More

    ಹುತಾತ್ಮ ಯೋಧನ ತಂದೆಯ ಅನನ್ಯ ರಾಷ್ಟ್ರಭಕ್ತಿಗೊಂದು ಸಲಾಮ್…!

    ನವದೆಹಲಿ:’ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಮಗನ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಮತ್ತೊಮ್ಮೆ ಅವಕಾಶ ಸಿಕ್ಕರೆ ನನ್ನ ಇಬ್ಬರೂ ಮೊಮ್ಮಕ್ಕಳನ್ನು ಮತ್ತೆ ದೇಶ ಸೇವೆ ಸಲ್ಲಿಸಲು ಸೇನೆಗೆ ಕಳುಹಿಸಲು ನಾನು ಬದ್ಧ’ ಇದು ಹುತಾತ್ಮರಾದ ಸಿಪಾಯ್ ಕುಂದನ್ ಕುಮಾರ್ ಅವರ ತಂದೆಯ ಕೆಚ್ಚೆದೆಯ ಮಾತು.

    ಇದನ್ನೂ ಓದಿ: ನಕಲಿ ಶಿಕ್ಷಕ ನೇಮಕಾತಿ ಪ್ರಕ್ರಿಯೆಗೆ ಕೊನೆಯೇ ಇಲ್ಲವೆ?

    ಪೂರ್ವ ಲಡಾಖ್‌ನಲ್ಲಿ ಚೀನಾ-ಭಾರತ ನಡುವೆ ಸೋಮವಾರ ನಡೆದ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರ ಪೈಕಿ ಸಿಪಾಯ್ ಕುಂದನ್ ಕುಮಾರ್ ಕೂಡ ಒಬ್ಬರು. “ನನ್ನ ಮಗ ರಾಷ್ಟ್ರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ. ನನಗೆ ಇಬ್ಬರು ಮೊಮ್ಮಕ್ಕಳಿದ್ದಾರೆ, ನಾನು ಅವರನ್ನೂ ಕಳುಹಿಸುತ್ತೇನೆ, ”ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.  ಟ್ವಿಟರ್​​ನಲ್ಲಿ ಈ ಸುದ್ದಿ ಹಂಚಿಕೆಯಾಗಿದ್ದು, ಈ ರಾಷ್ಟ್ರಭಕ್ತನ ವೀರನುಡಿಗಳಿಗೆ ಕಾಮೆಂಟ್​​ಗಳ ಮಹಾಪೂರವೇ ಹರಿದು ಬಂದಿದೆ.

    ಇದನ್ನೂ ಓದಿ: ನೀಟ್- ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಈ ವದಂತಿ ನಂಬಬೇಡಿ: ಎನ್​ಟಿಎ

    ಈ  ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಇಡೀ ರಾಷ್ಟ್ರವೇ ಕಂಬನಿ ಮಿಡಿಯುತ್ತಿದೆ. ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. “ನಮ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮಗೆ ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯ. ಭಾರತವು ಶಾಂತಿಯನ್ನು ಬಯಸುತ್ತದೆ ಆದರೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಉತ್ತರವನ್ನು ನೀಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಗಡಿಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಶುಕ್ರವಾರ ಸರ್ವಪಕ್ಷ ಸಭೆ ನಡೆಸಲಿದ್ದಾರೆ.

    ಕೋವಿಡ್-19: ನೈಜ ಕಾರ್ಯಕರ್ತರನ್ನು ಶಿಕ್ಷಿಸಬೇಡಿ ಎಂದು ದೆಹಲಿ ಸರ್ಕಾರಕ್ಕೆ ಸುಪ್ರೀಂ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts