More

    ದಾಖಲೆ ಪುಟ ಸೇರಿದ 709 ಕಿ.ಮೀ ಉದ್ದದ ಮಿಂಚು! ಎಲ್ಲಿ? ಯಾವಾಗ?

    ಸ್ವಿಜರ್‌ಲ್ಯಾಂಡ್‌: ಮಿಂಚಿನ ವೇಗದಲ್ಲಿ ಬಂದು ಮರೆಯಾಯಿತು ಎನ್ನುವ ಮಾತೇ ಇದೆಯಲ್ಲವೆ? ಮಿಂಚೇ ಹಾಗೆ. ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ. ಒಂದೇ ಒಂದು ಸೆಕೆಂಡ‌ಗಳಲ್ಲಿ ಆಗಸವನ್ನೇ ಸೀಳಿ ಬಂದಂತೆ ಭಾಸವಾಗುವ ಈ ಮಿಂಚಿಗೂ ದಾಖಲೆ ಬರೆದಿಡುತ್ತಾರೆ ಎನ್ನುವುದು ನಿಮಗೆ ಗೊತ್ತೆ?
    ಹೌದು. ಅಮೆರಿಕದ ಸ್ವಿಜರ್‌ಲ್ಯಾಂಡ್‌ನಲ್ಲಿರುವ ವಿಶ್ವ ಹವಾಮಾನ ಇಲಾಖೆಯು ಇದೀಗ ದಾಖಲೆ ಮಾಡಿರುವ ಮಿಂಚಿನ ಕುರಿತಾಗಿ ವಿವರಣೆ ನೀಡಿದೆ.

    ಇಲ್ಲಿಯವರೆಗಿನ ಬಲು ಉದ್ದದ ಮಿಂಚು ಎಂದು ಎನಿಸಿಕೊಂಡಿರುವುದು 2018ರ ಅಕ್ಟೋಬರ್‌ 31ರಂದು ಕಾಣಿಸಿಕೊಂಡ ಮಿಂಚು. ಬ್ರೆಜಿಲ್‌‌ನ ಆಗಸದಲ್ಲಿ ಈ ಮಿಂಚು ಕಾಣಿಸಿಕೊಂಡಿತ್ತಂತೆ. ಇದು 709 ಕಿ.ಮೀ. ಉದ್ದವಿರುವುದಾಗಿ ಇಲಾಖೆ ಹೇಳಿದ್ದು, ಅದನ್ನು ದಾಖಲೆಯ ಪಟ್ಟಿಗೆ ಸೇರಿಸಲಾಗಿದೆ.

    ಅದೇ ರೀತಿ ಇನ್ನೊಂದು ದಾಖಲೆಯಾಗಿರುವುದು ಉತ್ತರ ಅರ್ಜೆಂಟಿನಾದ ಆಗಸದಲ್ಲಿ ಮೂಡಿದ ಮಿಂಚು. 16.73 ಸೆಕೆಂಡ್‌ಗಳ ಕಾಲ ಈ ಮಿಂಚು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಕಾಣಿಸಿಕೊಂಡಿರುವ ಅತಿ ಹೆಚ್ಚು ಕಾಲ ಹೊಡೆದ ಮಿಂಚು ಇದಾಗಿದೆ. 2019ರ ಮಾರ್ಚ್ 4ರಂದು ಕಾಣಿಸಿಕೊಂಡ ಈ ಮಿಂಚು, ಅತ್ಯಂತ ಸುದೀರ್ಘಾವಧಿಗೆ ಕಾಣಸಿಕ್ಕ ಮಿಂಚು ಎಂದು ತಿಳಿದು ಬಂದಿದೆ. ಈ ಹೊಸ ದಾಖಲೆಗಳನ್ನು ಉಪಗ್ರಹಾಧರಿತ ತಂತ್ರಜ್ಞಾನವೊಂದರಿಂದ ಸೆರೆ ಹಿಡಿಯಲಾಗಿದೆ.

    ವಿಡಿಯೋ: ನಾಯಿಗೆ ಕೈತುತ್ತು ನೀಡೋ ಬಾಲೆಗೆ ಭಾರಿ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts