More

    ಕಳೆದುಹೋಗಿದ್ದ ಸೂಟ್​ಕೇಸ್​ 4 ವರ್ಷಗಳ ಬಳಿಕ ಸಿಕ್ಕಿತು!; ಅಚ್ಚರಿಯ ಸಂಗತಿ ಹಂಚಿಕೊಂಡ ಮಹಿಳೆ

    ನವದೆಹಲಿ: ಯಾವುದಾದರೂ ಬ್ಯಾಗ್ ಅಥವಾ ಲಗೇಜ್ ಕಳೆದುಹೋದರೆ ಒಂದೆರಡು ದಿನಗಳಲ್ಲಿ ಸಿಕ್ಕಿಬಿಡುತ್ತದೆ. ಇಲ್ಲವೇ ಒಂದೆರಡು ವಾರಗಳಲ್ಲಿ ಪತ್ತೆಯಾಗಿಬಿಡುತ್ತದೆ. ಅದಾದಮೇಲೂ ಸಿಗಲಿಲ್ಲ ಎಂದರೆ ಅದು ಮತ್ತೆ ಸಿಗುವುದು ಬಹುತೇಕ ಅನುಮಾನ ಎಂದೇ ಅರ್ಥ. ಆದರೆ ಇಲ್ಲೊಂದು ಕಡೆ ಲಗೇಜೊಂದು ಕಳೆದುಹೋದ ನಾಲ್ಕು ವರ್ಷಗಳ ಬಳಿಕ ಸಿಕ್ಕಿದೆ.

    ಅಮೆರಿಕದ ಒರೆಗಾವ್ ನಿವಾಸಿ ಎಪ್ರಿಲ್ ಗವಿನ್ ಎಂಬಾಕೆ 2018ರಲ್ಲಿ ಕಳೆದುಕೊಂಡಿದ್ದ ಸೂಟ್​ಕೇಸ್ ಆಕೆಗೆ ಮೊನ್ನೆಮೊನ್ನೆಯಷ್ಟೇ ಸಿಕ್ಕಿದೆ. ಈ ಬಗ್ಗೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಪರೂಪದ ಅನುಭವ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಬಿಜಿನೆಸ್​ ಟ್ರಿಪ್ ಮೇಲೆ 2018ರಲ್ಲಿ ಯುನೈಟೆಡ್ ಏರ್​ಲೈನ್ಸ್​ನಲ್ಲಿ ಚಿಕಾಗೋ ತೆರಳಿದ್ದ ಗವಿನ್, ಅಲ್ಲಿಂದ ಮರಳುವಾಗ ಸೂಟ್​ಕೇಸ್ ಕಳೆದುಕೊಂಡಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ಅದು ಹೊಂಡುರಾಸ್​ನಲ್ಲಿ ಪತ್ತೆಯಾಗಿದೆ. ಕಳೆದ ವಾರ ನನಗೆ ಹೌಸ್ಟನ್​ನಿಂದ ಕರೆ ಬಂದಿದ್ದು, ಹೊಂಡುರಾಸ್​ನಲ್ಲಿ ಸೂಟ್​ಕೇಸ್ ಸಿಕ್ಕಿದ್ದಾಗಿ ತಿಳಿಸಿದರು. ಈ ವಿಷಯವನ್ನು ನನಗೆ ನಂಬಲಿಕ್ಕೇ ಸಾಧ್ಯವಾಗಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

    ಕಳೆದುಹೋದ ಬ್ಯಾಗ್ ಬಗ್ಗೆ ಏರ್​ಲೈನ್ಸ್​ನವರು ಭಾಗಶಃ ಪರಿಹಾರ ನೀಡಿದ್ದರು. ಇದೀಗ ಬ್ಯಾಗ್ ಸಿಕ್ಕಿದ್ದಾಗಿ ತಿಳಿಸಿದ್ದಾರೆ. ಸೂಟ್​​ಕೇಸ್ ಸ್ವಲ್ಪ ಡ್ಯಾಮೇಜ್ ಆಗಿದ್ದರೂ ಅದರೊಳಗಿನ ವಸ್ತು ಹಾಗೇ ಇದೆ ಎಂದು ಏರ್​ಲೈನ್ಸ್​ನವರು ತಿಳಿಸಿದ್ದರೂ, ಇಷ್ಟು ದಿನ ಆ ಸೂಟ್​ಕೇಸ್​ ಎಲ್ಲಿತ್ತು, ಹೇಗೆ ಮಿಸ್ ಆಗಿತ್ತು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. –ಏಜೆನ್ಸೀಸ್

    ಬಾಯ್​ಫ್ರೆಂಡ್​ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

    ಗ್ರಾಹಕರಿಬ್ಬರ ಖಾತೆಯಿಂದಲೇ ಕೋಟಿಗಟ್ಟಲೆ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡ ಬ್ಯಾಂಕ್ ಅಧಿಕಾರಿ!

    ವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts