More

    ನಮ್ಮೊಂದಿಗೆ ಮಲಗು ಎಂದು ಪೀಡಿಸಿದರು, ಇಲ್ಲ ಎಂದದ್ದಕ್ಕೆ ಹೀಗಾ ಮಾಡೋದು…!

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಖಾಸಗಿ ಲಾಂಜ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಖಾಸಗಿ ಲಾಂಜ್​ನ ಜನರಲ್​ ಮ್ಯಾನೇಜರ್​ ಮತ್ತು ಡ್ಯೂಟಿ ಮ್ಯಾನೇಜರ್​ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ ವಿಫಲರಾಗಿದ್ದರು. ಇದೇ ಸಿಟ್ಟಿನಲ್ಲಿ ಅವರು ಆಕೆಯನ್ನು ಉದ್ಯೋಗದಿಂದಲೇ ಕಿತ್ತುಹಾಕಿ ಪ್ರತೀಕಾರ ತೀರಿಸಿಕೊಂಡಿದ್ದಾರೆ.

    ಈ ಬಗ್ಗೆ ಸಂತ್ರಸ್ತೆ ಸಲ್ಲಿಸಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು 42 ವರ್ಷದ ಜನರಲ್​ ಮ್ಯಾನೇಜರ್​ ಮತ್ತು 37 ವರ್ಷದ ಡ್ಯೂಟಿ ಮ್ಯಾನೇಜರ್​ ಅನ್ನು ಬಂಧಿಸಿದ್ದಾರೆ.

    ದೂರಿನ ಪ್ರಕಾರ ಟರ್ಮಿನಲ್​ 3ರಲ್ಲಿರುವ ಖಾಸಗಿ ಲಾಂಜ್​ನ ಇಬ್ಬರು ಮ್ಯಾನೇಜರ್​ಗಳು ತಮ್ಮೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಯುವತಿಗೆ ಆರು ತಿಂಗಳಿಂದ ಪೀಡಿಸುತ್ತಿದ್ದರು. ಪ್ರತಿದಿನವೂ ಮೈಕೈ ಮುಟ್ಟಿ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದರು. ಈ ಬಗ್ಗೆ ಯಾರಿಗಾದರೂ ಹೇಳಿದರೆ, ಇಲ್ಲವೇ ಪೊಲೀಸ್​ ದೂರು ಕೊಟ್ಟರೆ ಕೆಲಸದಿಂದ ಕಿತ್ತೊಗೆಯುವುದಾಗಿ ಬೆದರಿಸುತ್ತಿದ್ದರು.

    ಇದನ್ನೂ ಓದಿ: ಎನ್​ಕೌಂಟರ್​ ಭೀತಿಯಲ್ಲಿ 3 ರಾಜ್ಯಗಳ ಪೊಲೀಸರ ಎದುರು ಶರಣಾಗತಿಯ ಪ್ರಸ್ತಾಪ ಇರಿಸಿದ್ದ ವಿಕಾಸ್ ದುಬೆ​

    ಆಕೆ ಒಂದು ದಿನ ಚೇಂಜಿಂಗ್​ ರೂಂನಲ್ಲಿ ಸಮವಸ್ತ್ರವನ್ನು ಬದಲಿಸಿಕೊಳ್ಳಲು ಹೋದಾಗ ಆಕೆಯ ಕೋಣೆಗೆ ಬಲವಂತವಾಗಿ ನುಗ್ಗಿದ್ದ ಜನರಲ್​ ಮ್ಯಾನೇಜರ್​ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದ. ಆದರೆ, ಏನೋ ಉಪಾಯ ಮಾಡಿಕೊಂಡು ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಇದನ್ನು ಗಮನಿಸಿದ ಡ್ಯೂಟಿ ಮ್ಯಾನೇಜರ್​, ಜನರಲ್​ ಮ್ಯಾನೇಜರ್​ ಅವರನ್ನು ಸಂತೃಪ್ತಿಗೊಳಿಸಿ ಲಾಭ ಗಳಿಸುವ ಅವಕಾಶ ಕಳೆದುಕೊಂಡೆಯಲ್ಲಾ ಎಂದು ಆಕೆಗೆ ಹೇಳಿದ್ದ. ಅಲ್ಲದೆ, ಅಂದಿನಿಂದ ಆಕೆಗೆ ಕಿರುಕುಳ ನೀಡಲು ಮತ್ತು ಕೆಲಸದಿಂದ ಕಿತ್ತೊಗೆಯಲು ಪ್ರತಿಯೊಂದು ಹೆಜ್ಜೆಯಲ್ಲೂ ಯತ್ನಿಸುತ್ತಿದ್ದರು.

    ಇದಾದ ಬಳಿಕ ಡ್ಯೂಟಿ ಮ್ಯಾನೇಜರ್​ ಕೂಡ ಆಕೆಯ ಮೈಕೈ ಅನ್ನು ಮುಟ್ಟಿ ಮಾತನಾಡಿಸುವುದನ್ನು ಜಾಸ್ತಿ ಮಾಡಿದ್ದ ಎನ್ನಲಾಗಿದೆ. ಮಾ.24ರಂದು ಕೆಲಸದ ನೆಪದಲ್ಲಿ ತನ್ನನ್ನು ಖಾಸಗಿ ಲಾಂಜ್​ಗೆ ಕರೆಯಿಸಿಕೊಂಡಿದ್ದ ಜನರಲ್​ ಮ್ಯಾನೇಜರ್​ ಮತ್ತು ಡ್ಯೂಟಿ ಮ್ಯಾನೇಜರ್​ ಇಬ್ಬರೂ ಅತ್ಯಾಚಾರ ಎಸಗಲು ಯತ್ನಿಸಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

    ರೇವಾದಲ್ಲಿನ ಸೋಲಾರ್​ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts