More

    VIDEO| ಪೇಂಟ್​ ರೋಲರ್​ನಲ್ಲಿ ವಧುವಿಗೆ ಅರಿಶಿನ ಹಚ್ಚಿದ ಮಹಿಳೆ! ಫನ್ನಿ ಅನ್ನಿಸಿದ್ರೂ ಡಿಫರೆಂಟ್​

    ನವದೆಹಲಿ: ಕರೊನಾ ಸೋಂಕಿನಿಂದ ಪಾರಾಗಲು ಸೋಶಿಯಲ್​ ಡಿಸ್ಟೆನ್ಸ್​ ಕಡ್ಡಾಯವೆಂದು ವೈದ್ಯಲೋಕವೇ ಹೇಳುತ್ತಿದೆ. ಇದು ಸಾರ್ವಜನಿಕ ಸ್ಥಳ ಮಾತ್ರವಲ್ಲ, ಮದುವೆ-ಸಭೆ-ಸಮಾರಂಭಕ್ಕೂ ಅನ್ವಯ. ಮಹಾಮಾರಿ ಕೋವಿಡ್​ನ ಭೀಕರತೆ ಅರಿತವರು ಮನೆಯ ಕಾರ್ಯಕ್ರಮಗಳಲ್ಲೂ ಪರಸ್ಪರ ದೈಹಿಕ ಅಂತರ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಹಲವರು ಆನ್​ಲೈನ್​ ಮೂಲಕವೇ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನೂ ಕೆಲವರು ವಾಟ್ಸ್ಆ್ಯಪ್​ ವಿಡಿಯೋ ಕಾಲ್​ ಮೂಲಕವೇ ಮನೆಗೆ ಸೊಸೆ ತುಂಬಿಸಿಕೊಳ್ಳುವ ಶಾಸ್ತ್ರವನ್ನೂ ಮಾಡಿದ್ದನ್ನು ಕೇಳಿದ್ದೇವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ಸಂಭವಿಸಿದ್ದು, ವಿಡಿಯೋ ವೈರಲ್​ ಆಗಿದೆ.

    ಮಹಿಳೆಯೊಬ್ಬರು ವಧುವಿಗೆ ‘ಪೇಂಟ್ ರೋಲರ್’ ಮೂಲಕ ಅರಿಶಿನ ಶಾಸ್ತ್ರ ನೆರವೇರಿಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಈ ವಿಡಿಯೋ ನೋಡೋಕೆ ಸಖತ್​ ಫನ್ನಿ ಅನ್ನಿಸಿದರೂ ಒಂಥರಾ ಡಿಫರೆಂಟ್​ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬುವವರು ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಾಕಿದ್ದು, ‘ಹೊಸತನದಲ್ಲಿ ಹಳದಿ ಶಾಸ್ತ್ರ. ಇದು ಕೋವಿಡ್​ ಫರಿಣಾಮ’ ಎಂದು ಬರೆದುಕೊಂಡಿದ್ದಾರೆ. ಈ ಮದುವೆ ಲೂಧಿಯಾನದಲ್ಲಿ ನಡೆದಿದೆ.

    ಭಾರತದಲ್ಲಿ ಮದುವೆ ಮುಹೂರ್ತಕ್ಕೂ ಮುನ್ನ ವಧು-ವರನಿಗೆ ಎರಡೂ ಕುಟುಂಬಸ್ಥರು ಸೇರಿಗೆ ಈ ಶಾಸ್ತ್ರವನ್ನು ಮಾಡುತ್ತಾರೆ. ಎಣ್ಣೆ- ಅರಿಶಿನ ಪುಡಿ ಮಿಕ್ಸ್​ ಮಾಡಿ ಅದನ್ನು ವರ ಮತ್ತು ವಧುವಿನ ಕೆನ್ನೆ, ಕೈ-ಕಾಲುಗಳಿಗೆ ಹಚ್ಚಿ, ಅಕ್ಷತೆಕಾಳು ಹಾಕಿ ಆರ್ಶೀವದಿಸುತ್ತಾರೆ. ಆನಂತರ ಸ್ನಾನ ಮಾಡಿಸುತ್ತಾರೆ. ಕೋವಿಡ್​ ಆತಂಕದಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಮದುವೆಯ ಎಲ್ಲ ಶಾಸ್ತ್ರಗಳನ್ನೂ ನೆರವೇರಿಸಲು ವಿಭಿನ್ನವಾಗಿ ಯೋಚಿಸಿದ ಮಹಿಳೆಯೊಬ್ಬರು ಪೇಂಟ್​ರೋಲರ್​ ಮೂಲಕ ವಧುವಿಗೆ ಅರಿಶಿನ ಹಚ್ಚಿದ್ದಾರೆ.

    ‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts