More

    ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿಗೆ ಕಾರಣ ವಿವರಿಸಿದ ಕೆಎಲ್ ರಾಹುಲ್

    ಅಬುಧಾಬಿ: ಟಾಸ್ ಸೋಲು ನಮಗೆ ದೊಡ್ಡ ಹಿನ್ನಡೆಯಾಯಿತು. 2ನೇ ಇನಿಂಗ್ಸ್‌ನಲ್ಲಿ ಇಬ್ಬನಿಯಿಂದಾಗಿ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ಗ್ರಿಪ್ ಸಾಧಿಸುವುದು ಕಠಿಣವಾಯಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಜಸ್ಥಾನ ರಾಯಲ್ಸ್ ವಿರುದ್ಧ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಸೋತ ಬಗ್ಗೆ ಕಾರಣ ವಿವರಿಸಿದರು.

    ಕಿಂಗ್ಸ್ ತಂಡದ 186 ರನ್ ಸವಾಲಿಗೆ ಬೆನ್ ಸ್ಟೋಕ್ಸ್ (50) ರಾಯಲ್ಸ್‌ಗೆ ಸ್ಫೋಟಕ ಆರಂಭ ಒದಗಿಸಿದರು. ಪವರ್‌ಪ್ಲೇಯಲ್ಲೇ ಅರ್ಧಶತಕ ಪೂರೈಸಿದ ಸ್ಟೋಕ್ಸ್, ಕನ್ನಡಿಗ ರಾಬಿನ್ ಉತ್ತಪ್ಪ (30) ಜತೆಗೆ ಮೊದಲ ವಿಕೆಟ್‌ಗೆ 60 ರನ್ ಪೇರಿಸಿದರು. ಈ ಪೈಕಿ 50 ರನ್ ಸ್ಟೋಕ್ಸ್ ಅವರದೇ ಆಗಿತ್ತು. ಬಳಿಕ ಸಂಜು ಸ್ಯಾಮ್ಸನ್ (48), ನಾಯಕ ಸ್ಟೀವನ್ ಸ್ಮಿತ್ (31*) ಮತ್ತು ಜೋಸ್ ಬಟ್ಲರ್ (22*) ಉಪಯುಕ್ತ ಕೊಡುಗೆಯಿಂದ ರಾಯಲ್ಸ್, 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 186 ರನ್ ಪೇರಿಸಿ ಸತತ 2ನೇ ಜಯ ಸಾಧಿಸಿ ಪ್ಲೇಆಫ್​ ಆಸೆ ಜೀವಂತ ಉಳಿಸಿಕೊಂಡಿತು.

    ‘2ನೇ ಸರದಿಯಲ್ಲಿ ಇಬ್ಬನಿಯಿಂದಾಗಿ ಬೌಲರ್‌ಗಳ ಕೆಲಸ ಕಠಿಣವಾಗಿದ್ದರೆ, ಬ್ಯಾಟಿಂಗ್ ಸುಲಭವಾಗಿತ್ತು. ತಂಡದಲ್ಲಿನ ಇಬ್ಬರು ಲೆಗ್ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಚೆಂಡು ಒದ್ದೆಯಾದಾಗ ಅದನ್ನು ನಿಭಾಯಿಸುವ ಕಲೆಯನ್ನು ನಾವಿಲ್ಲಿ ಕರಗತ ಮಾಡಿಕೊಳ್ಳಬೇಕಾಗಿದೆ’ ಎಂದು ರಾಹುಲ್ 7 ವಿಕೆಟ್ ಸೋಲಿನ ಬಳಿಕ ನುಡಿದರು. ಈ ಸೋಲಿನ ನಡುವೆಯೂ ಕಿಂಗ್ಸ್ ಪ್ಲೇಆ್ ಆಸೆ ಜೀವಂತವಾಗಿದ್ದು, ಭಾನುವಾರ ಸಿಎಸ್‌ಕೆ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟ ನಡೆಸಲಿದೆ.

    ಪ್ಲೇಆಫ್​ ಹಂತಕ್ಕೇರಲು ತಂಡ ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕಾದ ಅಗತ್ಯವಿದೆ. ನಮ್ಮ ಸ್ಥಾನವಿನ್ನೂ ತೂಗುಯ್ಯಲೆಯಲ್ಲೇ ಇದೆ. ಆದರೆ ನಾವಿನ್ನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ನಾಯಕ ಸ್ಟೀವನ್ ಸ್ಮಿತ್ ಹೇಳಿದರು. ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಟವನ್ನು ಶ್ಲಾಘಿಸಿದ ಸ್ಮಿತ್, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಎಂದರು.

    ಕಿಂಗ್ಸ್ ಇಲೆವೆನ್ ವಿರುದ್ಧ ರಾಜಸ್ಥಾನಕ್ಕೆ ಇದು 12ನೇ ಜಯ. ತಂಡವೊಂದರ ವಿರುದ್ಧ ರಾಯಲ್ಸ್‌ಗೆ ಇದು ಗರಿಷ್ಠ ಗೆಲುವಾಗಿದೆ. ನಿಕೋಲಸ್ ಪೂರನ್ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಪೂರೈಸಿದರು. ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 99 ರನ್‌ಗೆ ಔಟಾದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ವಿರಾಟ್ ಕೊಹ್ಲಿ, ಪೃಥ್ವಿ ಷಾ ಮತ್ತು ಇಶಾನ್ ಕಿಶನ್ ಮೊದಲ ಮೂವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts