More

    ಮುಂದುವರಿದ ಕಾಡಾನೆಗಳ ದಾಂಧಲೆ

    ಸೋಮವಾರಪೇಟೆ: ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ ಗ್ರಾಮಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗಿನ ಜಾವ ಕಾಡಾನೆಗಳ ದಾಂಧಲೆ ಮುಂದುವರಿದಿದೆ.

    ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಹಾಗೂ ಗ್ರಾಮಗಳಿಗೆ ನುಸುಳದಂತೆ ಅರಣ್ಯ ಇಲಾಖೆ ಇದೀಗ 5.6 ಕೋಟಿ ರೂ. ವೆಚ್ಚದಲ್ಲಿ 4.5 ಕಿ.ಮೀ ರೈಲು ಕಂಬಿಗಳ ಬ್ಯಾರಿಕೇಡ್ ಅಳವಡಿಸಿ ಸಂಪೂರ್ಣ ಬಂದ್ ಮಾಡಿದ್ದರೂ ಕಾಡಾನೆಗಳು ಬ್ಯಾರಿಕೇಡ್ ಹಾಗೂ ಸಿಮೆಂಟ್ ಪಿಲ್ಲರ್‌ಗಳನ್ನು ಹಾಳುಗೆಡುವುತ್ತಿವೆ.

    ಈ ಹಿಂದೆ ಯಡವನಾಡು ಮೀಸಲು ಅರಣ್ಯದಿಂದ ಪ್ರತಿದಿನ ಸಂಜೆಯಾಗುತ್ತಿದ್ದಂತೆ ಕಾಜೂರು ಜಂಕ್ಷನ್ ಬಳಿ ಹೈವೇ ರಸ್ತೆಯನ್ನು ದಾಟಿ ಟಾಟಾ ಕಂಪನಿಯ ತೋಟಕ್ಕೆ ತೆರಳಿ ಅಲ್ಲಿರುವ ಕೆರೆಗಳಲ್ಲಿ ನೀರು ಕುಡಿದು, ಆಹಾರ ತಿಂದು ಬೆಳಗ್ಗಿನ ಜಾವ 6ಗಂಟೆಗೆ ಅದೇ ದಾರಿಯಲ್ಲಿ ಮೀಸಲು ಅರಣ್ಯ ಸೇರಿಕೊಳ್ಳುತ್ತಿದ್ದವು.
    ಟಾಟಾ ತೋಟದಲ್ಲಿ ಹತ್ತಾರು ಕೆರೆಗಳಿದ್ದು, ಹಲಸಿನಹಣ್ಣು ಸೇರಿದಂತೆ ಎಲ್ಲ ರೀತಿಯ ಆಹಾರ ತೋಟದೊಳಗೆ ಸಿಗುತ್ತಿತ್ತು. ಹಲವು ದಶಕಗಳಿಂದ ಈ ಜಾಗ ಕಾಡಾನೆ ಕಾರಿಡಾರ್ ಎಂದೇ ಕರೆಸಿಕೊಂಡಿದೆ. ಟಾಟಾ ಕಾಫಿ ಸಂಸ್ಥೆಯವರು ಕಾಡಾನೆಗಳು ಸಂಚರಿಸುವ ಜಾಗದಲ್ಲಿ ಬೇಲಿ ಹಾಕಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳು ಗ್ರಾಮೀಣ ಭಾಗದಲ್ಲಿ ಕೃಷಿ ಫಸಲು ನಷ್ಟಪಡಿಸುತ್ತಿರುವ ಹಿನ್ನೆಲೆಯಲ್ಲಿ ಹಾವಳಿ ತಡೆಗಟ್ಟಲು ರೈತರ ಒತ್ತಡ ಹೆಚ್ಚಾಗುತ್ತಿದ್ದಂತೆ, ಆನೆ ಕಂದಕ, ಸೋಲಾರ್ ತಂತಿಬೇಲಿ, ಹ್ಯಾಂಗಿಂಗ್ ಬೇಲಿ ನಿರ್ಮಾಣವಾಗಿದ್ದರೂ ಉಪಟಳ ಹತೋಟಿಗೆ ಬರಲಿಲ್ಲ. ಈಗ ರೈಲು ಕಂಬಿಗಳ ಬ್ಯಾರಿಕೇಡ್ ಪೂರ್ಣಗೊಳಿಸಿ ಬಂದ್ ಮಾಡಲಾಗಿತ್ತು. ಕಳೆದ ಮೂರ‌್ನಾಲ್ಕು ದಿನಗಳಿಂದ ಕಾಡಾನೆಗಳು ಬ್ಯಾರಿಕೇಡ್ ಕೆಡವಲು ಪ್ರಾರಂಭಿಸಿವೆ. ಜತೆಗೆ ಟಾಸ್ಕ್‌ಪೋರ್ಸ್ ತಂಡದ ವಾಹನಗಳು ಕಂಡಲ್ಲಿ ದಾಳಿ ಮಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts