More

    ಟ್ವಿಟರ್​ನ ಮೀರಿಸುತ್ತಾ ಭಾರತದ ‘ಕೂ’ಗು?

    ನವದೆಹಲಿ: ಕೂ ಟ್ವಿಟ್ಟರ್ ಅನ್ನು ಸೋಲಿಸುತ್ತಿದೆಯೇಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಅದೂ, ಕೂ ಆ್ಯಪ್​ಗೆ ಸಂಬಂಧಿಸಿದ ಖಾತೆಯನ್ನು ಟ್ವಿಟರ್​ ಸಸ್ಪೆಂಡ್​ ಮಾಡಿದ ನಂತರ ಈ ‘ಕೂ’ಗು ಜೋರಾಗಿದೆ. ಟ್ವಿಟರ್‌ಗೆ ಭಾರತದಲ್ಲಿ ಪರ್ಯಾಯವಾದ ಕೂ, 2020ರಿಂದಲೂ ಅಸ್ತಿತ್ವದಲ್ಲಿ ಇದೆ. ಅದಲ್ಲದೇ ಈ ಆ್ಯಪ್​ಅನ್ನು ಭಾರತದ ಸುತ್ತಮುತ್ತಲಿನ ದೇಶಗಳ ಜನರೂ ಬಳಸುತ್ತಿದ್ದಾರೆ. ದೇಶದಾದ್ಯಂತ ಇರುವ ವಿಭಿನ್ನ ಭಾಷಿಕರನ್ನು ಈ ಆ್ಯಪ್​ ಒಗ್ಗೂಡಿಸುತ್ತಿದೆ.

    ಇದನ್ನೂ ಓದಿ: ಭಾರತದ ‘ಕೂ’ ಆ್ಯಪ್​ ಈಗ ಎಲಾನ್​ ಮಸ್ಕ್​ನ ಹೊಸ ಟಾರ್ಗೆಟ್! ಶುರುವಾಗುತ್ತಾ ಹೊಸ ಟ್ರೇಡ್​ ವಾರ್​?

    $44 ಶತಕೋಟಿ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ ಕಳೆದ ವಾರ ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಈಗ ಕೂ ಅನೇಕ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಕೂ ಗಮನಾರ್ಹ ಬೆಳವಣಿಗೆಯನ್ನು ತೋರಿಸಿದ್ದು ಅದರ ಒಟ್ಟು ಡೌನ್‌ಲೋಡ್ ಸಂಖ್ಯೆ 50 ಮಿಲಿಯನ್ ತಲುಪಿದೆ. ಇದು ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಆ್ಯಪ್​ಗೆ ದೊಡ್ಡ ಗೆಲುವಾಗಿದೆ.

    ‘ಈಗ ವಿಶ್ವಾದ್ಯಂತ ಕೂ ಆ್ಯಪನ್ನು 50 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇನ್ನು ನಾವು 100 ಮಿಲಿಯನ್​ ಮೈಲುಗಲ್ಲನ್ನು ದಾಟಲು ನಾವು ತುಂಬಾ ಉತ್ಸುಕರಾಗಿದ್ದೇವೆ’ ಎಂಬುದು ಬಹುಭಾಷಾ ಸಾಮಾಜಿಕ ಜಾಲತಾಣ ಆಗಿರುವ ‘ಕೂ’ನ ಕೂಗು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts