More

    ಬುದ್ಧಿ, ಭಾವಗಳ ಸಂಗಮವೇ ಕಾವ್ಯ

    ಅಥಣಿ: ಬುದ್ಧಿ, ಭಾವಗಳ ಸಂಗಮವೇ ಕಾವ್ಯ. ಭಾವನೆಗಳು ಹೆಪ್ಪುಗಟ್ಟಿದಾಗ ಮಾತ್ರ ಕಾವ್ಯ ಹುಟ್ಟುತ್ತವೆ ಎಂದು ಬೀದರ್ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಹೇಳಿದ್ದಾರೆ.

    ಇಲ್ಲಿಯ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಹಾಸ್ಯಲಹರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕವನ, ಕವಿತೆ ಹಾಗೂ ಕಾವ್ಯ ರಚನೆಗೆ ಯುವಜನಾಂಗ ಮುಂದಾಗಬೇಕು. ಪ್ರಚಲಿತ ವಿದ್ಯಮಾನ, ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಸರಾಂತ ಸಾಹಿತಿಗಳಾದ ದಿ.ದ.ರಾ.ಬೇಂದ್ರೆ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ನಿಸಾರಅಹಮ್ಮದ್ ಅವರು ತುಂಬಾ ಸೊಗಸಾಗಿ ರಚಿಸಿದ್ದಾರೆ ಎಂದರು.

    ರಾಯಬಾಗ ಸಾಹಿತಿ ಶಿವಾನಂದ ಬೆಳಕೂಡ ಮಾತನಾಡಿದರು. ನಿವೃತ್ತ ಶಿಕ್ಷಕ ಜಿ.ಡಿ.ಗುರುವ, ಎಂ.ಎನ್.ಚಿಂಚೋಳಿ ಹಾಗೂ ಪ್ರಾಚಾರ್ಯ ಬಿ.ಆರ್.ಕಂಟಿಕರ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

    ಮಂಡ್ಯದ ಕವಿಗಳಾದ ರೋಷನ ಚೋಪ್ರಾ, ರಾಜು ಕೊತ್ತತ್ತಿ, ಕೆ.ಪುರುಷೋತ್ತಮ ಅವರು ಕವನ ವಾಚನ ಮಾಡಿದರು. ದುಂಡಪ್ಪ ಪೂಜಾರಿ ಅವರಿಂದ ಹಾಸ್ಯಲಹರಿ ಕಾರ್ಯಕ್ರಮ ಜರುಗಿತು. ಅಪ್ಪಾಸಾಹೇಬ ಅಲಿಬಾದಿ, ಮಹಾಂತೇಶ ಉಕ್ಕಲಿ, ಶ್ರೀಶೈಲ ಸಂಕ, ಎಸ್.ಕೆ.ಹೊಳೆಪ್ಪನವರ, ಭಾರತಿ ಅಲಿಬಾದಿ, ರೋಹಿಣಿ ಯಾದವಾಡ, ಸಂಜಯ ಕುರಣಿ, ಪ್ರಭಾ ಬೋರಗಾಂವಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts