More

    ಕೊರೊನಾ ವೈರಸ್ ಭೀತಿ:​ ಚೀನಾ ಸ್ನೇಹಿತೆಯನ್ನು ಸಮರ್ಥಿಸಿಕೊಂಡ ಭಾರತೀಯ ಮೂಲದ ಯುವತಿಯ ಮೇಲೆ ಹಲ್ಲೆ

    ಲಂಡನ್​: ಜಗತ್ತಿನೆಲ್ಲೆಡೆ ಮಾರಕ ಕೊರೊನಾ ವೈರಸ್​ ಭೀತಿ ಸೃಷ್ಟಿಸಿದೆ. ಇದೇ ಭೀತಿ ಭಾರತೀಯ ಮೂಲದ ಯುವತಿಯೊಬ್ಬಳ ಮೇಲಿನ ಹಲ್ಲೆಗೂ ಕಾರಣವಾಗಿರುವುದು ದುರಾದೃಷ್ಟಕರ ಸಂಗತಿ. ಕೊರೊನಾ ವೈರಸ್​ ಅನ್ನು ತನ್ನ ಜತೆಯಲ್ಲಿಯೇ ಹೊತ್ತು ತಂದಿದ್ದಾಳೆ ಎಂಬ ಚೀನಾ ಮೂಲದ ಸ್ನೇಹಿತೆಯ ವಿರುದ್ಧದ ಆರೋಪವನ್ನು ಅಲ್ಲಗೆಳೆದ ಭಾರತೀಯ ಮೂಲದ ಯುವತಿಯ ಮೇಲೆಯೇ ಪ್ರಜ್ಞೆ ಕಳೆದುಕೊಳ್ಳುವ ಮಟ್ಟಿಗೆ ಹಲ್ಲೆ ಮಾಡಿರುವ ಘಟನೆ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದಿದೆ.

    ವಕೀಲ ತರಬೇತಿ ಪಡೆಯುತ್ತಿರುವ ಮೀರಾ ಸೊಲಂಕಿ ಇಂಗ್ಲೆಂಡ್​ನ ಸೊಲಿಹಲ್​ನಲ್ಲಿ ನೆಲೆಸಿದ್ದಾರೆ. ಸೋಲಂಕಿ ತನ್ನ 29ನೇ ಹುಟ್ಟುಹಬ್ಬವನ್ನು ಆಚರಿಸಲು ಸ್ನೇಹಿತೆಯೊಂದಿಗೆ ಬರ್ಮಿಂಗ್​ಹ್ಯಾಮ್​ನ ಅನಾ ರೊಚಾ ಬಾರ್ ಮತ್ತು ಫೆಡ್ರಿಕ್​ ಸ್ಟ್ರೀಟ್​ಗೆ ತೆರಳಿದ್ದರು.​

    ಲಂಡನ್​ನಿಂದ ಬಂದಿದ್ದ ತನ್ನ 28 ವರ್ಷದ ಸ್ನೇಹಿತೆ ಮ್ಯಾಂಡಿ ಹೌಂಗ್​ ಜತೆ ಸೋಲಂಕಿ ಹುಟ್ಟುಹಬ್ಬ ಆಚರಣೆಯ ಸ್ಥಳದಲ್ಲಿದ್ದರು. ಈ ವೇಳೆ ಏಷ್ಯನ್​ ಪುರುಷರ ಗುಂಪೊಂದು ಸೋಲಂಕಿಯವರನ್ನು ಗುರಿಯಾಗಿಸಿಕೊಂಡಿದೆ. ಬಳಿಕ ಫೆ. 9ರ ಭಾನುವಾರ ಬೆಳಗ್ಗೆ 2 ಗಂಟೆ ಸಮಯದಲ್ಲಿ ಸೋಲಂಕಿ ತನ್ನ ಸ್ನೇಹಿತೆಯೊಂದಿಗೆ ಬಾರ್​ನಿಂದ ಹೊರಬರುತ್ತಲೇ ಹಿಂಬಾಲಿಸಿಕೊಂಡು ಬಂದ ಓರ್ವ ವ್ಯಕ್ತಿ ಕಿರುಕುಳು ನೀಡಿದ್ದಾಗಿ ಸೋಲಂಕಿ ಹೇಳಿಕೊಂಡಿದ್ದಾರೆ.

    ಚೈನೀಸ್​ ಸ್ನೇಹಿತರು ಸೇರಿದಂತೆ ಹುಡುಗಿಯರು ಮತ್ತು ಹುಡುಗರೊಂದಿಗೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು. ಅಲ್ಲಿ ಏಷ್ಯನ್​ ಪುರುಷರ ಒಂದು ಗುಂಪು ಇತ್ತು. ಬಳಿಕ ಓರ್ವ ಬಂದು ಕಿರುಕುಳ ನೀಡಿದ. ಅದನ್ನು ನಾವು ನಿರ್ಲಕ್ಷಿಸಿದೆವು. ಆದರೂ ಆತ ನನ್ನ ಓರ್ವ ಸ್ನೇಹಿತೆ ಮೇಲೆ ಉಗುಳಿದ. ಕೊನೆಯಲ್ಲಿ ಚೈನೀಸ್​ ಸ್ನೇಹಿತೆ ಸೇರಿ ಮೂವರು ಉಳಿದುಕೊಂಡೆವು. ಆತ ಮತ್ತೆ ನಮ್ಮ ಬಳಿ ಬಂದು ಉದ್ರಿಕ್ತನಾಗಿ ಮಾತನಾಡಿದ್ದಲ್ಲದೆ, ನಮ್ಮನ್ನೇ ಹಿಂಬಾಲಿಸುತ್ತಿದ್ದ. ಅಲ್ಲದೆ, ಅಶ್ಲೀಲ ಪದಗಳಿಂದ ಜರಿಯುತ್ತಿದ್ದ ಎಂದು ಹೇಳಿದ್ದಾರೆ.

    ಅಲ್ಲದೆ, ನನ್ನ ಚೈನೀಸ್​ ಸ್ನೇಹಿತೆ ಕುರಿತು ನಿಮ್ಮ ಕೊರೊನಾ ವೈರಸ್​ ಅನ್ನು ನಿಮ್ಮ ತವರಿಗೆ ವಾಪಸ್​ ತೆಗೆದುಕೊಂಡು ಹೋಗು ಎಂದು ಹೇಳಿದ. ಇದರಿಂದ ನಾನು ಅವನತ್ತ ಕೋಪದಿಂದ ಕೂಗಿದೆ. ನಮ್ಮ ಬಳಿ ಬಂದ ಅವನನ್ನು ದೂರ ತಳ್ಳಿದೆ. ಆದರೆ, ಆತ ನನ್ನ ತಲೆಗೆ ಬಲವಾಗಿ ಹೊಡೆದ, ಇದರಿಂದ ನಾನು ಪ್ರಜ್ಞೆ ಕಳೆದುಕೊಂಡೆ. ಆ ಬಳಿಕವು ನನಗೆ ಸಹಾಯ ಮಾಡದೇ ಸುಮ್ಮನೇ ಹೊಗುವಂತೆ ಸ್ನೇಹಿತೆಯರಿಗೆ ಬೆದರಿಕೆ ಒಡ್ಡಿರುವುದಾಗಿ ಸ್ನೇಹಿತೆಯರು ತಿಳಿಸಿದರು. ನಾನು ಹಾರ್ಟ್​ಲ್ಯಾಂಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ ಎಂದು ಸೋಲಂಕಿ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ, ಆತನ ವರ್ತನೆಯಿಂದ ತಾನು ತುಂಬಾ ಶಾಕ್​ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts