More

    VIDEO| ಕಿವಿಯೊಳಗಿಂದ ಬರ್ತಿದ್ದ ವಿಚಿತ್ರ ಶಬ್ದ ಕೇಳಿ ಗಾಬರಿಯಿಂದ ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

    ಬೀಜಿಂಗ್​: ಮನೆಗಳಲ್ಲಿ ಕ್ರಿಮಿ-ಕೀಟಗಳು ಇರುವುದು ಸಾಮಾನ್ಯ. ಹೀಗಾಗಿ ರಾತ್ರಿ ಮಲಗುವ ಮುನ್ನ ಕಿವಿಯ ಬಗ್ಗೆ ಎಚ್ಚರವಹಿಸಿ ಎಂದು ಹಿರಿಯರು ಹೇಳುವ ಮಾತು ಎಷ್ಟು ಸತ್ಯ ಎಂಬುದಕ್ಕೆ ಒಂದು ಉದಾಹರಣೆ ಇದೀಗ ನಿಮ್ಮ ಮುಂದೆ ಇಡುತ್ತಿದ್ದೇವೆ.

    ದಕ್ಷಿಣ ಚೀನಾದ ಗೌಂಗಡಂಗ್​ ಪ್ರಾಂತ್ಯದ ನಿವಾಸಿ ಚೆನ್​ ಎಂಬಾಕೆ ತನ್ನ ಕಿವಿಯಲ್ಲಿ ಏನೋ ಕೆರೆಯುತ್ತಿರುವ ಶಬ್ದ ಕೇಳಿ ಗಾಬರಿಗೊಂಡು ಆಸ್ಪತ್ರೆಗೆ ಹೋಗುತ್ತಾಳೆ. ಈ ವೇಳೆ ಚೆನ್​ ಪರೀಕ್ಷಿಸುವ ವೈದ್ಯರಿಗೆ ಎಚ್ಚರಿಯೊಂದು ಎದುರಾಗುತ್ತದೆ. ಚೆನ್​​ ಕಿವಿಯಲ್ಲಿ ಸಿಲುಕಿದ್ದ ಜೀವಂತ ಜೀರಳೆಯೊಂದನ್ನು ವೈದ್ಯರು ಹೊರಗೆಳೆಯುತ್ತಾರೆ.

    ಇದನ್ನೂ ಓದಿ: ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

    ಜೀರಳೆ ಕಿವಿಯೊಕ್ಕಿದ್ದು ಹೇಗೆ?
    ಚೆನ್​​ ರಾತ್ರಿ ಮಲಗಿದ್ದ ವೇಳೆ ಜಿರಳೆಯು ನಿಧಾನವಾಗಿ ತೆವಳುತ್ತಾ ಆಕೆಯ ಕಿವಿಯನ್ನು ಸೇರಿದೆ. ಇದು ಆಕೆಯ ಗಮನಕ್ಕೆ ಬಂದಿಲ್ಲ ಎಂಬುದು ಅಚ್ಚರಿಯ ಸಂಗತಿ. ಕೆಲವು ದಿನಗಳವರೆಗೆ ಚೆನ್​​ ಸುಮ್ಮನಿದ್ದಳು. ಆದರೆ, ಆಕೆಯ ಕಿವಿಯಲ್ಲಿ ಕೆರೆಯುವ ಶಬ್ದದ ಜೊತೆಗೆ ನೋವು ಉಂಟಾಗಿದ್ದರಿಂದ ಎಚ್ಚೆತ್ತ ಚೆನ್​ ತಕ್ಷಣ ದಕ್ಷಿಣ ಚೀನಾದ ಜುವೈ ನಗರದ ಗೌಂಗಡಂಗ್​ನ ಸೆಕೆಂಡ್​ ಪೀಪಲ್ಸ್​ ಆಸ್ಪತ್ರೆಗೆ ಕಳೆದ ಮಂಗಳವಾರ ಚೆನ್​ ದಾಖಲಾಗಿದ್ದಾಳೆ.

    ಜಿರಳೆ ಪತ್ತೆಗೂ ಮುನ್ನ ಕೆಲವೊಮ್ಮೆ ಆಕೆಯ ಕಿವಿಯಿಂದ ತುರಿಕೆಯ ಅನುಭವ ಆದಾಗ ಇಯರ್​ ಬಡ್ಸ್​ನಿಂದ ಕಿವಿಯೊಳಗೆ ಹಾಕಿಯೂ ನೋಡಿದ್ದಾಳೆ. ನನ್ನ ಕಿವಿಯೊಳಗೆ ಏನಿದೆ ಎಂದು ತಿಳಿದಿರಲಿಲ್ಲ. ಆದರೆ, ಕಿವಿಯೊಳಗೆ ಏನೋ ತೆವಳಿದ ಅನುಭವವಾಗುತ್ತಿತ್ತು ಎಂದು ಚೆನ್​ ಮಾಧ್ಯಮದವರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಾಚೀನ ವಿಷ್ಣುಮೂರ್ತಿಗೆ ಕೈಹಾಕಿದ ಮರಳು ಕಲಾಕೃತಿ ಕಲಾವಿದೆಯ ಬಂಧನ…!

    ಜಿರಳೆ ಹಾಗೇ ಉಳಿದಿದ್ದರೆ ಏನಾಗುತ್ತಿತ್ತು?
    ಚೆನ್​ ಕಿವಿಯ ಕಾಲುವೆಯಲ್ಲಿದ್ದ ಹಳದಿ ಬಣ್ಣದ ಜಿರಳೆಯನ್ನು ವೈದ್ಯರು ಜೋಡಿ ಚಿಮಟದ ಸಹಾಯದಿಂದ ಯಶಸ್ವಿಯಾಗಿ ಹೊರಹಾಕಿದ್ದಾರೆ. ಆದರೆ, ಸರಿಯಾದ ಸಮಯದಲ್ಲಿ ಜಿರಳೆ ಪತ್ತೆಹಚ್ಚದೇ ಇದ್ದಿದ್ದರೆ, ಜಿರಳೆಯು ಕಿವಿಯ ತಮಟೆಯಲ್ಲಿ ರಂಧ್ರ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.

    ಬೇಸಿಗೆ ಕಾಲದಲ್ಲಿ ಹೆಚ್ಚು ಉಷ್ಣಾಂಶ ಇರುವ ಸಮಯದಲ್ಲಿ ಇಂತಹ ಕ್ರಿಮಿಗಳು ಹೆಚ್ಚಾಗಿ ಮನೆಯೊಕ್ಕುತ್ತವೆ. ಹೀಗಾಗಿ ಮನೆಗಳಲ್ಲಿ ಕೀಟ ನಿವಾರಕಗಳನ್ನು ಆಗಾಗ ಬಳಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೆ, ಕ್ರಿಮಿಗಳು ಕಿವಿಯನ್ನು ಹೊಕ್ಕಾಗ, ಇಯರ್​​ ಬಡ್ಸ್​ ಅಥವಾ ಇನ್ನಿತರ ಸಾಧನಗಳನ್ನು ಬಳಸಿ ಹೊರಗೆಳೆಯುವ ಪ್ರಯತ್ನ ಮಾಡಬೇಡಿ, ವೈದ್ಯರನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    VIDEO| ಕರೊನಾ ಪಾಸಿಟಿವ್​ ಬೆನ್ನಲ್ಲೇ ಜನರನ್ನು ತರಾಟೆಗೆ ತೆಗೆದುಕೊಂಡ ನಟಿ ನವ್ಯಾ ಸ್ವಾಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts