More

    ದೇಶದಲ್ಲಿ ಲಾಕ್​ಡೌನ್ ವಿಧಿಸದೇ ಹೋಗಿದ್ದರೆ ಈವರೆಗೆ ಸೋಂಕಿತರ ಸಂಖ್ಯೆ ಎಷ್ಟಿರುತ್ತಿತ್ತು ಗೊತ್ತಾ?

    ನವದೆಹಲಿ: ಕರೊನಾ ಹರಡುವಿಕೆ ತಡೆಯಲು ಲಾಕ್​ಡೌನ್​ ಒಂದೇ ಸರಿಯಾದ ಮದ್ದು. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಲಾಕ್​ಡೌನ್​ ಹೇರಿವೆ. ಒಂದು ವೇಳೆ ಭಾರತದಲ್ಲಿ ದಿಗ್ಬಂಧನ ವಿಧಿಸದೇ ಹೋಗಿದ್ದರೆ, ಈವರೆಗೂ ಕೋವಿಡ್​-19 ಸೋಂಕಿತರ ಸಂಖ್ಯೆ ಸುಮಾರು 2 ಲಕ್ಷ ಆಗುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ​

    ಸುದ್ದಿಗೋಷ್ಠಿ ವೇಳೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ಮಾತನಾಡಿ, ಲಾಕ್​ಡೌನ್​ ಮತ್ತು ನಿಯಂತ್ರಣ ಮಾನದಂಡಗಳು ಕರೊನಾ ವಿರುದ್ಧದ ಹೋರಾಟಕ್ಕೆ ತುಂಬಾ ಮುಖ್ಯ. ಒಂದು ವೇಳೆ ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದರೆ ಈ ಕ್ಷಣದವರೆಗೆ ಸೋಂಕಿತರ ಸಂಖ್ಯೆ 2 ಲಕ್ಷಗಳಾಗುತ್ತಿತ್ತು ಎಂದು ಹೇಳಿದರು.

    ಆರೋಗ್ಯ ಮೂಲ ಸೌಕರ್ಯಗಳ ಬಗ್ಗೆ ವಿವರಿಸಿದ ಅಗರ್ವಾಲ್​, ದೇಶಾದ್ಯಂತ ಕರೊನಾ ರೋಗಿಗಳಿಗೆ ಒಂದು ಲಕ್ಷ ಪ್ರತ್ಯೇಕ ಬೆಡ್​ಗಳು ಮತ್ತು 11,500 ಐಸಿಯು ಬೆಡ್​ಗಳನ್ನು ಕಾಯ್ದಿರಿಸಿಲಾಗಿದೆ. ಸರ್ಕಾರ ಪೂರ್ವಭಾವಿಯಾಗೇ ಕೋವಿಡ್​-19ಗೆ ಪ್ರತಿಕ್ರಿಯೆಯನ್ನು ನೀಡುತ್ತಿದೆ. ನಾವು ಶ್ರೇಣಿಕೃತ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ಕರೊನಾಗಾಗಿಯೇ ಸಮರ್ಪಿಸಲಾಗಿರುವ 586 ಆಸ್ಪತ್ರೆಗಳಿವೆ ಎಂದರು.

    ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 7447ಕ್ಕೆ ಏರಿದೆ. ಇದರಲ್ಲಿ 642 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 239 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1035 ಹೊಸ ಪ್ರಕರಣಗಳು ವರದಿಯಾಗಿದ್ದು, 40 ಮಂದಿ ಪ್ರಾಣತೆತ್ತಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಲಾಕ್​ಡೌನ್​ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ

    ಸಂಪೂರ್ಣ ಆನ್​ಲೈನ್​ ಪ್ರವೇಶ ಪ್ರಕ್ರಿಯೆಗೆ ದೆಹಲಿ ವಿಶ್ವವಿದ್ಯಾಲಯ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts