More

    ಬಾಕ್ಸಿಂಗ್​ನಲ್ಲಿ ಯುವತಿಗೆ ಎದುರಾಳಿಯಾಗಿದ್ಯಾರು? ಫಲಿತಾಂಶವೇನು ಗೊತ್ತೆ?

    ವಾಷಿಂಗ್ಟನ್: ಮಹಿಳೆಯೋರ್ವಳು ನಾಯಿಯ ಜತೆ ಬಾಕ್ಸಿಂಗ್ ಆಡುತ್ತ ಅದರ ಮುಖಕ್ಕೆ ಪದೇಪದೆ ಗುದ್ದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮಹಿಳೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
    ಈ ಘಟನೆ ನಡೆದಿದ್ದು ಅಮೆರಿಕದ ಇದಾಹೋ ರಾಜ್ಯದಲ್ಲಿ . ಆಕೆ ಬಾಕ್ಸಿಂಗ್ ಗ್ಲೌಸ್ ತೊಟ್ಟು ಜರ್ಮನ್ ಶೆಫರ್ಡ್​ ನಾಯಿಯ ತಲೆಗೆ ಗುದ್ದುತ್ತಿರುವ ದೃಶ್ಯ ಈ ​​ವಿಡಿಯೋದಲ್ಲಿದೆ.
    ಅಷ್ಟೇ ಅಲ್ಲದೆ, ಆಕೆ ನಾನು ನಾಯಿಯೊಂದಿಗೆ ಬಾಕ್ಸಿಂಗ್ ಆಡುತ್ತಿದ್ದೇನೆ. ಕೆನಡಾದ ಗಾಯಕಿ ಹಾಗೂ ಪ್ರಾಣಿ ದಯಾ ಸಂಘದ ಸದಸ್ಯೆ ಸಾರಾ ಮೆಕ್ಲಾಕ್ಲಾನ್ ಎಲ್ಲಿ ಎಂದು ವ್ಯಂಗ್ಯವಾಡಿದ್ದಾಳೆ.

    ಇದನ್ನೂ ಓದಿ: ಕರೊನಾ ಅಟ್ಟಹಾಸದ ಮಧ್ಯದಲ್ಲೇ ಪ್ರವಾಹದ ರುದ್ರ ನರ್ತನ

    ನಾನು ನಾಯಿಗೆ ತುಂಬ ಕಷ್ಟದಿಂದ ಗುದ್ದಿದ್ದೇನೆ ಎಂದೂ ಆಕೆ ವಿಡಿಯೋ ಮುಗಿಯುವ ಮುನ್ನ ಹೇಳಿದ್ದಾಳೆ. ಈ ಅಮಾನವೀಯ ಘಟನೆಯ ತುಣಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಇದನ್ನು ಪ್ರಾಣಿ ದೌರ್ಜನ್ಯ ಪ್ರಕರಣ ಎಂದು ಹಲವು ನೆಟ್ಟಿಗರು ಟೀಕಿಸಿದ್ದಾರೆ.
    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಜನ ಆಕ್ರೋಶಗೊಳ್ಳುತ್ತಿದ್ದಂತೆ ಹಲವು ಕರೆಗಳು, ಇ- ಮೇಲ್​​ಗಳು ಬರುತ್ತಿದ್ದಂತೆ ಇದಾಹೋ ಹ್ಯೂಮನ್ ಸೊಸೈಟಿ ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಣಿಗೆ ಹಿಂಸೆ ನೀಡಿದ ಆ ಮಹಿಳೆಯ ವಿರುದ್ಧ ತನಿಖೆ ಆರಂಭಿಸಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್).

    ಗರ್ಭಸ್ಥ ಕರಡಿ ಕೊಲೆಯಾದ ಫೋಟೊ ವೈರಲ್ ಆಗುತ್ತಿದ್ದಂತೆ ಒಬ್ಬ ಅರೆಸ್ಟ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts