More

    ಇಂಡಿಗೋದಲ್ಲಿ ಕನ್ನಡವೇಕಿಲ್ಲ?; ಪ್ರಶ್ನೆ ಎತ್ತಿದ ಐಎಎಸ್ ಅಧಿಕಾರಿ

    ಬೆಂಗಳೂರು: ಕನ್ನಡದಲ್ಲಿ ಸೇವೆ ನೀಡಲು ಹಿಂದೇಟು ಹಾಕಿರುವ ಇಂಡಿಗೋ ಏರ್‌ಲೈನ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ತೆರಳಿದ್ದು ಈ ವೇಳೆ ವಿಮಾನದೊಳಗೆ ಉದ್ಘೋಷಕರು ಕನ್ನಡ ಬಳಸದೇ ಇರುವ ಕುರಿತು ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಟ್ವೀಟ್ ಪ್ರಶ್ನೆ ಮಾಡಿರುವ ಅವರು, ಕರ್ನಾಟಕದಲ್ಲಿ ಇಂಡಿಗೊ ಹಾಗೂ ಇತರ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆಯಾದರೂ ಏನು? ಎಂದು ಪ್ರಶ್ನಿಸಿದರು.

    ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ ಏರ್‌ಲೈನ್ಸ್ ಕನ್ನಡದಲ್ಲಿ ಸೇವೆ ನೀಡುತ್ತವೆ. ಇಂಡಿಗೊ ಕ್ಯಾಬಿನ್ ಸಿಬ್ಬಂದಿ ಇಂಗ್ಲಿಷ್, ಹಿಂದಿ ಹಾಗೂ ಮಲಯಾಳಂ ಬಳಸುವುದಾದರೆ, ಕನ್ನಡದಲ್ಲಿ ಸೇವೆ ನೀಡದಿರುವುದು ಅಚ್ಚರಿ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತಿಗೆ ಅನೇಕರು ದನಿ ಗೂಡಿಸಿ, ಇಂಡಿಗೋವನ್ನು ಪ್ರಶ್ನೆ ಮಾಡಿದ್ದಾರೆ.

    ಸಿಂಗಾಪುರ ಏರ್‌ಲೈನ್‌ನಲ್ಲಿ ಆಹಾರದ ಮೆನು ಕೂಡ ಕನ್ನಡದಲ್ಲಿ ಇರುವುದನ್ನು ಚಿತ್ರಸಹಿತ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಗಳು ಆಯಾ ರಾಜ್ಯದವರನ್ನೇ ಸಿಬ್ಬಂದಿ ಆಗಿ ನೇಮಿಸಿಕೊಳ್ಳಲಿ, ಇಲ್ಲವಾದರೆ ಆ ತಂಡದಲ್ಲಿ ಒಬ್ಬರಾದರೂ ಆಯಾ ರಾಜ್ಯದವರು ಇರಲಿ. ಇದೇನು ಕಷ್ಟದ ಕೆಲಸವಲ್ಲ ಎಂದು ಕುಟುಕಿದ್ದಾರೆ. ಉದ್ಘೋಷಣೆ, ಮೆನು ಆಯಾ ರಾಜ್ಯದ ಭಾಷೆಯಲ್ಲೇ ಇರಬೇಕು ಎಂದು ಹೇಳಿರುವ ಅವರು ಕೇಂದ್ರ ವಿಮಾನ ಯಾನ ಇಲಾಖೆ ಹಾಗೂ ಇಂಡಿಗೋಗೂ ತಮ್ಮ ಅಭಿಪ್ರಾಯವನ್ನು ಟ್ಯಾಗಿಸಿದ್ದಾರೆ.

    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಪ್ರತಾಪಚಂದ್ರ ಶೆಟ್ಟಿ ಇಂಗಿತ

    ರಾಜ್ಯದಲ್ಲಿ ಮೂರು ದಿನ ಮಳೆ; ವಾಯುಭಾರ ಕುಸಿತ ಪರಿಣಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts