More

    ಹೆಚ್ಚಲಿವೆ ರಸ್ತೆ ಅಪಘಾತ, ಜಲಕಂಟಕ

    ಮುಗಳಖೋಡ: ಭಕ್ತರ ಬಾಳಲ್ಲಿ ಸಮೃದ್ಧಿಯ ಮಳೆ, ಸಂತೃಪ್ತಿ ಬೆಳೆ, ಸಂತಸದ ಹೊಳೆ ಹರಿಯಲಿ ಎಂದು ಮುಗಳಖೋಡ – ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಶುಕ್ರವಾರ ಪುಷ್ಪವೃಷ್ಟಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಮುಂಬರುವ ದಿನಗಳಲ್ಲಿ ನಿಂದಕರ ಸಂಖ್ಯೆ ಅಧಿಕವಾಗಲಿದೆ. ಹಿತಶತ್ರುಗಳು ಮುಂದೆ ಬೆಣ್ಣೆಯಂತೆ ಮಾತನಾಡಿ, ಬೆನ್ನಿಗೆ ಚೂರಿ ಇರಿಯಲಿದ್ದಾರೆ. ರಸ್ತೆ ಅಪಘಾತಗಳು ಹೆಚ್ಚಾಗಲಿವೆ. ಜಲಕಂಟಕ ಸೂಚನೆಗಳು ಕಂಡುಬಂದಿವೆ ಎಂದು ಭವಿಷ್ಯ ನುಡಿದರು.

    ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿದರು. ಜಿಡಗಾ ಮಠದಲ್ಲಿ ಬಾಲ ರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ದೀಪಾಲಂಕಾರದಲ್ಲಿ 18 ಭಾರತೀಯ ಹಾಗೂ 18 ವಿದೇಶಿ ಭಾಷೆಯ ಅಕ್ಷರಗಳಲ್ಲಿ ಶ್ರೀರಾಮ ಎಂದು ಬರೆದದ್ದು ಹಾಗೂ ಶ್ರೀಮಠದಲ್ಲಿ ಅಜ್ಜನ ರೊಟ್ಟಿ ಬುತ್ತಿ ಜಾತ್ರೆಯಲ್ಲಿ ರಾಷ್ಟ್ರ ಧ್ವಜದ ವಿಶೇಷ ಛಾಯೆ ಮೂಡಿಸಿದನ್ನು ಪರಿಗಣಿಸಿ ಇಂಡಿಯಾ ಸ್ಟಾರ್ ವಲ್ಡರ್ ದಾಖಲೆಯ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ಶ್ರೀಗಳಿಗೆ ನೀಡಲಾಯಿತು.

    ಡಾ.ಮುರುಘರಾಜೇಂದ್ರ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀ ಯಲ್ಲಾಲಿಂಗ ಮಹಾರಾಜರ ಶಿಖರಕ್ಕೆ ಪುಷ್ಪವೃಷ್ಟಿ ನೆರವೇರಿತು. ಶ್ರೀಗಳ ಕಿರೀಟಧಾರಣೆ, ಪಾದಪೂಜೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದವು. ಮಾಜಿ ಶಾಸಕ ಪಿ.ರಾಜೀವ, ಎಂ.ಎಸ್.ಗೋಕಾಕ, ಅಣ್ಣಪ್ಪಗೌಡ ಪಾಟೀಲ, ದೀಪಕ ಅರ್ಕಿ, ರಮೇಶ ಖೇತಗೌಡರ, ರಮೇಶ ಯಡವಣ್ಣವರ, ಗೌಡಪ್ಪ ಖೇತಗೌಡರ, ಭೀಮಪ್ಪ ಬನಶಂಕರಿ, ಪರಗೌಡ ಖೇತಗೌಡರ, ಹಾಲಪ್ಪ ಶೇಗುಣಸಿ, ಬಸವರಾಜ ಜೋಪಾಟೆ, ಸಂತೋಷ ಯಡವಣ್ಣವರ ತರರಿದ್ದರು. ಸೋಮು ಹೊರಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts