More

    ವಿಂಬಲ್ಡನ್‌ನಿಂದ ಕರೊನಾ ವಾರಿಯರ್ಸ್‌ಗೆ ಸ್ಟ್ರಾಬೆರಿ ಹಣ್ಣು!

    ಲಂಡನ್: ಕರೊನಾ ಹಾವಳಿ ಇಲ್ಲದಿರುತ್ತಿದ್ದರೆ ಈಗ ಪ್ರತಿಷ್ಠಿತ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ವಿಂಬಲ್ಡನ್ ನಡೆಯುತ್ತಿರಬೇಕಾಗಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ವರ್ಷದ ವಿಂಬಲ್ಡನ್ ಟೂರ್ನಿ ರದ್ದುಗೊಂಡಿದೆ. ಆದರೂ ವಿಂಬಲ್ಡನ್ ಟೆನಿಸ್ ಟೂರ್ನಿಯ ಸಂಘಟಕರು ಸುದ್ದಿಯಲ್ಲಿದ್ದು, ಲಂಡನ್‌ನಲ್ಲಿ ಆರೋಗ್ಯ ಸೇವೆಯಲ್ಲಿರುವವರಿಗೆ ಸ್ಟಾಬೆರಿ ಹಣ್ಣುಗಳನ್ನು ವಿತರಿಸಲು ನಿರ್ಧರಿಸಿದ್ದಾರೆ.

    ವಿಂಬಲ್ಡನ್ ಟೂರ್ನಿಯ ವೇಳೆ ಸ್ಟಾಬೆರಿ ಹಣ್ಣನ್ನು ಕ್ರೀಮ್‌ನ ಜತೆಗೆ ತಿನ್ನುವುದು ಟೆನಿಸ್ ಆಟಗಾರರು ಮತ್ತು ಅಭಿಮಾನಿಗಳಿಗೆ ಇಷ್ಟವಾದ ವಿಷಯ. ಆದರೆ ಈ ಬಾರಿ ಟೂರ್ನಿ ನಡೆಯದ ಕಾರಣ, ಸಂಘಟಕರು ಈಗಾಗಲೆ ಸ್ಟಾಕ್ ಇಟ್ಟುಕೊಂಡಿರುವ 26 ಸಾವಿರ ಸ್ಟಾಬೆರಿ ಹಣ್ಣುಗಳು ಹಾಳಾಗಬಾರದು ಎಂಬ ಕಾರಣಕ್ಕೆ ಅದನ್ನು ಕರೊನಾ ವಾರಿಯರ್ಸ್‌ಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ: ಟೆನಿಸ್ ತಾರೆ ಜೋಕೊವಿಕ್ ಮತ್ತು ಪತ್ನಿ ಜೆಲೆನಾಗೆ ಕರೊನಾ ನೆಗೆಟಿವ್​

    ಆರೋಗ್ಯ ಸೇವೆಯಲ್ಲಿರುವವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಸಣ್ಣ ಕೊಡುಗೆ ನೀಡುತ್ತಿದ್ದೇವೆ ಎಂದು ವಿಂಬಲ್ಡನ್ ಸಂಘಟಕರು ತಿಳಿಸಿದ್ದಾರೆ. 2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿ ರದ್ದುಗೊಂಡಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಕಳೆದ ಸೋಮವಾರ ಟೂರ್ನಿ ಆರಂಭಗೊಳ್ಳಬೇಕಾಗಿತ್ತು. ಬ್ರಿಟನ್‌ನಲ್ಲಿ ಸ್ಟ್ರಾಬೆರಿ ಹಣ್ಣು ಯತ್ತೇಚ್ಚವಾಗಿ ಬೆಳೆಯುವ ಸಮಯದಲ್ಲೇ ವಿಂಬಲ್ಡನ್ ನಡೆಯುವುದರಿಂದ ಅದಕ್ಕೂ, ಟೂರ್ನಿಗೂ ಆಪ್ತ ಸಂಬಂಧ ಬೆಳೆದುಬಂದಿದೆ.

    ಕ್ರೀಡಾ ಪತ್ರಕರ್ತರಿಗೆ ಕ್ರೀಡಾತಾರೆಯರಿಂದ ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts