More

    ಪಾಲಕರು ಒಪ್ಪಿದರಷ್ಟೇ ಶಾಲೆ ಆರಂಭಿಸ್ತೇವೆ – ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

    ಬೆಂಗಳೂರು: ತಜ್ಞರ ಅಭಿಪ್ರಾಯ ಪಡೆದು ಪಾಲಕರು ಒಪ್ಪಿಗೆ ಪಡೆದ ಬಳಿಕ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ವಿವಿಧ ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರೊನಾ ಸಾಂಕ್ರಾಮಿಕ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಶಾಲೆ ಆರಂಭಕ್ಕೆ ತರಾತುರಿ ಇಲ್ಲ ಎಂದು ತಿಳಿಸಿದರು.

    ಇದನ್ನೂ ಓದಿ: ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !

    ಸಭೆಯಲ್ಲಿ ಈ ಕುರಿತ ಚರ್ಚೆಗೆ ಸಹ ಸಿಎಂ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಕರೊನಾ ನಿಯಂತ್ರಣ, ಕೊರೊನಾ ಸಾವಿನ ಪ್ರಮಾಣ ತಗ್ಗಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಆಸಕ್ತಿ ತೋರಿದರೇ ಹೊರತು ಶಾಲೆ ಆರಂಭದ ವಿಚಾರಕ್ಕೆ ಗಮನ ಕೊಡಲಿಲ್ಲ, ಮುಂದೆ ಪರಿಸ್ಥಿತಿ ನೋಡಿಕೊಂಡು ಬೇರೆ ವಿಷಯಗಳ ಬಗ್ಗೆ ನಿರ್ಧರಿಸೋಣ ಎಂದ ಜಿಲ್ಲಾಡಳಿಗಳಿಗೆ ಸೂಚಿಸಿದರು ಮೂಲಗಳು ತಿಳಿಸಿವೆ.

    ಕರೊನಾ ಆತಂಕದ ನಡುವೆ ಶಾಲೆ ಆರಂಭಿಸುವುದು ಸೂಕ್ತವಲ್ಲ. ಕರೊನಾ ಕುರಿತಂತೆ ಪೋಷಕರಲ್ಲಿ ಆತಂಕವಿದೆ. ಮಕ್ಕಳ ಜೀವನದ ಜತೆ ಚೆಲ್ಲಾಟ ಬೇಡ. ಸರಕಾರ ಶಾಲೆ ಆರಂಭಿಸುವ ನಿರ್ಧಾರ ಕೈಬಿಡಬೇಕು. ಸೂಕ್ತ ಸಿದ್ಧತೆ ಇಲ್ಲದೇ ಶಾಲೆ,ಕಾಲೇಜು ಆರಂಭಿಸಬೇಡಿ.
    ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

    ‘ನಬನ್ನಾ’ವನ್ನು ಇಂದು ನಾಳೆ ಮುಚ್ಚಿರುವುದೇಕೆ?: ಬಿಜೆಪಿ ಯುವಮೋರ್ಚಾದ ನಬನ್ನಾ ಚಲೋಕ್ಕೆ ಬೆದರಿದರೇ ದೀದಿ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts