More

    ಬೌಲಿಂಗ್ ಮಾಡದಿದ್ದರೆ ಟಿ20 ವಿಶ್ವಕಪ್ ತಂಡದಿಂದ ಹೊರಬೀಳುವ ಭೀತಿಯಲ್ಲಿ ಹಾರ್ದಿಕ್ ಪಾಂಡ್ಯ

    ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ಗೆ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವ ಕಾರಣದಿಂದಾಗಿ ಇದೀಗ ಹೊರಬೀಳುವ ಅಪಾಯದಲ್ಲಿದ್ದಾರೆ. ಹಾರ್ದಿಕ್ ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡಲು ಫಿಟ್ ಆಗದಿದ್ದರೆ, ಅವರ ಬದಲಿಗೆ ಹೆಚ್ಚುವರಿ ವೇಗದ ಬೌಲರ್ ಆಗಿ ಶಾರ್ದೂಲ್ ಠಾಕೂರ್ ಅಥವಾ ದೀಪಕ್ ಚಹರ್ ಸ್ಥಾನ ಪಡೆಯುವ ನಿರೀಕ್ಷೆ ಇದೆ.

    ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡಲು ಬಿಸಿಸಿಐಗೆ ಅಕ್ಟೋಬರ್ 15ರವರೆಗೂ ಅವಕಾಶವಿದೆ. ಈ ಮುನ್ನ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 10 ಅಂತಿಮ ಗಡುವು ಎನ್ನಲಾಗಿದ್ದರೂ, ಟೂರ್ನಿಯ ಸೂಪರ್-12 ಹಂತದಲ್ಲಿ ಆಡುವ ತಂಡಗಳಿಗೆ ಬದಲಾವಣೆ ಮಾಡಿಕೊಳ್ಳಲು ಅಕ್ಟೋಬರ್ 15ರವರೆಗೂ ಅವಕಾಶವಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

    ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ ಬ್ಯಾಟರ್ ಆಗಿ ಆಡಿದ್ದರು. 2 ವರ್ಷಗಳ ಹಿಂದೆ ಬೆನ್ನುನೋವಿನ ಸಮಸ್ಯೆ ಎದುರಿಸಿದ ಬಳಿಕ 28 ವರ್ಷದ ಹಾರ್ದಿಕ್ ಬೌಲಿಂಗ್‌ನಿಂದ ಬಹುತೇಕ ದೂರ ಉಳಿದಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೂ ಕೇವಲ ಬ್ಯಾಟರ್ ಆಗಿ ಟೀಮ್ ಇಂಡಿಯಾ ಪರ ಆಡಿದ್ದ ಹಾರ್ದಿಕ್, ಏಕದಿನ ಸರಣಿಯಲ್ಲಷ್ಟೇ ಕೆಲ ಓವರ್ ಬೌಲಿಂಗ್ ಮಾಡಿದ್ದರು.

    ‘ಟೀಮ್ ಇಂಡಿಯಾದ 15ರ ಬಳಗದಲ್ಲಿ ಸದ್ಯ ಓರ್ವ ವೇಗದ ಬೌಲರ್ ಕೊರತೆ ಇದೆ. ಹೀಗಾಗಿ ಹಾರ್ದಿಕ್ ಬೌಲಿಂಗ್ ಮಾಡುವುದಿಲ್ಲ ಎಂದಾದರೆ, ಇತ್ತೀಚೆಗೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವ ಶಾರ್ದೂಲ್ ಅಥವಾ ದೀಪಕ್ ಅವರನ್ನು ಆಯ್ಕೆ ಸಮಿತಿ ಆರಿಸಬಹುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಚಾಹಲ್ ಸೇರ್ಪಡೆ ಅನುಮಾನ
    ಕಳೆದ 4 ವರ್ಷಗಳಿಂದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಎನಿಸಿದ್ದರೂ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸದೆ ನಿರಾಸೆ ಅನುಭವಿಸಿದ್ದ ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಬೌಲಿಂಗ್‌ನಿಂದ ಗಮನಸೆಳೆದಿದ್ದಾರೆ. ಆದರೂ ಟಿ20 ವಿಶ್ವಕಪ್ ತಂಡಕ್ಕೆ ಚಾಹಲ್ ಕೊನೇಕ್ಷಣದಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ರಿಸ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮೊಣಕಾಲಿನ ಸಮಸ್ಯೆ ಎದುರಿಸುತ್ತಿದ್ದು, ಅವರು ಅಲಭ್ಯರಾದರಷ್ಟೇ ಚಾಹಲ್‌ಗೆ ಅದೃಷ್ಟ ಒಲಿಯಬಹುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

    ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವತ್ತ ಆಸೀಸ್ ಮಾಜಿ ಆಲ್ರೌಂಡರ್ ಆಸಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts