More

    ಹೆಂಡತಿ ಓಡಿಹೋಗಲು ಸಹಾಯ ಮಾಡಿದರೆಂದು ತೊಂದರೆ! ರೌಡಿಶೀಟರ್​ ಭಟ್ಟಿ ಮಜರ್​ ಕೊಲೆ ರಹಸ್ಯ ಬಯಲು

    ಬೆಂಗಳೂರು : ಶನಿವಾರ ಬೆಳಿಗ್ಗೆ ನಡೆದಿದ್ದ ರೌಡಿಶೀಟರ್ ಮಜ್ಹರ್ ಖಾನ್​​ ಕೊಲೆ ಪ್ರಕರಣದಲ್ಲಿ ಡಿ.ಜೆ.ಹಳ್ಳಿ ಪೊಲೀಸರು​ ಒಂದೇ ಕುಟುಂಬಕ್ಕೆ ಸೇರಿದ ಮೂವರು ಮಹಿಳೆಯರು ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಒಬ್ಬ ಆರೋಪಿಯ ಹುಡುಕಾಟ ಮುಂದುವರಿದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದ್ದಾರೆ.

    ಮೊಹಮದ್​ ಶಾಬಾಜ್, ಶಕೀಬ್, ಅಲೀಂ, ಫೈರೋಜ್, ರೇಷ್ಮಾ, ಸಮೀನಾ ಮತ್ತು ಹಸೀನಾ ಬಂಧಿತ ಆರೋಪಿಗಳು. ಡಿ.ಜಿ.ಹಳ್ಳಿಯ ಶಿವರಾಜ್ ರಸ್ತೆ ನಿವಾಸಿಯಾಗಿದ್ದ 39 ವರ್ಷದ ಮಜ್ಹರ್​ ಖಾನ್​ ಅಲಿಯಾಸ್​ ಭಟ್ಟಿ ಮಜ್ಹರ್​​ನನ್ನು ಆಗಸ್ಟ್​ 7 ರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಸಾಯಿಸಿ, ಹೆಣವನ್ನು ರಸ್ತೆಯ ಮೇಲೆ ಬಿಸಾಡಿದ್ದರು. ನಂತರ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಶ್ರೀರಾಮುಲು ಮಿಸ್ಸಿಂಗ್‌! ಹುಟ್ಟುಹಬ್ಬವಿದ್ದರೂ ಅಲ್ಲೂ ಇಲ್ಲ, ಇಲ್ಲೂ ಇಲ್ಲ- ಎಲ್ಲಿ ಹೋದರು?

    ಮೃತ ಮಜ್ಹರ್ ಖಾನ್​ ಮತ್ತು ಆರೋಪಿಗಳು ಮುಂಚೆ ಸ್ನೇಹದಿಂದ ಇದ್ದರು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಮಜರ್​​​ನ ಎರಡನೇ ಹೆಂಡತಿ ಯಾಸ್ಮೀನ್​ ಎಂಬಾಕೆ ಆರೋಪಿ ಶಾಬಾಜ್​ನ ಸ್ನೇಹಿತ ಸಾಕೀಬ್​ ಬಂಗಾರ್​ ಎಂಬುವನೊಂದಿಗೆ ಓಡಿಹೋಗಿದ್ದಳು. ಹೆಂಡತಿ ಓಡಿಹೋಗಲು ಶಾಬಾಜ್​ ಮತ್ತು ಕುಟುಂಬ ಸಹಾಯ ಮಾಡಿದೆ ಎಂದು ಅನುಮಾನಗೊಂಡು ಮಜ್ಹರ್ ದ್ವೇಷ ಬೆಳೆಸಿಕೊಂಡು ತೊಂದರೆ ಕೊಡುತ್ತಿದ್ದ. ಮದ್ಯ ಕುಡಿದು ಅವರ ಮನೆಯ ಹತ್ತಿರ ಹೋಗಿ ಅವಾಚ್ಯವಾಗಿ ನಿಂದಿಸುತ್ತಿದ್ದ ಎನ್ನಲಾಗಿದೆ.

    ಘಟನೆಯ ದಿನ, ಶಾಬಾಜ್‌ನ ತಾಯಿಯಾದ ರೇಷ್ಮಾರ ಅಂಗಡಿಯ ಹತ್ತಿರ ಮೃತ ಮಜರ್ ಗುಟ್ಕಾ ಕೊಳ್ಳಲು ಹೋದಾಗ ನಶೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ರೇಷ್ಮಾ ಮನೆಗೆ ಹೋಗಿ ತಿಳಿಸುತ್ತಿರುವಂತೆ, ಮಜರ್ ಮನೆಯ ಮುಂದೆ ಬಂದು ಮತ್ತೆ ಅವಾಚ್ಯವಾಗಿ ನಿಂದಿಸಿದ. ಫೈರೋಜ್ ಮತ್ತು ಮುಸ್ತಾಕ್ ಮಜರ್​ನನ್ನು ತಡೆಯೋಕೆ ಹೋದರು. ಗಲಾಟೆ ಅತಿರೇಕಕ್ಕೆ ಹೋಗಿ ಚಾಕು ಮತ್ತು ಕಲ್ಲಿನಿಂದ ಹೊಡೆದು ಸಾಯಿಸಿ, ದೇಹವನ್ನು ಮನೆಯ ಮುಂದಿನ ರಸ್ತೆಯಲ್ಲಿ ಬಿಸಾಡಿ ಎಲ್ಲರೂ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಮನೆಗೆ ಬಂದ ಸ್ನೇಹಿತನ ಬಗ್ಗೆ ಎಚ್ಚರ… ಇಲ್ದಿದ್ರೆ ನಿಮಗೂ ಇದೆ ಗತಿ

    ಇಂದು ಬೆಳಿಗ್ಗೆ 7 ಗಂಟೆಗೆ ಆರೋಪಿಗಳು ಹೆಬ್ಬಾಳದ ಫ್ಲೈಓವರ್ ಕೆಳಗಿನ ಬಸ್ ನಿಲ್ದಾಣದಿಂದ ಬೇರೆ ಕಡೆಗೆ ತೆರಳುತ್ತಿದ್ದಾಗ ಡಿ.ಜೆ.ಹಳ್ಳಿ ಪೊಲೀಸರು 7 ಜನರನ್ನು ದಸ್ತಗಿರಿ ಮಾಡಿದ್ದಾರೆ. ಮೃತ ಮಜರ್​ನ ತಮ್ಮನ ದೂರಿನ ಮೇರೆಗೆ ಐಪಿಸಿ ಸೆಕ್ಷನ್​ 302 ಮತ್ತು ಆರ್ಮ್ಸ್​ ಆ್ಯಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮುಸ್ತಾಕ್​​ಗಾಗಿ ಪೊಲೀಸರ ಹುಡುಕಾಟ‌ ಮುಂದುವರಿದಿದೆ.

    ಸಿಎಂ ಮನೆ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ! ಕಾರಣ ಏನು ಗೊತ್ತೆ?

    ಸಿಎಂ ನಿವಾಸಕ್ಕೆ ಸಚಿವ ಆನಂದ್ ಸಿಂಗ್, ಶಾಸಕ ಸತೀಶ್ ರೆಡ್ಡಿ ದೌಡು! ಬೊಮ್ಮಾಯಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts