More

    ಪುರುಷರಿಗೆ ಹೋಲಿಸಿದಲ್ಲಿ ಸ್ತ್ರೀಯರಲ್ಲೇಕೆ ಹೆಚ್ಚು ಮಾರಕವಲ್ಲ ಕರೊನಾ? ಸಂಶೋಧನೆಯಲ್ಲಿ ಬಯಲಾಯ್ತು ಕಾರಣ…!

    ನವದೆಹಲಿ: ಯಾವುದೇ ವಯಸ್ಸಿನವರಾದರೂ ಕೋವಿಡ್​ ಕಾಯಿಲೆ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಮಾರಕ ಯಾಕೆ ಎಂಬುದಕ್ಕೆ ತಜ್ಞರು ಉತ್ತರವೊಂದನ್ನು ಕಂಡುಕೊಂಡಿದ್ದಾರೆ.

    ಮಹಿಳೆಯರಲ್ಲಿ ಸ್ರವಿಸುವ ಸ್ತ್ರೀ ಹಾರ್ಮೋನ್​ ಈಸ್ಟ್ರೋಜನ್​ ಪಾತ್ರ ಇದರಲ್ಲಿ ಬಹುಮುಖ್ಯವಾಗಿದೆ. ಇದು ಹೃದಯದಲ್ಲಿರುವ ಆ್ಯಂಜಿಯೋ ಟೆನ್ಷನ್​- ಕನ್ವರ್ಟಿಂಗ್​ ಎನ್​ಜೈಮ್​ (ಏಸ್​2) ಎಂಬ ಕಿಣ್ವದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಮಹಿಳೆಯರಲ್ಲಿ ಕೋವಿಡ್​19 ಕಾಯಿಲೆಯ ಗಂಭೀರತೆಯನ್ನು ನಿರ್ಧರಿಸುತ್ತದ ಎಂದು ಅಮೆರಿಕದ ವೇಕ್ ಫಾರೆಸ್ಟ್​ ಬ್ಯಾಪ್ಟಿಸ್ಟ್​ ಮೆಡಿಕಲ್​ ಸೆಂಟರ್​ ವೈದ್ಯರು ಸಂಶೋಧಿಸಿದ್ದಾರೆ.

    ಕರೆಂಟ್​ ಹೈಪರ್​ಟೆನ್ಷನ್​ ನಿಯತಕಾಲಿಕದಲ್ಲಿ ಸ್ತ್ರೀ ಹಾರ್ಮೋನ್​ಗಳ ಚಟುವಟಿಕೆ ಕುರಿತಾದ ಈ ಸಂಶೋಧನಾ ವರದಿ ಪ್ರಕಟವಾಗಿದೆ.

    ಇದನ್ನೂ ಓದಿ: ಶವ ಹೂಳೋಕೆ ಜಾಗವಿರಲಿಲ್ಲ; ಶವಾಗಾರಗಳೂ ಸಾಲಲಿಲ್ಲ; ಆದರೂ, ಲಾಕ್​ಡೌನ್​ ಇಲ್ಲದೇ ಕರೊನಾಗೆ ತಡೆ..!

    ಕರೊನಾ ವೈರಸ್​ ಹೃದಯದ ಮೇಲೆ ದಾಳಿ ಮಾಡುತ್ತದೆ ಮತ್ತು ಸ್ತ್ರೀಯರಲ್ಲಿರುವ ಈಸ್ಟ್ರೋಜನ್​ ಹಾರ್ಮೋನ್​ ಅವರನ್ನು ಹೃದಯ ಸಂಬಂಧಿ ಕಾಯಿಲೆಯಿಂದ ರಕ್ಷಿಸುತ್ತದೆ. ಹೀಗಾಗಿ ಪುರುಷ ಹಾಗೂ ಸ್ತ್ರೀಯರಲ್ಲಿರುವ ಈ ಹಾರ್ಮೋನ್​ ವ್ಯತ್ಯಾಸವೇ ಕೋವಿಡ್​ ಗಂಭೀರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯ ನೇತೃತ್ವದ ವಹಿಸಿದ್ದ ಪ್ರಾಧ್ಯಾಪಕ ಲಿಯಾನ್​ ಗ್ರೊಬಾನ್​ ವಿಶ್ಲೇಷಿಸಿದ್ದಾರೆ.

    ಇದಲ್ಲದೇ ಹೃದಯ, ಕಿಡ್ನಿ, ಅಪಧಮನಿಗಳು ಹಾಗೂ ಕರುಳಿನಲ್ಲಿರುವ ಜೀವಕೋಶಗಳ ಪೊರೆಗೆ ಏಸ್​2 ಕಿಣ್ವಗಳು ಅಂಟಿಕೊಂಡಿರುತ್ತದೆ. ಜತೆಗೆ, ಇವುಗಳೇ ಕೋವಿಡ್​ ಸೋಂಕು ಪಸರಿಸಲು ಕಾರಣವಾಗುವ ಕಣಗಳನ್ನು ಸ್ವೀಕರಿಸುತ್ತವೆ ಮತ್ತು ಅಂಗಗಳಲ್ಲಿ ಸೇರಲು ಅವಕಾಶ ನೀಡುತ್ತವೆ.

    ಇದನ್ನೂ ಓದಿ: ಮೂರೇ ವಾರದಲ್ಲಿ ಬ್ರಿಟನ್​ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ

    ಆದರೆ, ಈಸ್ಟ್ರೋಜನ್​ ಹಾರ್ಮೋನ್​ ಸ್ರವಿಸುತ್ತಿದ್ದರೆ, ದೇಹದಲ್ಲಿ ಏಸ್​2 ಕಿಣ್ವದ ಪ್ರಮಾಣ ಕಡಿಮೆಯಾಗಿರುತ್ತದೆ. ಪರಿಣಾಮವಾಗಿ ಕೋವಿಡ್​ ಗಂಭೀರತೆ ಕೂಡ ಕಡಿಮೆಯಾಗಿರುತ್ತದೆ ಎಂಬುದು ಸಂಶೋಧಕರ ವಾದವಾಗಿದೆ.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts