More

    ನೆಟ್ಟಿಗರ ಟ್ರೋಲ್​ಗೆ ಆಹಾರವಾಯ್ತು ಮಹಿಳೆಯ ಮಹಾ ಎಡವಟ್ಟು…ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅಂತ ಇದಕ್ಕೇ ಹೇಳೋದಾ ಹೇಗೆ?

    ಈ ಮಹಿಳೆಗೆ ಕೆಲಸಕ್ಕೆ ರಜಾ ಹಾಕಬೇಕು ಎಂದೆನಿಸಿತ್ತು. ಆದರೆ ಬಾಸ್​ಗೆ ಏನು ಹೇಳೋದು? ಸುಮ್ಮಸುಮ್ಮನೆ ರಜಾ ಹಾಕಿದ್ರೆ ಖಂಡಿತ ಬೈಸಿಕೊಳ್ಳಬೇಕು…

    ತುಂಬ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅದರಂತೆ ತಮ್ಮ ಬಾಸ್​ಗೆ ಒಂದು ಫೋಟೋವನ್ನೂ ಕಳಿಸಿದರು. ಆದರೆ ಆ ಫೋಟೋನಾ ಮಹಿಳೆಯ ಸಹೋದ್ಯೋಗಿಯೋರ್ವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೇ ತಡ ನೆಟ್ಟಿಗರು ಫುಲ್​ ನಗುತ್ತಿದ್ದಾರೆ. ಕೆಲಸ ತಪ್ಪಿಸಿಕೊಳ್ಳಲು ಗಿಮಿಕ್ ಮಾಡಲು ಹೋದ ಮಹಿಳೆಗೆ ಸಿಕ್ಕಾಪಟೆ ಕಾಲೆಳೆಯುತ್ತಿದ್ದಾರೆ.

    ಏನಿದು ಕತೆ? ಹೀಗಿದೆ ನೋಡಿ…ಮಹಿಳೆಯೋರ್ವರು ನಾನು ಕೆಲಸಕ್ಕೆ ಬರುವುದಿಲ್ಲ ಎಂದು ಮನೆಯಿಂದಲೇ ತಮ್ಮ ಬಾಸ್​ಗೆ ತಿಳಿಸಲು ನೆಪ ಹುಡುಕಿದರು. ಹಾಗೇ ತಮ್ಮ ಕಾರು ಪಂಕ್ಚರ್​ ಆಯಿತು. ಹಾಗಾಗಿ ನಿಯಂತ್ರಣ ಕಳೆದುಕೊಂಡು ಸಣ್ಣ ಪ್ರಮಾಣದ ಆ್ಯಕ್ಸಿಡೆಂಟ್ ಆಗಿದೆ ಎಂದು ಬಿಂಬಿಸಲು ನಿರ್ಧರಿಸಿದರು. ಅದೇ ರೀತಿ ಟೈಯರ್​ಗೆ ಮೊಳೆ ಚುಚ್ಚಿಕೊಂಡಿರುವ ಫೋಟೋವನ್ನೂ ಬಾಸ್​ಗೆ ಕಳಿಸಿದರು. ಆದರೆ ಇದು ಪಕ್ಕಾ ಫೇಕ್​ ಫೋಟೋ ಆಗಿತ್ತು. ಫೋಟೋ ಶಾಪ್​ನಲ್ಲಿ ಎಡಿಟ್​ ಮಾಡಿ ಕಳಿಸಿದ ಚಿತ್ರವಾಗಿತ್ತು.

    ಅದೆಷ್ಟು ಕೆಟ್ಟದಾಗಿ ಎಡಿಟ್ ಮಾಡಿದ್ದರು ಎಂದರೆ ಅದನ್ನು ನೋಡಿದರೆ ಎಂಥವರಿಗಾದರೂ ಇದೊಂದು ಸುಳ್ಳು ಫೋಟೋ ಎಂಬುದು ಗೊತ್ತಾಗುತ್ತಿತ್ತು. ಆ ಟೈಯರ್​ಗೂ, ಮೊಳೆಗೂ ಅದು ಚುಚ್ಚಿಕೊಂಡ ರೀತಿಗೂ ತಾಳೆಯೇ ಆಗುತ್ತಿರಲಿಲ್ಲ.

    ಮಹಿಳೆಯ ಸಹೋದ್ಯೋಗಿಯೋರ್ವರು ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯೋರ್ವರು ಈ ಫೋಟೋವನ್ನು ಬಾಸ್​ಗೆ ಕಳಿಸಿ ರಜೆ ಕೇಳಿದ್ದಾರೆ. ಆದರೆ ನೀವೆಲ್ಲರೂ ಈಗ ಮಾಡುತ್ತಿರುವ ಕೆಲಸವನ್ನು ಬಿಟ್ಟು ಫೋಟೋದಲ್ಲಿರುವ ಮೊಳೆಯನ್ನು ಒಮ್ಮೆ  ಝೂಮ್​ ಮಾಡಿ ನೋಡಿ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ಈ ಟ್ವೀಟ್​ ಇದುವರೆಗೆ 45 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು ವಿಪರೀತ ವೈರಲ್​ ಆಗುತ್ತಿದೆ. ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಮಹಿಳೆಯ ಕಾಲೆಳೆಯುತ್ತಿದ್ದಾರೆ. ವಿವಿಧ ಮೀಮ್ಸ್​ಗಳನ್ನು ಕಾಮೆಂಟ್​ ಸೆಕ್ಷನ್​ನಲ್ಲಿ ಹಾಕಿ ನಗುತ್ತಿದ್ದಾರೆ. ಅಂದಹಾಗೆ ಈ ಎಡವಟ್ಟು ನಡೆದಿದ್ದು ಆಸ್ಟ್ರೇಲಿಯಾದಲ್ಲಿ. (ಏಜೆನ್ಸೀಸ್​)

    ನೆಟ್ಟಿಗರ ಟ್ರೋಲ್​ಗೆ ಆಹಾರವಾಯ್ತು ಮಹಿಳೆಯ ಮಹಾ ಎಡವಟ್ಟು...ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅಂತ ಇದಕ್ಕೇ ಹೇಳೋದಾ ಹೇಗೆ? ನೆಟ್ಟಿಗರ ಟ್ರೋಲ್​ಗೆ ಆಹಾರವಾಯ್ತು ಮಹಿಳೆಯ ಮಹಾ ಎಡವಟ್ಟು...ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅಂತ ಇದಕ್ಕೇ ಹೇಳೋದಾ ಹೇಗೆ? ನೆಟ್ಟಿಗರ ಟ್ರೋಲ್​ಗೆ ಆಹಾರವಾಯ್ತು ಮಹಿಳೆಯ ಮಹಾ ಎಡವಟ್ಟು...ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅಂತ ಇದಕ್ಕೇ ಹೇಳೋದಾ ಹೇಗೆ? ನೆಟ್ಟಿಗರ ಟ್ರೋಲ್​ಗೆ ಆಹಾರವಾಯ್ತು ಮಹಿಳೆಯ ಮಹಾ ಎಡವಟ್ಟು...ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅಂತ ಇದಕ್ಕೇ ಹೇಳೋದಾ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts