ರೋಟರಿ ರಕ್ತನಿಽ ಕೇಂದ್ರ ಪ್ರಾರಂಭವಾಗಿ ಐದು ವರ್ಷವಾಯಿತು. ಇಲ್ಲಿಯ ತನಕ ೨೦ ಸಾವಿರ ಯೂನಿಟ್ ರಕ್ತ ಸಂಗ್ರಹ ಹಾಗೂ ವಿತರಣೆಯಾಗಿದೆ. ಶೇ.೮೦ ರಕ್ತವನ್ನು ಉಪವಿಭಾಗೀಯ ಆಸ್ಪತ್ರೆಗೆ ಕೊಡಲಾಗುತ್ತಿದೆ. ಆದರೂ ರಕ್ತದ ಕೊರತೆ ಇದ್ದು ಯುವಜನರು ರಕ್ತದಾನ ಮಾಡುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
    ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥ ರಾವ್ ಅಧ್ಯಕ್ಷತೆ ವಹಿಸಿದ್ದರು. ಕವಲಕೋಡು ವೆಂಕಟೇಶ್, ಡಾ. ಬಿ.ಸಿ.ಶಶಿಧರ್, ಪ್ರಭಾವತಿ ಶ್ರೀಧರ್, ಡಾ. ಸಚಿನ್, ಸವಿತಾ, ಶಿಲ್ಪಾ, ಎಂ.ಎಸ್.ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts