ನವದೆಹಲಿ: ಕೆಲವೊಮ್ಮೆ ತಮ್ಮ ವಿಚಿತ್ರ ನಡವಳಿಕೆಯಿಂದಲೇ ಕೆಲವರು ಗಮನ ಸೆಳೆದುಬಿಡುತ್ತಾರೆ. ಮಾತ್ರವಲ್ಲ, ಅದೇ ಕಾರಣಕ್ಕೆ ದೊಡ್ಡ ಸುದ್ದಿಯೂ ಆಗುತ್ತಾರೆ. ಇಲ್ಲೊಬ್ಬಳು ಮಹಿಳೆ ಕೂಡ ತನ್ನ ವಿಚಿತ್ರ ನಡವಳಿಕೆಯಿಂದ ಗಮನ ಸೆಳೆದಿದ್ದಾಳೆ.
ಅಷ್ಟಕ್ಕೂ ಈಕೆ ಮಾಡಿದ್ದೇನೆಂದರೆ, ಪ್ಲಾಸ್ಟಿಕ್ ಚೀಲದೊಳಗೆ ಇಡೀ ದೇಹವನ್ನೂ ತೂರಿಕೊಂಡು, ಪ್ಲಾಸ್ಟಿಕ್ ಕವರ್ನೊಳಗಿದ್ದುರಕೊಂಡೇ ಬಾಳೆಹಣ್ಣನ್ನು ಸೇವಿಸಿದ್ದಾಳೆ. ಅದೂ ಈಕೆ ರೈಲೊಂದರಲ್ಲಿ ಹೀಗೆ ಮಾಡಿದ್ದರಿಂದ ಬಹಳಷ್ಟು ಜನರ ಗಮನ ಸೆಳೆದಿದ್ದಾಳೆ.
ಚೀನಾದ ಹುಬೇ ಎಂಬಲ್ಲಿನ ಸಬ್ವೇ ಟ್ರೇನ್ನಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದ್ದು, ಪ್ರಯಾಣಿಕರೊಬ್ಬರು ಅದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇಲ್ಲಿನ ಕರೊನಾ ಸೋಂಕಿನ ಕಾರಣಕ್ಕೆ ಸಾಕಷ್ಟು ನಿರ್ಬಂಧಗಳಿದ್ದರೂ ಈಕೆಯದ್ದು ಅತಿರೇಕ ಎಂಬುದಾಗಿ ಕೆಲವರು ಹೇಳಿಕೊಂಡಿದ್ದು, ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಡಿಮಾನಿಟೈಸೇಷನ್ ಆಗಿ ಆರು ವರ್ಷ ಕಳೆದ್ರೂ ಹೆಚ್ಚಾಯ್ತು ಜನರ ಕೈಯಲ್ಲಿ ನಗದು!
ಸಿಎಂ ಬದಲಾವಣೆ ಆಗಿದ್ದರಿಂದಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ