More

    ಹೆಣ್ಣು ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ- ಹಂಪಣ್ಣವರ

    ಲಕ್ಷ್ಮೇಶ್ವರ: ಸಮಾಜದ ಕಣ್ಣಾಗಿರುವ ಹೆಣ್ಣು ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಸುಶಿಕ್ಷಿತ, ಸಮೃದ್ಧ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶ್ರೀಮತಿ ಕಮಲಾ ವೆಂಕಪ್ಪ ಅಗಡಿ ಇಂಜನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ಹೇಳಿದರು.
    ಅವರು ಬುಧವಾರ ಅಗಡಿ ಸನ್‍ರೈಸ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಗೈದ ಮಹಿಳಾ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಅದರಲ್ಲೂ ಬಡ ಮಹಿಳಾ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗಬೇಕು ಎಂಬ ದಿ. ವೆಂಕಪ್ಪ ಎಂ ಅಗಡಿ ಅವರ ಆಸೆಯಂತೆ ಅವರ ಪತ್ನಿ ಕಮಲಾ ಅಗಡಿ, ಮಗ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ ಅಗಡಿ ಅವರು ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಸೇವೆಯಲ್ಲಿ ತೊಡಗಿದ್ದಾರೆ ಎಂದರು.
    ಈ ವೇಳೆ ಶಿಕ್ಷಣ, ಸಾಹಿತ್ಯ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಜಯಲಕ್ಷ್ಮೀ ಮಹಾಂತೆಟ್ಟರ, ಲಲಿತಾ ಕೆರಿಮನಿ, ಸರೋಜಾ ಬನ್ನೂರ, ಮಾಲಾದೇವಿ ದಂಧರಗಿ, ನಾಗರತ್ನಾ ಕಡಾರಿ ಸೇರಿ ಹಲವರನ್ನು ಸನ್ಮಾನಿಸಲಾಯಿತು.
    ಆಸ್ಪತ್ರೆಯ ಚೀಪ್ ಆಪರೇಟಿಂಗ್ ಆಫೀಸರ್ ಡಾ. ರಾಜಶೇಖರ ಮೂಲಿಮನಿ, ಡಾ. ಸುಜಾತಾ ಸಂಗೂರ, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರೇಷ್ಮಾ ರಾಠೋಡ, ಜನರಲ್ ಶಸ್ತ್ರ ಚಿಕಿತ್ಸೆ ತಜ್ಷರಾದ ಡಾ ಕೃಷ್ಣಾರೆಡ್ಡಿ ನಾವಳ್ಳಿ, ಎಲುಬು ಕೀಲು ರೋಗ ತಜ್ಞರಾದ ಡಾ.ರವಿಕುಮಾರ ನಾಗನೂರ, ಆಸ್ಪತ್ರೆಯ ಆಡ್ಮಿನಿಸ್ಟ್ರೇಟರ್ ಶ್ರೀಕಾಂತ ಪಾಟೀಲ ಹಾಗೂ ಸಿಬ್ಬಂದಿಗಳಿದ್ದರು. ಡಾ. ದಿವ್ಯಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts