More

    ಸಾಲದಿಂದ ತಪ್ಪಿಸಿಕೊಳ್ಳಲು ಫೇಸ್​ಬುಕ್​ನಲ್ಲಿ ಸತ್ತಂತೆ ಫೋಟೋ ಹಾಕಿದ ಮಹಿಳೆ..!

    ಇಂಡೊನೇಷ್ಯಾ: ಸಾಲ ಮರುಪಾವತಿ ಮಾಡಲು ಆಗದೇ ಇರುವವರು ಸಾವಿರಾರ ರೀತಿ ನಾಟಕ ಮಾಡುವುದನ್ನು ನಾವು ನೋಡಿದ್ದೇವೆ. ಕೆಲವರು ದೇಶ ಬಿಟ್ಟು ಓಡಿ ಹೋದರೆ ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ನಾಪತ್ತೆಯಾಗುತ್ತಾರೆ. ಆದರೆ ಈ ಮಹಿಳೆ ಮಾತ್ರ ತಾನು ಸತ್ತಿರುವ ರೀತಿ ಫೋಟೊ ಹೊಡೆದು ಫೇಸ್​ಬುಕ್​ನಲ್ಲಿ ಹಾಕಿದ್ದಾಳೆ!

    ಇಂಡೋನೇಷ್ಯಾದ ಲಿಜಾ ದೇವಿ ಪ್ರಮಿತಾ ಎಂಬ ಮಹಿಳೆ, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಲು ಸತ್ತಿರುವ ನಾಟಕ ಮಾಡಿದ್ದಾಳೆ. ಆಕೆ ಶವದ ರೀತಿ ವೇಷ ಹಾಕಿದ್ದು ಮಗಳ ಸಹಾಯದಿಂದ ಫೋಟೋ ತೆಗೆಸಿಕೊಂಡಿದ್ದಾಳೆ. ನಂತರ ಆಕೆಯ ಮಗಳು ಆ ಫೋಟೊಗಳನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾಳೆ.

    ಆದರೆ ಸಾಲ ನೀಡಿದವರಿಗೆ ಆಕೆಯ ಅಚಾನಕ್​ ಸಾವಿನಿಂದಾಗಿ ಅನುಮಾನ ಮೂಡಿದ್ದು ಈ ಪೋಸ್ಟ್​ ಹಿಂದಿನ ಸತ್ಯಾಂಶವನ್ನು ಪರಿಶೀಲಿಸಿದ್ದಾರೆ. ಆಗ ನಿಜ ವಿಷಯ ಬೆಳಕಿಗೆ ಬಂದಿದೆ.

    ಸಾಲದಿಂದ ತಪ್ಪಿಸಿಕೊಳ್ಳಲು ಫೇಸ್​ಬುಕ್​ನಲ್ಲಿ ಸತ್ತಂತೆ ಫೋಟೋ ಹಾಕಿದ ಮಹಿಳೆ..!

    ಮಾಯಾ ಗುಣವಾನ್ ಎನ್ನುವಾತ, ಪ್ರಮಿತಾಗೆ 22,000 ರೂ.ಸಾಲ ನೀಡಿದ್ದರು. ಹಣವನ್ನು ಮರುಪಾವತಿಸಲು ಸಾಧ್ಯವಾಗದ ಪ್ರಮಿತಾ ತನ್ನ ಸಾಲವನ್ನು ಮರುಪಾವತಿ ಮಾಡಲು ಇನ್ನಷ್ಟು ಸಮಯ ಕೇಳಿದ್ದಾಳೆ. ಆದರೆ, ಎರಡನೇ ಗಡುವು ಸಮೀಪಿಸುತ್ತಿದ್ದಂತೆ, ಆಕೆ ಈ ವಿಲಕ್ಷಣವಾದ ಟ್ರಿಕ್ ಮಾಡಿದ್ದಾರೆ. ಸದ್ಯ ಪ್ರಮಿತಾ ತಲೆಮರೆಸಿಕೊಂಡಿದ್ದು ಗುಣವಾನ್​ಗೆ ಇನ್ನೂ ಕೊಟ್ಟ ಹಣ ವಾಪಸ್​ ಸಿಕ್ಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts