More

    ಐಶಾರಾಮಿ ಕಾರು ಖರಿದೀಸಲು ಸಾಲಕ್ಕಾಗಿ ಈಕೆ ಬ್ಯಾಂಕ್​ಗೆ ಹೇಳಿದ ಸುಳ್ಳು ಕೇಳಿದ್ರೆ ಶಾಕ್​ ಆಗ್ತೀರಾ!

    ಉಡುಪಿ: ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ವೈದ್ಯೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

    ಉಪ್ಪೂರು ಸಾಲ್ಮರ ನಿವಾಸಿ ಡಾ.ರೆನಿಟಾ ಸೋನಿಯಾ ಡಿಸೋಜಾ ಬಂಧಿತ ಆರೋಪಿ. ಈಕೆಗೆ ಸಹಾಯ ಮಾಡಿದ ಇನ್ನಿಬ್ಬರನ್ನು ಸಹ ಪೊಲೀರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ಹಗಲಿನಲ್ಲೇ ಕಚೇರಿ ಬಳಿ ಪತ್ನಿಗೆ ಚಾಕು ಇರಿದಿದ್ದ ಭಾರತೀಯನಿಗೆ ದುಬೈನಲ್ಲಿ ಸಿಕ್ಕ ಶಿಕ್ಷೆ ಎಂಥದ್ದು ಗೊತ್ತಾ?

    ರೆನಿಟಾ ಐಷಾರಾಮಿ ಕಾರು ಖರೀದಿಗೆ ಸಾಲ ಪಡೆಯಲು ಮುಂದಾಗಿದ್ದಳು. ಇದಕ್ಕಾಗಿ ಕಾಪು ಮೂಡಬೆಟ್ಟಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ಅರ್ಜಿ ಸಲ್ಲಿಸಿದ್ದಳು. ನಾನು ಮಣಿಪಾಲದಲ್ಲಿ ವೈದ್ಯೆಯಾಗಿದ್ದೇನೆ ಮತ್ತು ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಅಲ್ಲದೆ, ತನಗೆ ಮಾಸಿಕ 2.66 ಲಕ್ಷ ಸಂಬಳವಿದೆ ಎಂದು ನಕಲಿ ದಾಖಲೆ ಸಹ ಸೃಷ್ಟಿಸಿದ್ದಳು.

    ಆದರೆ, ವೇತನ ಸ್ಲಿಪ್ ಪರಿಶೀಲಿಸಲು ಮಣಿಪಾಲ ಸಂಸ್ಥೆಯ ಗಮನಕ್ಕೆ ತಂದಾಗ ಸತ್ಯ ಬಯಲಾಗಿದೆ. ತಮ್ಮಲ್ಲಿ ಆ ರೀತಿಯ ಯಾವುದೇ ವೈದ್ಯೆ ಕೆಲಸ ಮಾಡುತ್ತಿಲ್ಲ ಎಂದು ಸಂಸ್ಥೆ ಹೇಳಿದೆ.

    ಇದನ್ನೂ ಓದಿ: VIDEO| ನನ್ನ ಮಲಗು ಬಾ ಅಂತೀಯಾ…ರಾಜಕೀಯ ಮುಖಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ!

    ಬಳಿಕ ಬ್ಯಾಂಕ್ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರೆನಿಟಾ ಹಾಗೂ ಅವಳಿಗೆ ನಕಲಿ ದಾಖಲೆ ಮಾಡಿಕೊಟ್ಟ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪೊಲೀಸ್​ ಜೀಪ್ ಕಂಡೊಡನೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆತಪ್ಪಿ ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts