More

    ಸ್ನೇಹಿತೆಯ ಪತಿಯೆಂಬ ನಂಬಿಕೆಯಿಂದ ಮನೆಗೆ ಸೇರಿಸಿದ್ರೆ ಆತ ಮಾಡಿದ್ದನ್ನು ನೋಡಿ ಬೆಚ್ಚಿಬಿದ್ದ ಮಹಿಳೆ!

    ಬೀಜಿಂಗ್​: ತುಂಬಾ ನಂಬಿಕೆಯಿಂದ ಸ್ನೇಹಿತೆಯ​ ಗಂಡನಿಗೆ ಮನೆಯೊಳಗೆ ಪ್ರವೇಶ ನೀಡಿದರೆ ಆತ ಮಾಡಿದ ನಂಬಿಕೆ ದ್ರೋಹವನ್ನು ನೋಡಿ ಮಹಿಳೆಯೊಬ್ಬಳು ಅಕ್ಷರಶಃ ಬೆಚ್ಚಿಬಿಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಪೂರ್ವ ಚೀನಾದ ಜೆಜಿಯಾಂಗ್​ ಪ್ರಾಂತ್ಯದ ಹ್ಯಾಂಗ್​ಜೌ ನಗರದ ನಿವಾಸಿ ಕ್ಸಿಯೋನಿ (20) ಎಂಬಾಕೆ ತನ್ನ ಕಂಪನಿಯ ವಸತಿ ನಿಲಯದ ಬಾತ್​ರೂಮ್​ನಲ್ಲಿ ಸ್ನಾನ ಮಾಡುವಾಗ ಕೆಳಗೆ ಬಿದ್ದ ಕಪ್ಪು ಬಣ್ಣದ ಕಡ್ಡಿಯನ್ನು ಗಮನಿಸುತ್ತಾಳೆ. ಏನಿರಬಹುದು ಎಂಬ ಕುತೂಹಲದಿಂದ ಅದನ್ನು ಮೇಲೆತ್ತಿಕೊಂಡು ನೋಡಿದ ಆಕೆಗೆ ಕೈಯಲ್ಲಿಡಿರುವುದು ರಹಸ್ಯ ಕ್ಯಾಮೆರಾ ಎಂಬ ಅರಿವಾದ ಬೆನ್ನಲ್ಲೇ ಶಾಕ್​ ಆಗುತ್ತದೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನ್ನ ಪತ್ನಿ ಜತೆ ಕ್ಸಿಯೊನಿ ಹೊರಗಡೆ ಹೋದಾಗ ಆಕೆಯ ಮನೆಯೊಳಗೆ ಹೋಗಿ ಬಾತ್​ರೂಮ್​ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕ್ಸಿಯೋನಿ ಕ್ಯಾಮೆರಾ ಕಂಡು ಪೊಲೀಸರನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಪೊಲೀಸರು ಅರೆಸ್ಟ್​ ಮಾಡ್ತಾರೆ ಬಾಗಿಲು ತೆಗೆಯಬೇಡಿ, ತೆರೆದ್ರೂ ಹೆಂಗಸರು ಮಕ್ಕಳನ್ನು ಮುಂದೆ ಬಿಡಿ

    ತನ್ನ ಕಂಪನಿ ವಸತಿ ನಿಲಯದಲ್ಲಿ ವಾಸಿಸಲು ತನ್ನ ಸಹೋದ್ಯೋಗಿ ಕ್ಸಿಯೊಜಿಯಾಳಿಗೂ ಕ್ಸಿಯೋನಿ ಅವಕಾಶ ಮಾಡಿಕೊಟ್ಟಿದ್ದಳು. ಇಬ್ಬರ ನಡುವೆ ಉತ್ತಮ ಗೆಳೆತನ ಮೂಡಿತ್ತು. ಅನೇಕ ವರ್ಷಗಳವರೆಗೆ ಇಬ್ಬರು ಜತೆಯಲ್ಲೇ ಇದ್ದುದ್ದರಿಂದ ಸಹೋದರಿಯರಂತಿದ್ದರು. ಇದರ ನಡುವೆ ಕ್ಸಿಯೊಜಿಯಾ ಜೂನ್​ನಲ್ಲಿ ಮದುವೆಯಾಗಿ ತನ್ನ ಪತಿ ಶೆಂಗ್​ನನ್ನು ಸಹ ವಸತಿ ನಿಲಯಕ್ಕೆ ಕರೆತಂದಿದ್ದಳು.

    ಮನೆಯಲ್ಲಿ ಏಕಾಂಗಿಯಾಗಿರುವಾಗಲೆಲ್ಲಾ ಕ್ಸಿಯೊನಿ ತನ್ನ ರೂಮಿನ ಬಾಗಿಲನ್ನು ಲಾಕ್​ ಮಾಡುತ್ತಿರಲಿಲ್ಲ. ಏಕೆಂದರೆ ವಸತಿ ನಿಲಯದ ಸುತ್ತ ಬೃಹತ್​ ಕಾಂಪೌಂಡ್​ ಇದ್ದುದ್ದರಿಂದ ಎಲ್ಲವೂ ಸುರಕ್ಷಿತ ಎಂದು ಭಾವಿಸಿದ್ದಳು. ಆದರೆ, ಜುಲೈ 23ರಂದು ಆಕೆ ಸ್ನಾನ ಮಾಡಲು ಬಾತ್​ರೂಮ್​ಗೆ ತೆರಳಿದ್ದಾಳೆ. ಈ ವೇಳೆ ಕಪ್ಪು ಬಣ್ಣದ ಕಡ್ಡಿಯೊಂದು ಕೆಳಗೆ ಬಿದ್ದಿದೆ. ಅದರ ಬಗ್ಗೆ ತಿಳಿದುಕೊಳ್ಳಲು ತನ್ನ ಸ್ನೇಹಿತೆಯ ಬಳಿ ತೆರಳಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಆರೋಪಿ ಶೆಂಗ್​ ಇದು ರಹಸ್ಯ ಕ್ಯಾಮೆರಾ ಹೇಗೆ ಬಂತು? ಎಂದು ಶಾಕ್​ನಿಂದ ಕೇಳುವಂತೆ ನಾಟಕವಾಡಿದ್ದಾನೆ. ಕ್ಯಾಮೆರಾದ ಮೆಮೊರಿ ಕಾರ್ಡ್​ ಹೊರಗೆ ತೆಗೆದು ಯಾರೋ ನಿಮ್ಮ ವಿಡಿಯೋ ತೆಗೆದುಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಕತೆ ಕಟ್ಟಿದ್ದಾನೆ.

    ಆದರೆ, ಆಕೆ ಹೊರ ಹೋದಾಗಲೆಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವ ಅಭ್ಯಾಸ ಇರುವುದರಿಂದ ಅನುಮಾನ ಮೂಡಿ ಪೊಲೀಸ್ ಠಾಣೆಗೆ ಹೋಗುತ್ತಾಳೆ.​ ತನಿಖೆ ನಡೆಸಿದ ಪೊಲೀಸರಿಗೆ ಕ್ಸಿಯೊನಿ ಮನೆಯಲ್ಲಿ ಯಾವುದೇ ವಸ್ತು ಕಳ್ಳತನಾಗಿರದೇ ಇರುವುದರಿಂದ ಇದ್ಯಾರೋ ಗೊತ್ತಿರುವವರಿಂದಲೇ ನಡೆದಿರುವ ಕೃತ್ಯ ಎಂಬ ಅನುಮಾನ ಮೂಡುತ್ತದೆ. ಬಳಿಕ ಕಾರಿಡರ್​ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಶೆಂಗ್​ ಬಣ್ಣ ಬಯಲಾಗುತ್ತದೆ. ಕೊನೆಗೆ ವಿಚಾರಿಸಿದಾಗ ಶೆಂಗ್​ ತಪ್ಪೊಪ್ಪಿಕೊಳ್ಳುತ್ತಾನೆ. ಆತನನ್ನು ಆಗಸ್ಟ್​ 3ರಂದು ಪೊಲೀಸರು ಬಂಧಿಸುತ್ತಾರೆ.

    ಇದನ್ನೂ ಓದಿ: ಹೊರಗಡೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಮಗಳ ಸ್ಥಿತಿ ಕಂಡು ಶಾಕ್​ ಆದ ಪಾಲಕರು

    ಅಂದಹಾಗೆ ಶೆಂಗ್​ ಜುಲೈ 22ರಂದು ಕ್ಸಿಯೊನಿ ಮನೆಯನ್ನು ಹೊಕ್ಕಿರುತ್ತಾನೆ. ಆ ವೇಳೆ ಕ್ಸಿಯೊನಿ ಸ್ನೇಹಿತೆ ಜತೆ ಊಟಕ್ಕೆಂದು ಹೊರಗಡೆ ಹೋಗಿರುತ್ತಾಳೆ. ಬಾತ್​ರೂಮ್​ ಸಿಂಕ್​ ಟಬ್​ನ ಅಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ಶೆಂಗ್​ ಅಂಟಿಸಿರುತ್ತಾನೆ. ಅದರ ಮಾರನೇ ದಿನಕ್ಕೆ ಕ್ಯಾಮೆರಾ ಇರುವುದು ಪತ್ತೆಯಾಗುತ್ತದೆ. ಅದಗಾಲೇ 7 ವಿಡಿಯೋ ಅದರಲ್ಲಿ ರೆಕಾರ್ಡ್​ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಮದುವೆಯಾದ ತನ್ನ ಗಂಡ ಹೀಗೆ ಮಾಡುತ್ತಾನೆ ಎಂಬುದನ್ನು ಕ್ಸಿಯೊಜಿಯಾಗೂ ನಂಬಲು ಆಗಲಿಲ್ಲವಂತೆ. ಕ್ಸಿಯೊನಿ ಮೇಲಿನ ಉತ್ಸಾಹದಿಂದ ಈ ರೀತಿ ಮಾಡಿದ್ದಾಗಿ ಶೆಂಗ್​ ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸ್ ಬಂಧನದಲ್ಲಿರುವ ಶೆಂಗ್​ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

    ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ತಂಗಿ ಕೊಂದ ಅಣ್ಣ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts