More

    ನೆಲಜಿ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ

    ಮಡಿಕೇರಿ: ನಾಪೋಕ್ಲುವಿನ ಸಮೀಪದ ನೆಲಜಿ ಗ್ರಾಮದಲ್ಲಿ ಶನಿವಾರ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    ಗ್ರಾಮದ ಮುಂಡಂಡ ಪ್ರಭು ಪೆಮ್ಮಯ್ಯ ಪತ್ನಿ ಡೀನಾ(ತೀರ್ಥ)(27) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.


    ಪತಿ ಪ್ರಭು ಪೆಮ್ಮಯ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, 8 ವರ್ಷದ ಪುತ್ರಿ ಇದ್ದಾಳೆ. ಕೆಲವು ದಿನಗಳಿಂದ ಡೀನಾ ಹೊದ್ದೂರಿನಲ್ಲಿ ಪಾಲಕರೊಂದಿಗೆ ವಾಸವಾಗಿದ್ದರು. ಶನಿವಾರ ಬೆಳಗ್ಗೆ ತಮ್ಮ ಕಾರಲ್ಲಿ ನೆಲೆಜಿ ಗ್ರಾಮದಲ್ಲಿರುವ ಸ್ವಂತ ಮನೆಗೆ ತೆರಳಿದ್ದರು ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವ ಡೆತ್‌ನೋಟ್ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ .


    ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಕ್ರೈಂ ಪಿಎಸ್‌ಐ ಬಿ.ಶ್ರೀಧರ್, ಮಹಿಳಾ ಪೇದೆ ಪೂರ್ಣಿಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts