More

    VIDEO| ಆಕಸ್ಮಿಕವಾಗಿ ಸಿಸಿಟಿವಿ ವಿಡಿಯೋ ನೋಡ್ತಿದ್ದ ಮಹಿಳೆಗೆ ಎದುರಾಯ್ತು ಪತಿಯ ರಾಸಲೀಲೆ ದೃಶ್ಯ​!

    ಬೀಜಿಂಗ್​: ಸಿಸಿಟಿವಿ ವಿಡಿಯೋ ನೋಡುತ್ತಿದ್ದ ಮಹಿಳೆ ಆಕಸ್ಮಿಕವಾಗಿ ಪತಿಯ ಅಕ್ರಮ ಸಂಬಂಧ ತಿಳಿದು ಆಘಾತಕ್ಕೀಡಾದ ಘಟನೆ ಚೀನಾದಲ್ಲಿ ನಡೆದಿರುವುದು ರಿಯಾಲಿಟಿ ಶೋ ಒಂದರಲ್ಲಿ ಬೆಳಕಿಗೆ ಬಂದಿದೆ.

    ರಿಯಾಲಿಟಿ ಶೋನಲ್ಲಿ ಪೊಲೀಸ್​ ಅಧಿಕಾರಿಗಳು ಬಗೆಹರಿಸಿದ ಸಮಸ್ಯೆ ಕುರಿತು ಚರ್ಚೆಯಾಗುತ್ತದೆ. ಈ ವೇಳೆ ಮಹಿಳೆಯ ಕತೆಯು ಸಹ ಪ್ರಸ್ತಾಪವಾಗಿದೆ. ಅಂದಹಾಗೆ ಘಟನೆ ಕೇಂದ್ರ ಚೀನಾದ ಮೆಟ್ರೋಪೊಲಿಸ್​ ಛಾಂಗ್ಸಾದಲ್ಲಿನ ಕಮರ್ಸಿಯಲ್​ ಸ್ಟ್ರೀಟ್​ನಲ್ಲಿ ನಡೆದಿರುವುದಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

    ಸೆ. 21ರ ನಸುಕಿನ ಜಾವ ಎಲಿವೇಟರ್​ ಬಳಿ ಸಂಭ್ರಮಿಸುತ್ತಿದ್ದ ಗುಂಪಿನ ಕೆಲವರು ಜಗಳದಲ್ಲಿ ಗಾಯಗೊಂಡು ಪೊಲೀಸ್​ ಠಾಣೆಗೆ ದೂರು ನೀಡುತ್ತಾರೆ. ಎಲಿವೇಟರ್​ ಹೊರಗೆ ಕಾಯುತ್ತಿರುವಾಗ ಲಿಫ್ಟ್​ನಿಂದ ಜೋಡಿಯೊಂದು ಹೊರಬರುವುದನ್ನು ನೋಡಿದ ಗುಂಪಿನ ಸದಸ್ಯನೊಬ್ಬ ಏನೋ ಹೇಳುತ್ತಾನೆ. ಆತ ಹೇಳಿದ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ವ್ಯಕ್ತಿಯೊಬ್ಬ ಹಲ್ಲೆ ಮಾಡಲು ಮುಂದಾಗುತ್ತಾನೆ. ಬಳಿಕ ದೊಡ್ಡ ಗಲಾಟೆಯೇ ನಡೆಯುತ್ತದೆ ಎಂದು ಗಾಯಗೊಂಡ ಗುಂಪಿನ ಸದಸ್ಯರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಟ್ಟೆ ತರಿಸುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು

    ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ವಿಫಲವಾದಾಗ, ಆತನ ಪತ್ನಿಯನ್ನು ಪೊಲೀಸ್​ ಠಾಣೆಗೆ ಕರೆಸುತ್ತಾರೆ. ಬಳಿಕ ಪೊಲೀಸರು ಮಹಿಳೆಯ ಜತೆಗೂಡಿ ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸುತ್ತಾರೆ. ಆರಂಭದಲ್ಲಿ ಪತಿಗೆ ಯಾರೋ ಥಳಿಸುತ್ತಿದ್ದಾರೆ ಅಂದುಕೊಂಡ ಮಹಿಳೆಗೆ ನಂತರದಲ್ಲಿ ಪತಿಯು ಮತ್ತೊಂದು ಮಹಿಳೆಯೊಂದಿಗೆ ಮುದ್ದಾಡುವುದನ್ನು ನೋಡಿ ಶಾಕ್​ ಆಗುತ್ತಾಳೆ.

    ಪತಿ ಅಕ್ರಮ ಸಂಬಂಧದ ಬಗ್ಗೆ ಮೊದಲೇ ತಿಳಿದಿತ್ತಾ ಎಂದು ಪೊಲೀಸರು ಪ್ರಶ್ನಿಸಿದಾಗ ಗೊತ್ತಿರಲಿಲ್ಲ ಎಂದು ತಲೆಯಾಡಿಸುವ ಮಹಿಳೆ ವಿಡಿಯೋ ಶಾಕ್​ಗೆ ಮಾತೇ ಬರುವುದಿಲ್ಲ. ಆದರೆ, ಕೆಲವೊಮ್ಮೆ ರಾತ್ರಿ ಹೋಗುತ್ತಿದ್ದ ಪತಿ ಬೆಳಗ್ಗೆ ಬರುತ್ತಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

    ಇದೀಗ ಮಹಿಳೆಯ ನೋವಿನ ಕತೆ ಕೇಳಿರುವ ಅನೇಕ ನೆಟ್ಟಿಗರು ನೀವು ಡಿವೋರ್ಸ್​ ಪಡೆದುಕೊಳ್ಳುವುದೇ ಉತ್ತಮ ಎಂದು ಸಲಹೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts