More

    ಮಗ ಬಿಜೆಪಿ ಸೇರಿದರೆ ಏನ್ಮಾಡ್ತೀರಾ? ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಿಎಂ ದಿಗ್ವಿಜಯ್​ ಉತ್ತರವೇನು ಗೊತ್ತೆ?

    ಭೋಪಾಲ್​: ಮಧ್ಯಪ್ರದೇಶದಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಪುತ್ರ ಜೈವರ್ಧನ್ ಕಮಲ್​ನಾಥ ಸಂಪುಟದಲ್ಲಿ ಕಿರಿಯ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಇದೀಗ ಮಗನ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ ದಿಗ್ವಿಜಯ್​ ಸಿಂಗ್​. ಆತ ರಾಜಕೀಯಕ್ಕೆ ಬರುವುದನ್ನು ಬಯಸಿರಲಿಲ್ಲ. ಐದು ವರ್ಷಕ್ಕೊಮ್ಮೆ ಜನಾದೇಶ ಪಡೆದುಕೊಳ್ಳಬೇಕಾಗುತ್ತದೆ. ಜತೆಗೆ, ರಾಜಕೀಯದಿಂದಾಗಿ ನಮ್ಮ ಕುಟುಂಬವೇ ಮೊದಲ ಬಲಿಪಶುವಾಗುತ್ತದೆ ಎಂದು ಆತನಿಗೆ ಹೇಳಿದ್ದೆ ಎಂದರು.

    ಇದನ್ನೂ ಓದಿ; ಕರೊನಾ ಲಸಿಕೆ ತಯಾರಿಕೆಗೆ ರಷ್ಯಾ ಜತೆ ಡೀಲಿಗಿಳಿದ ಭಾರತೀಯ ಕಂಪನಿಗಳು; ಔಷಧ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವೇ ಹೆಚ್ಚುಗಾರಿಕೆ 

    ರಾಜಕೀಯ ರಂಗದಲ್ಲಿ ಯಾವುದು ಖಾಲಿ ಇರುವುದಿಲ್ಲ. ರಾಘೋಘರ್​ ಕ್ಷೇತ್ರದಿಂದ ನನ್ನ ಮಗ ಜೈವರ್ಧನ್​ ಸ್ಪರ್ಧಿಸದಿದ್ದರೆ ಬೇರೆ ಯಾರಾದರೂ ಸ್ಪರ್ಧಿಸುತ್ತಿದ್ದರು ಎಂಬುದು ಪುತ್ರ ವ್ಯಾಮೋಹದ ಬಗ್ಗೆ ಅವರ ಉತ್ತರ.

    ಕಮಲ್​ನಾಥ್​ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವನಾಗಿದ್ದ ಜೈವರ್ಧನ್​ ಒಂದು ವೇಳೆ ಮತ್ತೆ ಬಿಜೆಪಿ ಸೇರಿ ಮತ್ತೆ ಸಚಿವನಾಗುತ್ತೇನೆ ಎಂದು ಮಗನೇನಾದರೂ ನಿಮಗೆ ಹೇಳಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್​ ಸಿಂಗ್​. ಮಗನಾದರೂ ಆತನನ್ನು ನಾನು ಬಿಡುವುದಿಲ್ಲ. ನಂತರದ ಚುನಾವಣೆಯಲ್ಲಿ ಖಂಡಿತ ಆತನನ್ನು ಸೋಲಿಸುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…! 

    ಇನ್ನೊಂದೆಡೆ, ನಮ್ಮದು ತಂದೆ-ಮಗನಿಗಿಂತ ಹೆಚ್ಚಾಗಿ ಗುರು- ಶಿಷ್ಯರ ಸಂಬಂಧ ಎಂದು ಪುತ್ರ ಜೈವರ್ಧನ್​ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸವನ್ನು ಜೈವರ್ಧನ್​ ವ್ಯಕ್ತಪಡಿಸಿದ್ದಾರೆ.

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts