More

    ಜಿಂದಾಲ್​ಗೆ ಜಮೀನು ಮಾರಾಟ ಮಾಡ್ತಾರಾ ಮುಖ್ಯಮಂತ್ರಿ ಬಿಎಸ್​ವೈ?

    ಬೆಂಗಳೂರು: ಜಿಂದಾಲ್​ಗೆ ನೀಡಿರುವ ಭೂಮಿ ನವೀಕರಣ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಸರ್ಕಾರದ ಕೊನೇ ಅವಧಿಯಲ್ಲಿ ಜಿಂದಾಲ್ ಭೂಮಿ ನವೀಕರಣ ದೊಡ್ಡ ಚರ್ಚಾ ವಿಷಯವಾಗಿತ್ತು. ಗುತ್ತಿಗೆ ದರದ ವಿಚಾರದಲ್ಲಿ ಸರ್ಕಾರ ಟೀಕೆ ಎದುರಿಸಿತ್ತು. ನಂತರ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಈ ವಿಷಯ ಮುನ್ನೆಲೆಗೆ ಬರಲಿಲ್ಲ. ಇದೀಗ ಸರ್ಕಾರ ಅನಿವಾರ್ಯವಾಗಿ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿದೆ. ಮಾಹಿತಿಗಳ ಪ್ರಕಾರ, ಸಭೆಯಲ್ಲಿ ಈ ವಿಚಾರ ಚರ್ಚೆ ನಡೆದು ತೀರ್ಮಾನ ಕೈಗೊಳ್ಳುವ ವಿವೇಚನಾಧಿಕಾರವನ್ನು ಸಿಎಂಗೆ ನೀಡಲಾಗಿದೆ.

    ಜಿಂದಾಲ್​ಗೆ ಬಳ್ಳಾರಿಯಲ್ಲಿ ಗುತ್ತಿಗೆ ನೀಡಿದ್ದ 3667 ಎಕರೆ ಭೂಮಿಯನ್ನು ಮಾರಾಟ ಮಾಡಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆ ಸರ್ಕಾರ ತೀರ್ಮಾನ ಮಾಡದೆ ದಿನ ಕಳೆದಿತ್ತು. ಅಲ್ಲದೆ ಕಾಂಗ್ರೆಸ್​ನ ಹಿರಿಯ ಶಾಸಕರೇ ಭೂಮಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    2005ರಲ್ಲಿ ಸೌತ್​ವೆಸ್ಟ್ ಐರನ್ ಸ್ಟೀಲ್ ಕಂಪನಿಗೆ ತೋರಣಗಲ್​ನಲ್ಲಿ ಲೀಸ್ ಕಂ ಸೇಲ್ ಆಧಾರದಲ್ಲಿ ಪ್ರತಿ ಎಕರೆಗೆ 90 ಸಾವಿರ ರೂ.ನಂತೆ 2000 ಎಕರೆ ಭೂಮಿ ಹಂಚಿಕೆ ಮಾಡಲಾಗಿತ್ತು. ಬಳಿಕ ಈ ಜಾಗವನ್ನು ಆರು ವರ್ಷಗಳ ಅವಧಿಗೆ ಜೆಎಸ್​ಡಬ್ಲ್ಯೂ ಸ್ಟೀಲ್ ಕಂಪನಿಗೆ ವರ್ಗಾಯಿಸುವ ಪ್ರಸ್ತಾವನೆಗೆ ಸರ್ಕಾರ 2006ರ ಜೂನ್​ನಲ್ಲಿ ಒಪ್ಪಿಗೆ ನೀಡಿತು. ಕಂಪನಿಯ ವಿಸ್ತರಣಾ ಯೋಜನೆಗೆ ತೋರಣಗಲ್ ಬಳಿ 2000 ಎಕರೆ, ಮುಸಿನಾಯಕನಗಳ್ಳಿ ಮತ್ತು ಎರಬನಹಳ್ಳಿ ಗ್ರಾಮದಲ್ಲಿ 10 ವರ್ಷ ಅವಧಿಗೆ 1666 ಎಕರೆಯನ್ನು ಲೀಸ್ ಕಂಪ್ ಸೇಲ್ ಆಧಾರದಲ್ಲಿ 2007ರಲ್ಲಿ ಸರ್ಕಾರ ಜಮೀನು ನೀಡಿತ್ತು. ಆಗ ತಾತ್ಕಾಲಿಕವಾಗಿ ಎಕರೆಗೆ 1,22,199 ರೂ.ನಂತೆ ನಿಗದಿಪಡಿಸಲಾಗಿತ್ತು. ಸೇಲ್ ಕಂ ಡೀಡ್ ಅವಧಿ ಮುಕ್ತಾಯಗೊಂಡ ಬಳಿಕ ಕಂಪನಿ ಖರೀದಿಸಲು ಪ್ರಸ್ತಾವನೆ ಇಟ್ಟಿತು. ಈ ಕಾರಣಕ್ಕೆ ಸಂಪುಟ ಉಪ ಸಮಿತಿಯೂ ರಚನೆಗೊಂಡಿತ್ತು. ಆದರೆ ಹಳೆ ದರದ ಖರೀದಿಗೆ ಸರ್ಕಾರದೊಳಗೆ ಅಪಸ್ವರ ಎದ್ದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಆರಂಭದಲ್ಲಿ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿ, ಜಿಂದಾಲ್​ಗೆ ಭೂಮಿ ಪರಭಾರೆಗೆ ಅವಕಾಶ ಕೊಡಲ್ಲವೆಂದಿದ್ದರು. ಇದೀಗ ಅವರೇ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭ ಎದುರಾಗಿದೆ.

    ಭೂಮಿ ಮಾರಾಟ ಮಾಡಲು ಮುಂದಾದರೆ ಪ್ರತಿಪಕ್ಷದಿಂದ ವಿರೋಧ ಬರಲಿದೆ, ಒಪ್ಪಿಕೊಳ್ಳದಿದ್ದರೆ ಹೂಡಿಕೆದಾರರಲ್ಲಿ ಬೇರೆ ಸಂದೇಶ ಹೋಗಲಿದೆ.

    ಸುಧಾರಿತ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ: ಪ್ರಧಾನಿ ಮೋದಿ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts