More

    ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ: ರೈತನಾಯಕರು

    ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಹಸ್ರಾರು ರೈತರು ಇಂದು ಉತ್ತರಪ್ರದೇಶದ ಮುಜಫ್ಫರ್​ನಗರದಲ್ಲಿ ಕಿಸಾನ್​ ಮಹಾಪಂಚಾಯತ್​ ನಡೆಸಿದರು. ತಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ರೈತನಾಯಕರು, ಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜಿಪಿಯ ವಿರುದ್ಧ ಪ್ರಚಾರ ನಡೆಸುವುದಾಗಿ ಹೇಳಿದರು ಎಂದು ವರದಿಗಳು ತಿಳಿಸಿವೆ.

    “ಅವರು(ಕೇಂದ್ರ ಸರ್ಕಾರ) ಕೇವಲ ಬೆರಳೆಣಿಕೆಯಷ್ಟು ರೈತರು ಪ್ರತಿಭಟಿಸುತ್ತಿದ್ದಾರೆ ಎಂದರು. ಅವರು ನೋಡಲಿ ಎಷ್ಟು ಜನ ಎಂದು. ಸಂಸತ್ತಿನಲ್ಲಿ ಕುಳಿತಿರುವವರ ಕಿವಿಗೆ ಕೇಳಿಸುವಷ್ಟು ಜೋರಾಗಿ ನಮ್ಮ ದನಿಯನ್ನು ಏರಿಸೋಣ” ವೇದಿಕೆಯಲ್ಲಿ ವಿವಿಧ ಭಾಷಣಕಾರರು ಕರೆ ನೀಡಿದರು.

    ಇದನ್ನೂ ಓದಿ: ಚಿಕ್ಕಚೊಕ್ಕ ಗಣೇಶೋತ್ಸವ! ಆಯೋಜಕರು ಲಸಿಕೆ ಪಡೆದಿರಬೇಕು, ಜನಜಂಗುಳಿ ಸಲ್ಲ… ಇಲ್ಲಿವೆ, ಮಾರ್ಗಸೂಚಿಗಳು!

    “ಸರ್ಕಾರ ಅರ್ಥ ಮಾಡಿಕೊಂಡರೆ ಒಳ್ಳೆಯದು. ಈ ರೀತಿಯ ಸಭೆಗಳನ್ನು ದೇಶಾದ್ಯಂತ ನಡೆಸಲಿದ್ದೇವೆ. ರೈತರು, ಕಾರ್ಮಿಕರು ಮತ್ತು ಯುವಜನರಿಗೆ ಬದುಕಲು ಅವಕಾಶ ಬೇಕು. ದೇಶವನ್ನು ಮಾರಿಬಿಡಲು ನಾವು ಬಿಡುವುದಿಲ್ಲ” ಎಂದು ಸಂಯುಕ್ತ ಕಿಸಾನ್​ ಮೋರ್ಚಾದ ಮುಖ್ಯಸ್ಥ ರಾಕೇಶ್​ ತಿಕಾಯತ್​ ಹೇಳಿದರು.

    ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈ ಸಮ್ಮೇಳನದ ಸ್ಥಳದಲ್ಲಿ ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸ್ಥಳೀಯ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ.

    ಬಿಜೆಪಿ ಸಂಸದ ವರುಣ್​ ಗಾಂಧಿ ಅವರು ಈ ರೈತರ ಮಹಾಸಭೆಯ ದೃಶ್ಯಗಳನ್ನು ಟ್ವೀಟ್​ ಮಾಡಿ, “ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಸೇರಿದ್ದಾರೆ. ಅವರೆಲ್ಲಾ ನಮ್ಮವರೇ. ಅವರೊಂದಿಗೆ ಗೌರವಪೂರ್ವಕವಾಗಿ ಮಾತುಕತೆ ನಡೆಸಿ, ಅವರ ದುಃಖ ಅರಿತುಕೊಂಡು, ಸಹಮತಕ್ಕೆ ಬರಬೇಕಾಗಿದೆ” ಎಂದಿದ್ದಾರೆ. (ಏಜೆನ್ಸೀಸ್)

    VIDEO| ಕೆಸರುಗದ್ದೆಯಾಗಿರುವ ರಸ್ತೆ! ಮೋದಿಗೆ ಟ್ವೀಟ್​ ಮಾಡಿದ ಹಳ್ಳಿಗ!

    ಗಣಪತಿ ಬಪ್ಪ ಮೋರಯ! ರಾಜ್ಯದಲ್ಲಿ ಷರತ್ತುಬದ್ಧ ಗಣೇಶೋತ್ಸವಕ್ಕೆ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts