More

    ‘ಅಮೆರಿಕ ಸಾಕು, ಊರಲ್ಲಿ ಸೆಟ್ಲ್​ ಆಗೋಣ..’ ಎಂದು ಬಂದ ಮಹಿಳೆಗೆ ಮೋಸ!

    ಶಿವಮೊಗ್ಗ: ವಿದೇಶದಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತವರಿನಲ್ಲಿ ಜಮೀನಿನ ಮೇಲೆ ಕೋಟಿ ಕೋಟಿ ಹೂಡಿಕೆ ಮಾಡಿದ್ದ ಮಹಿಳೆಯೊಬ್ಬರು ವಕೀಲನಿಂದ ಮೋಸ ಹೋಗಿದ್ದಾರೆ. ಜಮೀನು ಕೊಡಿಸುವ ನೆಪದಲ್ಲಿ ಜಮೀನಿನ ಮೂಲ ದಾಖಲೆ ನೀಡದೆ ಸತಾಯಿಸುತ್ತಿರುವ ವಕೀಲನ ಮೇಲೆ ತಿರುಗಿಬಿದ್ದಿರುವ ಅಮೆರಿಕ ಪೌರತ್ವ ಹೊಂದಿರುವ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಮೂಲತಃ ಸೊರಬ ಮೂಲದ ಮಹಿಳೆ ಅಮೆರಿಕದಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂದಿದ್ದು ತನ್ನ ಸಹೋದರನೊಂದಿಗೆ ಸೊರಬ ತಾಲೂಕಿನ ಹರಳಿಗೆ ಗ್ರಾಮದಲ್ಲಿ ನೆಲೆಸಿದ್ದರು. ಈ ವೇಳೆ ಜಮೀನು ಖರೀದಿಸಲು ಪರಿಚಯಸ್ಥರ ವಕೀಲರೊಬ್ಬರನ್ನು ಸಂಪರ್ಕಿಸಿದ್ದರು. ಜಮೀನು ಕೊಡಿಸುವುದಾಗಿ ಭರವಸೆ ನೀಡಿದ್ದ ವಕೀಲ, ಕೊನೆಗೆ ನಂಬಿಸಿ ಪೂರ್ಣ ಹಣ ಪಡೆದು ಸ್ವಲ್ಪ ಜಮೀನು ಕೊಡಿಸಿ ಮೋಸ ಮಾಡಿದ್ದಾನೆ.

    ಆಗಿದ್ದೇನು?: ಅಮೆರಿಕದಲ್ಲಿ ಹಲವು ವರ್ಷ ವಾಸವಿರುವ ಸೊರಬ ತಾಲೂಕಿನ ಮಹಿಳೆ ಐಟಿ ಉದ್ಯೋಗಿಯಾಗಿದ್ದು ಅಲ್ಲಿನ ಪೌರತ್ವ ಪಡೆದಿದ್ದರು. ವಿದೇಶ ಜೀವನ ಸಾಕೆನಿಸಿದ್ದ ಆಕೆ ತವರಿಗೆ ಮರಳಿದ್ದರು. ವಿದೇಶದಲ್ಲಿ ದುಡಿದ ಹಣದ ಜತೆಗೆ ಸೊರಬ ತಾಲೂಕಿನ ಉಪ್ಪಳ್ಳಿಯಲ್ಲಿದ್ದ ನಾಲ್ಕು ಎಕರೆ ಜಮೀನು ಮಾರಾಟ ಮಾಡಿ, ಸೊರಬ ತಾಲೂಕಿನ ಹರಳಿಗೆ ಗ್ರಾಮದಲ್ಲಿ 15.5 ಎಕರೆ ಜಮೀನು ಖರೀದಿಗೆ ಮುಂದಾಗಿದ್ದರು. ಇದಕ್ಕಾಗಿ ಪರಿಚಯಸ್ಥ ವಕೀಲನನ್ನು ಸಂಪರ್ಕಿಸಿದ್ದರು. ಆತ ಜಮೀನು ಕೊಡಿಸುವುದಾಗಿ ಭರವಸೆ ನೀಡಿದ್ದ. ಆತನ ಮಾತು ನಂಬಿ ಜಮೀನಿಗೆ ಪೂರ್ಣ ಹಣವನ್ನೂ ಕೊಟ್ಟಿದ್ದರು. ಆತ ಹರಳಿಗೆ ಗ್ರಾಮದಲ್ಲಿ 7.9 ಎಕರೆ ಜಮೀನು ಕೊಡಿಸಿದ್ದ. ಮತ್ತೆ ಮೂರು ಎಕರೆ ಜಮೀನು ಕೊಡಿಸುವುದಾಗಿ ಪೂರ್ಣ ಹಣ ಪಡೆದಿದ್ದ.

    ಬಳಿಕ ಉಳುವಿ ಹೋಬಳಿಯ ಬಾಳಗೋಡಿನ ಬಳಿ 5.20 ಎಕರೆ ಜಮೀನು ಕೊಡಿಸುವುದಾಗಿ ಹೇಳಿ ಮತ್ತೆ ಹಣ ಪಡೆದಿದ್ದಾನೆ. ಆದರೆ ಮೂಲ ದಾಖಲೆ ನೀಡದೆ ಸತಾಯಿಸುತ್ತಿದ್ದಾನೆ. ಪ್ರಶ್ನಿಸಿದ್ದಕ್ಕೆ ಜಮೀನು ಅಭಿವೃದ್ಧಿ ಪಡಿಸುತ್ತಿರುವುದಾಗಿ ಸಬೂಬು ಹೇಳಿದ್ದಾನೆ. ನಂತರ ಚಂದ್ರಗುತ್ತಿ ಬಳಿ 10.3 ಎಕರೆ ಜಮೀನು ಕೊಡಿಸುವುದಾಗಿ ನಂಬಿಸಿ ಅದರ ಹಣವನ್ನೂ ಪಡೆದಿದ್ದಾನೆ.

    ಇತ್ತೀಚೆಗೆ ಮಹಿಳೆ ಕರೆ ಮಾಡಿ ಮೂಲ ದಾಖಲೆಗಳನ್ನು ಕೇಳಿದ್ದಕ್ಕೆ ಮನೆ ಬಳಿ ಬರಲು ಹೇಳಿ ಹಲ್ಲೆ ನಡೆಸಿದ್ದಲ್ಲದೆ, ಯಾವುದೇ ದಾಖಲೆ ಕೊಡುವುದಿಲ್ಲ. ಇನ್ನೊಮ್ಮೆ ಜಮೀನಿನ ವಿಚಾರವಾಗಿ ಕಾಣಿಸಿಕೊಂಡರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಇದರಿಂದ ದಿಕ್ಕು ತೋಚದಂತಾದ ಮಹಿಳೆ ಇದೀಗ ಸೊರಬ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts